This is the title of the web page
This is the title of the web page

Please assign a menu to the primary menu location under menu

State

ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ


ಕುಷ್ಟಗಿ:-   ಪಟ್ಟಣದ ಶಾಖಾಪುರ ರಸ್ತೆಯಲ್ಲಿರುವ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ತಾಲುಕ ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಪಂಚಾಯತ ಕೊಪ್ಪಳ, ಪುರಸಭೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕುಷ್ಟಗಿ ಇವರ ಸಹಯೋಗದಲ್ಲಿ ಶ್ರೀ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯಲ್ಲಿ ಆಧ್ಯಕ್ಷತೆ ವಹಿಸಿ‌ಮಾತನಾಡಿದ ಶಾಸಕ ಅಮರೇಗೌಡ ಬಯ್ಯಾಪುರ
ಅಮರಶಿಲ್ಪಿ ಜಕಣಾಚಾರಿ ಶಿಲ್ಪಕಲೆಯಲ್ಲಿ ಜೀವಂತಿಕೆಯನ್ನು ಮಾಡಿರುವ ಕೆಲಸ ಸಾಮಾನ್ಯವಲ್ಲ. ಪ್ರಾಚೀನ ಕಾಲದಲ್ಲಿ ಯಾವ ತಂತ್ರಜ್ಞಾನ ಮಷಿನರಿಗಳು ಇರಲಿಲ್ಲ. ಅವರು ಮಾಡಿದ ಕೆಲಸ ಇಂದು ನಾವು ನೂತನ ತಂತ್ರಜ್ಞಾನ ಇದ್ದರೂ ಕೂಡ ಅಷ್ಟು ಸ್ಪಷ್ಟವಾಗಿ ಮಾಡಲು ಸಾಧ್ಯವಿಲ್ಲ. ಅವರ ಕರಕುಶಲತೆಗೆ ಸರಿಸಮಾನ ಕಲೆ ಇನ್ನೊಂದಿಲ್ಲ. ಅವರು ಕೆತ್ತನೆ ಮಾಡಿದ ಶಿಲ್ಪಗಳು ಕೇವಲ ಶಿಲ್ಪಕಲೆಗಲ್ಲ ಅವುಗಳಲ್ಲಿ ಭಾವನೆಗಳನ್ನು ತುಂಬಿದ್ದಾರೆ. ಯಾಂತ್ರಿಕವಾಗಿ ಇಂದಿನ ಬದುಕಿನಲ್ಲಿ ಕುಲಕಸುಬು ಮಾಡುವ ಸಮಾಜದವರಿಗೆ, ಸಮಾಜದಲ್ಲಿ ತುಳಿತಕ್ಕೊಳಗಾದವರಿಗೆ ಇನ್ನೂ ಹೆಚ್ಚಿನ ಸಹಕಾರ ನೀಡಲು ಸರಕಾರ ಮುಂದೆ ಬರಬೇಕಿದೆ. ಶಿಕ್ಷಣವೂ ಕೂಡ ಬಹುಮುಖ್ಯ ವಾಗಿದ್ದು, ವಿದ್ಯಾವಂತರಾಗಿ ಬದುಕನ್ನು ಕಟ್ಟಿಕೊಳ್ಳುವ ಕೆಲಸ ಆಗಬೇಕಿದೆ. ಯಾವುದೇ ಕೆಲಸವಾದರೂ ಸಹ ತುಚ್ಚವಾಗಿ ಕಾಣದೇ ಬದುಕು ಕಟ್ಟಿಕೊಳ್ಳಲು ನಮ್ಮ ಕೆಲಸವನ್ನು ಪ್ರೀತಿಸಬೇಕು. ಅಂದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ ಎಂದರು.

ಉಪನ್ಯಾಸ ನೀಡುತ್ತಾ ರಾಮಚಂದ್ರ ಬಡಿಗೇರ ಮಾತನಾಡಿ ನಮ್ಮ ಸಮಾಜಕ್ಕೆ ನಾವು ಸತ್ತ ಮೇಲೂ ಸಹ ನಮ್ಮ ಸೇವೆ ಉಳಿಯಬೇಕು. ಸಮಾಜದಲ್ಲಿ ಸ್ಮರಿಸುವ ಹಾಗೆ ಅಳಿಲು ಸೇವೆ ಸಲ್ಲಿಸಿ ಸಮಾಜಕ್ಕೆ ಕೊಡುಗೆ ನೀಡುವ ಹಾಗೆ‌ ಬದುಕಿದ್ದು ಅಮರಶಿಲ್ಪಿ ಜಕಣಾಚಾರಿ ಅದೂ ಕೂಡ ವಿಶ್ವಕರ್ಮ ಸಮುದಾಯದ ಹೆಮ್ಮೆ ಎಂದರು. ಅವರು ತಮ್ಮ ಕಲೆ ನೈಪುಣ್ಯತೆಯನ್ನು ಶಿಲ್ಪ ಕಲೆಗಳಲ್ಲಿ ಜೀವಂತಿಕೆಯನ್ನು ತುಂಬಿದಂತ ಅವಿಸ್ಮರಣೀಯ ವ್ಯಕ್ತಿ. ಇವರ ಬಗ್ಗೆ ಇಡೀ ಜಗತ್ತಿಗೆ, ನಾಡಿನ ಜನತೆಗೆ ಜಕಣಾಚಾರಿ ಅವರ ಬಗೆಗಿನ ಶಿಲ್ಪಕಲೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸವನ್ನು ಸರಕಾರ, ವಿಶ್ವವಿದ್ಯಾಲಯ ಗಳು, ಸಂಶೋಧಕರು ಮಾಡಬೇಕಿದೆ ಎಂದು ಸ್ಮರಿಸಿದರು.

ತಾಲೂಕು ಅಧ್ಯಕ್ಷ ಗುರಪ್ಪ ಬಡಿಗೇರ, ನಗರ ಘಟಕದ ಅಧ್ಯಕ್ಷ ಸಿದ್ದಪ್ಪ ಬಡಿಗೇರ ಆರ್ಸಿಸಿ, ಮಾಜಿ ಅಧ್ಯಕ್ಷ ಮಾನಪ್ಪ ಕಮ್ಮಾರ, ರಾಮಣ್ಣ ಬಡಿಗೇರ, ಲಕ್ಷ್ಮಣ ಬಡಿಗೇರ, ವೀರಣ್ಣ ಪತ್ತಾರ, ಉಮ್ಮಣ್ಣ ಬಡಿಗೇರ, ಶಿರಗುಂಪಿ ಗ್ರಾಮ ಪಂಚಾಯತ ಸದಸ್ಯ ಕಾಳೇಶ ಬಡಿಗೇರ, ಶರಣಪ್ಪ ಬಡಿಗೇರ, ಕೃಷ್ಣಪ್ಪ ಪತ್ತಾರ, ಶಾಶ್ವತಪ್ಪ ಬಡಿಗೇರ, ಅಯ್ಯಪ್ಪ ಬಡಿಗೇರ, ಅನೀಲ ಕಮ್ಮಾರ, ಮನೋಹರ ಬಡಿಗೇರ, ನಾಗರಾಜ ಬಡಿಗೇರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಶಿಕ್ಷಕ ಸಂಜಯ ಬಡಿಗೇರ ನಿರೂಪಿಸಿ ನಿರ್ವಹಿಸಿದರು.


Leave a Reply