This is the title of the web page
This is the title of the web page

Please assign a menu to the primary menu location under menu

State

ಏಕ ಚಕ್ರಾಧಿಪತಿಯಂತೆ ಅಮರೇಗೌಡ ಪಾಟೀಲ್ ಬಯ್ಯಾಪೂರ ವ್ಯಕ್ತಿತ್ವ- ದೇವಿಂದ್ರಪ್ಪ ಬಳೂಟಗಿ ಆರೋಪ


ಕುಷ್ಟಗಿ:-ಶಾಸಕ ಅಮರೇಗೌಡ ಪಾಟೀಲ್ ಬಯ್ಯಾಪೂರ ರವರು ನಾನೇ ನನ್ನ ಸ್ವಂತ ಬಲದಿಂದ ಗೆದ್ದಿದ್ದೇನೆ ಎಂದು ಹೇಳುವ ಮೂಲಕ ಏಕಚಕ್ರಾಧಿಪತಿ ರೀತಿ ವರ್ತಿಸುತ್ತಿದ್ದಾರೆ.ಒಬ್ಬ ವ್ಯಕ್ತಿ ಮನೆ ಕಟ್ಟಬೇಕಾದ್ರೆ ಪಿಲ್ಲರ್ ಬೇಕು ಆದ್ರೆ ಇವರಿಗೆ ಯಾವುದೇ ಪಿಲ್ಲರ್ ಇಲ್ಲದೆ ಮನೆ ಕಟ್ಟಿದ್ದೇನೆ ಎಂದು ಹೇಳುವ ಈ ಶಾಸಕರ ಹೇಳಿಕೆ ಕೇಳಿ ನನಗೆ ಹಾಸ್ಯಾಸ್ಪದ ಎನಿಸುತ್ತದೆ ಎಂದರು .

ಇವತ್ತು ಬಿಜೆಪಿ ದೇಶಕ್ಕೆ ಅನಿರ್ವಾಯ ವಾಗಿದೆ. ಹಾಗಾಗಿ ದೇಶ ಮೊದಲು ಆಮೇಲೆ ನಾವು ನೀವೆಲ್ಲರೂ ಎಂದರು. ಜೊತೆಗೆ ಬೇರೆ ದೇಶಗಳು ನಮ್ಮ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯಕ್ರಮಗಳನ್ನು ಮೆಚ್ಚಿ ರಾಷ್ಟ್ರ ಮಟ್ಟದಲ್ಲಿ ನಮ್ಮ ಭಾರತ ದೇಶವನ್ನು ಮೇಲ್ಮಟ್ಟದಲ್ಲಿ ಪರಿಚಯಿಸಿದ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ .ಕರೋನಾ ಸಂದರ್ಭದಲ್ಲಿ ಇಡೀ ದೇಶವೇ ನಲುಗಿ ಹೋಗಿತ್ತು ಅಂತ ಸಂದರ್ಭದಲ್ಲಿ ತೀವ್ರ ಗತಿಯಲ್ಲಿ ಲಸಿಕೆ ಕಂಡು ಹಿಡಿದು ನಮ್ಮ ದೇಶ ಸೇರಿದಂತೆ ಬೇರೆ ದೇಶಗಳಿಗೆ ಲಸಿಕೆ ನೀಡುವ ಮೂಲಕ ಉತ್ತಮ ಕಾರ್ಯ ಮಾಡಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ . ಇಂತಹ ಕೆಲಸಗಳನ್ನು ಮಾಡಿದ ಪ್ರಯುಕ್ತ ನನ್ನ ಮನಸ್ಸು ಪರಿವರ್ತನೆ ಯಾಗಲು ಕಾರಣ ಎಂದರು

ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆಯ ಮೂಲಕ ಕೇಂದ್ರ ಸರ್ಕಾರದಿಂದ ಆರು ಸಾವಿರ ರಾಜ್ಯ ಸರ್ಕಾರದಿಂದ ನಾಲ್ಕು ಸಾವಿರ ಸೇರಿ ಒಟ್ಟು ಹತ್ತು ಸಾವಿರ ಹಣ ಯಾವುದೇ ದಲ್ಲಾಳಿಗಳಿಲ್ಲದೇ ನೇರವಾಗಿ ರೈತರ ಖಾತಗೆ ಹಾಕುವ ಮೂಲಕ ರೈತರಿಗೆ ಆಸರೆಯಾಗಿದ್ದಾರೆ.

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಐದು ಲಕ್ಷದ ವರೆಗೆ ಬಡ್ಡಿರಹಿತ ಸಾಲವನ್ನು ನೀಡಿದೆ ಎಂದರು. ಮಳೆಯಿಂದ ಹಾನಿಗೊಳಗಾದ ರೈತರಿಗೆ ಭೀಮಾ ಯೋಜನೆಯಡಿಯಲ್ಲಿ ಇನ್ಸೂರೆನ್ಸ್ ಮೂಲಕ ರೈತರಿಗೆ ಪರಹಾರ ನೀಡುವ ಯೋಜನೆಯನ್ನು ರಾಜ್ಯ ಸರ್ಕಾರ ಮಾಡಿದೆ.

ರೈತ ಸದೃಢನಾದರೆ ದೇಶ ಸದೃಢ ಎಂಬಂತೆ ಬಿಜೆಪಿ ಪಕ್ಷ ರೈತರಿಗೆ ಚುನಾವಣೆಯಲ್ಲಿ ಘೋಷಣೆ ಮಾಡಿದ ಯೋಜನೆಗಳನ್ನು ಮತ್ತು ಬಿಜೆಪಿ ಅಧಿಕಾರ ಅವಧಿಯಲ್ಲಿ ಕಾರ್ಯಕ್ರಮಗಳನ್ನು ಕೊಟ್ಟಿರುವುದರಿಂದ ಬಿಜೆಪಿ ಸೇರ್ಪಡೆ ಯಾಗಲಿಕ್ಕೆ ಇದು ಕೂಡ ನನಗೆ ಕಾರಣವಾಗಿದೆ ಎಂದರು.

ನಾನು ಒಬ್ಬ ಗುತ್ತಿಗೆದಾರನಾಗಿದ್ದು ನನಗೂ ಅದರ ಅನುಭವ ಇದೆ .ನನಗೆ ಬೇಡವೆನಿಸಿದ ಸಂದರ್ಭದಲ್ಲಿ ನನ್ನ ಗುತ್ತಿಗೆದಾರಿಕೆಯನ್ನು ನಿಲ್ಲಿಸಿದೆನು. ಮಾಧ್ಯಮದವರು ಪ್ರಶ್ನೆಗೆ ಉತ್ತರಿಸಿದ ದೇವೇಂದ್ರಪ್ಪ ಬಳೂಟಗಿ ಅವರು ನಾನು ಶಾಸಕರಿಂದ ಯಾವುದೇ ಗುತ್ತಿಗೆಯನ್ನು ಪಡೆದಿಲ್ಲ, ಹಾಗೂ ಶಾಸಕರು ನನಗೆ ಆಸ್ತಿ ಬರೆದು ಕೊಟ್ಟಿಲ್ಲಾ ಮತ್ತು ನನ್ನ ಸಹೋದರ ಅಶೋಕ ಬಳೂಟಗಿ ಗುತ್ತಿಗೆದಾರನಿದ್ದು ಅವರಿಗೇನಾದ್ರೂ ಭೋಗಸ್ ಬಿಲ್ ಏನಾದ್ರೂ ಮಾಡಿಸಿ ಕೊಟ್ರಾ ಎಂದು ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದರು .ನನ್ನ ಸಹೋದರ ಸರ್ಕಾರದ ನಿಯಮಗಳ ಪ್ರಕಾರ ಕಾನೂನಾತ್ಮಕ ವಾಗಿ ಟೆಂಡರ್ ಮೂಲಕ ಕಾಮಗಾರಿಗೆ ಪಡೆದಿದ್ದಾರೆ ವಿನಹ: ಶಾಸಕರು ಕೊಟ್ಟ ಕೆಲಸಗಳಲ್ಲ ಎಂದು ಆರೋಪಿಸಿದರು .

ನಾನು ಒಬ್ಬ ಉತ್ತಮ ರಾಜಕಾರಣಿ ನನಗೂ ರಾಜಕೀಯ ಅನುಭವವಿದೆ. ನಾನೊಬ್ಬ ನೇರ ನುಡಿಯ ರಾಜಕಾರಣಿ ಎಂದರು. ಅವತ್ತಿನ ಕಾಂಗ್ರೆಸ್ ಆಡಳಿತಕ್ಕೂ ಮತ್ತು ಇವತ್ತಿನ ಕಾಂಗ್ರೆಸ್ ಆಡಳಿತಕ್ಕೂ ಬಹಳ ವ್ಯತ್ಯಾಸವಿದ್ದು ಇಂತಹ ಕಾಂಗ್ರೆಸ್ ದುಸ್ಥಿತಿಯಲ್ಲಿ ನಾವು ಪಕ್ಷದಲ್ಲಿ ಇರಬಾರದು ಎಂದು ಬೇಸತ್ತು ಬಿಜೆಪಿ ಸೇರಿದ್ದೇನೆ ಎಂದರು.

ಶಾಸಕ ಅಮರೇಗೌಡ ಬಯ್ಯಾಪುರ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಅಥವಾ ಗುಂಪು ಕಟ್ಟಿ ಕಾರ್ಯಕರ್ತರನ್ನು ಕರೆದು ಕೊಂಡು ಹೋಗುವ ಸಂಸ್ಕೃತಿ ಕಾಂಗ್ರೇಸ್ ಪಕ್ಷದಲ್ಲಿ ಇಲ್ಲಾ ಎಂದು ಆರೋಪಿಸಿದರು.

ನನ್ನ ರೈತ ಕುಟುಂಬದವರೊಂದಿಗೆ ಚರ್ಚಿಸಿ ಮತ್ತು ಹಿತೈಷಿಗಳ ಒಪ್ಪಿಗೆಯ ಮೇಲೆ ಬಿಜೆಪಿ ಸೇರ್ಪಡೆ ಯಾಗಿದ್ದೇನೆ.

ಹುದ್ದೆ ಕ್ಕಿಂತ ಪಕ್ಷ ಮುಖ್ಯ ನನಗೆ ಯಾವುದೇ ಹುದ್ದೆ ಬೇಡಾ ಪಕ್ಷ ಸಂಘಟನೆ ಮತ್ತು ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವುದೇ ನಮ್ಮ ಮೂಲ ಉದ್ದೇಶ ಎಂದರು .
ಒಟ್ಟಾರೆ ಕುಷ್ಟಗಿಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ರಾಜ್ಯದಲ್ಲಿ ಬಿಜೆಪಿ ಉತ್ತಮ ಆಡಳಿತಕ್ಕೆ ತರುವಲ್ಲಿ ಶ್ರಮಿಸುವುದಾಗಿ ಹೇಳಿದರು.

ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಜಿ ಕೆ ಹಿರೇಮಠ,ಪುರಸಭೆ ಸದಸ್ಯರಾದ ಕಲ್ಲೇಶ ತಾಳದ,ರಾಜೇಶ ಪತ್ತಾರ ,ಅಂಬಣ್ಣ ಬಜಂತ್ರಿ,ಬಸಣ್ಣ ಬುಡಕುಂಟಿ,ಜಯತೀರ್ಥ ಆಚಾರ್ ,ಚಂದ್ರು ವಡಿಗೇರಿ, ಉಮೇಶ ಯಾದವ,ಸೇರಿದಂತೆ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.


Leave a Reply