ಬೆಳಗಾವಿ: ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ಅವರ 132 ನೇ ಜಯಂತಿಯನ್ನು ಗುರುವಾರ ಎಮ್ ಎನ್ ಆರ್ ಎ, ಬಿ ಇಡ್ ಕಾಲೇಜಿನಲ್ಲಿ ಆಚರಿಸಲಾಯಿತು.
ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ಕಾರ್ಯಕ್ರಮದ ಪ್ರಾರಂಭದಲ್ಲಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಧ್ಯಾಪಕರಾದ ಡಾ. ಎಸ್ ವಿ ವಾಲಿಶೆಟ್ಟಿ ಅವರು, ಅವಮಾನನ ಅಪಮಾನ ಬಿಟ್ಟು ಮುನ್ನೇಡದ ಮಹಾನ್ ನಾಯಕ್ ಅಂಬೇಡ್ಕರ್ ಅವರು, ಅಂಬೇಡ್ಕರ್ ಅವರು ಬಡತನದಲ್ಲಿ ಹುಟ್ಟಿ ಛಲ ಬಿಡದೆ ಶಿಕ್ಷಣ ಪಡೆದು ಭಾರತೀಯರಿಗೆ ಶಿಕ್ಷಣದ ಮಹತ್ವದ ತಿಳಿಸಿದ್ದಾರೆ. 12 ನೇ ಶತಮಾನದ ಕ್ರಾಂತಿಯನ್ನು 19 ಹಾಗೂ 20 ನೇ ಶತಮಾನದಲ್ಲಿ ಮನೆ ಮನೆಗೆ ಮುಟ್ಟಿಸಿದ ದಿಮಂತ ನಾಯಕ ಅಂಬೇಡ್ಕರ್ ಅವರು,ನನ್ನ ಕುರಿತು ಜೈಕಾರ ಮಾಡದೆ ನಾನು ತೊರಿಸದ ಮಾರ್ಗದ ಕಡೆ ನಡೆಯಿರಿ ಎಂಬ ಕರೆ ನೀಡಿದ್ದಾರೆ. ಅವರ ತತ್ವ ಆದರ್ಶ ಪಾಲಿಸದರೆ ಸಾಕು ನಾವು ಮಾನವತಾವಾದದ ಆಧರದಲ್ಲಿ ನಡೆಯುತ್ತಿದ್ದೆ ಎಂಬಂತೆ ಆಗುತ್ತದೆ ಎಂದು ತಿಳಿಸಿದರು.
ಕಾರ್ಯಮ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಎನ್ ಜಿ ಬಟ್ಟಲ ಅವರು, ಆಧುನಿಕ ಯುಗದಲ್ಲಿ ಅಂಬೇಡ್ಕರ್ ಅವರು ಅಶ್ಯಪ್ರುಶ್ಯತೆ ಹೊಗಲಾಡಿಸಿದರು.ಇವತ್ತಿನ ನಮ್ಮ ಯುವ ಜನತೆ ಸಂವಿಧಾನವನ್ನು ಓದಿಕೊಂಡಿಲ್ಲ.ಸಂವಿಧಾನದ ಆಸಯಗಳಂತೆ ನಡೆದುಕೊಳ್ಳುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಎಲ್ಲರಿಗೂ ಸಂವಿಧಾನ ಸಮಾನ ಅವಕಾಶ ನೀಡಿದೆ. ಒಂದು ಜಾತಿ ಇಲ್ಲದೆ ಇನ್ನೊಂದ ಜಾತಿ ಬದಕಲು ಸಾಧ್ಯವಿಲ್ಲ. ಸಮನಾತೆಗೆ ನಮ್ಮ ದೇಶದಲ್ಲಿ ಅವಕಾಶ ಸಿಗಲಿಲ್ಲ. ಹಾಗಾಗಿ ಅಂಬೇಡ್ಕರ್ ಅವರು ಸಂವಿಧಾನ ಜಾರಿಗೆ ತಂದರು ಎಂದು ತಿಳಿಸಿದರು.
ಸಮಾಜದಲ್ಲಿ ಎಲ್ಲಾ ರಂಗದಲ್ಲಿ ಹೆಣ್ಣು ಮುಂದೆ ಇದ್ದಾಳೆ. ಹೆಣ್ಣು ಅನಿಷ್ಟ ಎಂದು ತಿಳಿದುಕೊಂಡಿದ ಸಮಯದಲ್ಲಿ ಅಂಬೇಡ್ಕರ್ ಅವರು ಹೆಣ್ಣಿಗೆ ಸಮಾನ ಅವಕಾಶ ಕಲ್ಪಿಸಿದ್ದಾರೆ. ಹಿಂದಿನ ಸಮಾಜದ ನೋಡಿದರೆ ಇಂದು ಹೆಣ್ಣು ಸಮಾಜದಲ್ಲಿ ತಲೆ ಎತ್ತಿ ಬದುಕುತ್ತಿದ್ದಾಳೆ.
ಹಿಂದುಳಿದ ಜನರಿಗೆ ಮಿಸಲಾತಿ ಇಲ್ಲ ಅಂದರೆ ಆ ಜನರು ಉನ್ನತ ಸ್ಥಾನಕ್ಕೆ ಏರಲು ಸಾದ್ಯ ಇಲ್ಲ. ಮಿಸಲಾತಿಯಿಂದ ಇಂದು ಎಲ್ಲಾ ವರ್ಗದವರು ಎಲ್ಲ ರಂಗದಲ್ಲೂ ಕಾಣಲು ಸಿಗುತ್ತಾತೆಅರೆ. ಯಾವುದೇ ಒಂದು ಮಾತುಗಳಿಗೆ ಒಳಗಾಗುವ ಮುಂಚೆ ಆ ವಿಷಯಗಳನ್ನು ತಿಳಿದುಕೊಳ್ಳಬೇಕು. ಸಾಮಜಿಕ ಅವಮಾನ, ಕಷ್ಟ ಬಡತನ ಮೀರಿ ನಮಗೆ ಅಂಬೇಡ್ಕರ್ ಅವರು ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ಅಂಬೇಡ್ಕರ್ ಅವರ ಜೀವನ ಮತ್ತು ಕೋಡುಗೆಗಳನ್ನು ನಮ್ಮ ಜೀವನದಲ್ಲಿ ಅಡವಳಿಸಿಕೊಳ್ಳಬೇಕು.ಯಾವುದೇ ಮತ ಅಥವಾ ಕೋಮ ಗಲಭೆಗಳಿಗೆ ಪ್ರತಿಕ್ರಿಯೆ ನೀಡಬಾರದು ಎಂದು ತಿಳಿಸಿದರು
ಈ ವೇಳೆ ಪ್ರಾಧ್ಯಾಪಕರಾದ ಬಿ.ಐ ಮಿಡಕನಟ್ಟಿ
ಎಸ್ ಜಿ ಚಿನಿವಾಲ್, ಎಸ್ ಎಸ್ ಹೆದ್ದುರಶೆಟ್ಟಿ, ಸುನಿಪ ಪಾನಿ ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.