ಹುಕ್ಕೇರಿ : ಆದರ್ಶ ಪುರುಷರ ಪ್ರತಿಮೆಗಳ ದರ್ಶನದಿಂದ ಜೀವನ ಪಾವನಗೊಳ್ಳುತ್ತದೆ. ಸಾಧಕರ ಪ್ರತಿಮೆಗಳು ಯುವ ಪೀಳಿಗೆಗೆ ಆದರ್ಶವಾಗಿ, ಪ್ರೇರಣೆಯಾಗಿ ಉಳಿಯಬೇಕು ಎಂದು ಅಂಬೇಡ್ಕರ ಜನಜಾಗೃತಿ ವೇದಿಕೆಯ ಜಿಲ್ಲಾ ಗೌರವ ಅಧ್ಯಕ್ಷ ಮಲ್ಲಿಕಾರ್ಜುನ ರಾಶಿಂಗೆ ಹೇಳಿದರು.
ಪಟ್ಟಣದ ಹಳೆ ತಹಸೀಲದಾರ ಕಚೇರಿ ಆವರಣದಲ್ಲಿ ಬುಧವಾರ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ ಪುತ್ಥಳಿ ಪ್ರತಿಷ್ಠಾಪನೆ ಕಾಮಗಾರಿ ವೀಕ್ಷಿಸಿ ಮಾತನಾಡಿದ ಅವರು, ಮಹಾನ್ ಪುರುಷರ ಪ್ರತಿಮೆಗಳನ್ನು ಸ್ಥಾಪಿಸುವ ಮೂಲಕ ಯುವ ಪೀಳಿಗೆಗೆ ಇತಿಹಾಸ, ಜೀವನಾದರ್ಶ, ಚರಿತ್ರೆ, ಪರಂಪರೆಯನ್ನು ಪರಿಚಯಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಹುಕ್ಕೇರಿಯಲ್ಲಿ ಅಂಬೇಡ್ಕರ ಪ್ರತಿಮೆ ಸ್ಥಾಪಿಸಬೇಕೆಂಬುದು ದಲಿತರು ಸೇರಿದಂತೆ ಎಲ್ಲ ಸಮುದಾಯಗಳ ಬಹುದಿನಗಳ ಬೇಡಿಕೆಯಾಗಿತ್ತು. ಇದನ್ನು ಮನಗಂಡ ಕತ್ತಿ ಕುಟುಂಬದವರು ಪ್ರತಿಮೆಗೆ ತಗುಲುವ ವೆಚ್ಚವನ್ನು ತಮ್ಮ ಒಡೆತನದ ವಿಶ್ವರಾಜ ಕತ್ತಿ ಪ್ರತಿಷ್ಠಾನದಿಂದ ಭರಿಸಲಿದ್ದು ಜನರ ಕನಸನ್ನು ನನಸು ಮಾಡಿದ್ದಾರೆ. ಇನ್ನುಳಿದಂತೆ ಸಂಘ-ಸಂಸ್ಥೆಗಳು, ದಾನಿಗಳಿಂದ ಪ್ರತಿಮೆ ಪ್ರತಿಷ್ಠಾಪನೆಗೆ ಬೇಕಾದ ಕಟ್ಟೆ ನಿರ್ಮಾಣ, ವಿದ್ಯುತ್ ದೀಪಾಲಂಕಾರ, ಉದ್ಯಾನವನ, ಆವರಣ ಗೋಡೆ ಸುಧಾರಿಸಲಾಗುವುದು ಎಂದು ಅವರು ಹೇಳಿದರು.
ಮಾಜಿ ಸಂಸದರೂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಮೇಶ ಕತ್ತಿ ಅಧ್ಯಕ್ಷತೆಯಲ್ಲಿ ಇದೇ ತಿಂಗಳು ಸಂವಿಧಾನ ಸಮರ್ಪಣಾ ದಿನವಾದ ಗಣರಾಜ್ಯೋತ್ಸವದಂದು ಈ ಪ್ರತಿಮೆ ಪ್ರತಿಷ್ಠಾಪನಾ ಸಮಾರಂಭವನ್ನು ಅದ್ದೂರಿ ಹಾಗೂ ಐತಿಹಾಸಿಕವಾಗಿ ಆಚರಿಸಲಾಗುವುದು. ಬೌದ್ಧ ಧರ್ಮದ ಗುರುಗಳು, ಸಮಾಜದ ಮುಖಂಡರು ಭಾಗವಹಿಸಲಿದ್ದು ಇಡೀ ಪಟ್ಟಣವನ್ನು ನೀಲಿಮಯಗೊಳಿಸಲಾಗುವುದು. ಸಹಸ್ರಾರು ಜನ ಸೇರುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಇದೇ ವೇಳೆ ಕೊಡುಗೈ ದಾನಿ ಕೆ.ವೆಂಕಟೇಶ ಅವರು ೫೨ ಸಾವಿರ ರೂ,ಗಳ ನಗದು ದೇಣಿಗೆಯಾಗಿ ಕೊಡಮಾಡಿದರು. ಇದಕ್ಕೂ ಮೊದಲು ಎಸ್ಸಿಎಸ್ಟಿ ದೌರ್ಜನ್ಯ ನಿಯಂತ್ರಣ ಜಿಲ್ಲಾ ಸಮಿತಿ ಸದಸ್ಯ ಸುರೇಶ ತಳವಾರ ೫೧ ಸಾವಿರ, ವಿಭಾಗೀಯ ಸದಸ್ಯ ರಮೇಶ ಹುಂಜಿ ೨೫ ಸಾವಿರ ಹೀಗೆ ವಿವಿಧ ಮುಖಂಡರು ಪ್ರತಿಮೆ ಪ್ರತಿಷ್ಠಾಪನೆಗೆ ನೆರವಿನ ಹಸ್ತ ಚಾಚಿದ್ದಾರೆ.
ವೇದಿಕೆಯ ಜಿಲ್ಲಾ ಅಧ್ಯಕ್ಷ ದಿಲೀಪ ಹೊಸಮನಿ, ಮುಖಂಡರಾದ ಕೆ.ವೆಂಕಟೇಶ್, ಲಕ್ಷö್ಮಣ ಹೂಲಿ, ಶ್ರೀನಿವಾಸ ವ್ಯಾಪಾರಿ, ಕೆಂಪಣ್ಣಾ ಶಿರಹಟ್ಟಿ, ಮಂಜು ಪಡದಾರ, ರಾಜು ಮೂಥಾ, ಬಸವರಾಜ ಖಾತೇದಾರ, ಚಿದಾನಂದ ಹಿರೆಕೆಂಚನ್ನವರ, ಮಲ್ಲು ಕುರಣಿ, ಶಿವು ದೊಡಮನಿ, ಕಿರಣ ಕೋಳಿ, ರೇಖಾ ಬಂಗಾರಿ, ಆರತಿ ಕಾಂಬಳೆ, ಶಾಂತಾ ಹೆಳವಿ ಮತ್ತಿತರರು ಉಪಸ್ಥಿತರಿದ್ದರು.
Gadi Kannadiga > Local News > ಪ್ರತಿಮೆಗಳು ಯುವ ಪೀಳಿಗೆಗೆ ಪ್ರೇರಣೆಯಾಗಲಿ ಅಂಬೇಡ್ಕರ ಪುತ್ಥಳಿ ಪ್ರತಿಷ್ಠಾಪನೆಗೆ ದಾನಿಗಳ ನೆರವಿನ ಮಹಾಪುರ
ಪ್ರತಿಮೆಗಳು ಯುವ ಪೀಳಿಗೆಗೆ ಪ್ರೇರಣೆಯಾಗಲಿ ಅಂಬೇಡ್ಕರ ಪುತ್ಥಳಿ ಪ್ರತಿಷ್ಠಾಪನೆಗೆ ದಾನಿಗಳ ನೆರವಿನ ಮಹಾಪುರ
Suresh11/01/2023
posted on
