ಬೆಳಗಾವಿ : ಕರ್ನಾಟಕ ಲಿಂಗಾಯತ ಎಜ್ಯುಕೇಷನ್ ಸೊಸೈಟಿಯ ಮೂಲಕ ಶಿಕ್ಷಣ, ವೈದ್ಯಕೀಯ ಮತ್ತು ಇನ್ನಿತರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ದೇಶ ಏಳ್ಗೆಗೆ ಪ್ರಮುಖ ಪಾತ್ರ ವಹಿಸಿದ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆಯವರ ೭೫ನೇ ವರ್ಷದ ಜನ್ಮದಿನದ ನಿಮಿತ್ಯ ಬೆಳಗಾವಿಯಲ್ಲಿ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕೆಎಲ್ಇ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ್ ಕೋರೆರವರ ೭೫ನೇ ಹುಟ್ಟುಹಬ್ಬದ ಹಿನ್ನೆಲೆ ಬೆಳಗಾವಿಯಲ್ಲಿ ಮಹಾನ್ ಗಣ್ಯಾತಿ ಗಣ್ಯರ ದಂಡು ಆಗಮಿಸಿದೆ. ಬೆಳಗಾವಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಈ ಅಮೃತ ಮಹೋತ್ಸವ ಕಾರ್ಯಕ್ರಮ ಹಿನ್ನೆಲೆ ಪಕ್ಷಾತೀತವಾಗಿ ರಾಜಕೀಯ ನಾಯಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರದಾನ, ಸಂಸದ ಪ್ರಹ್ಲಾದ ಜೋಶಿ, ಸಿಎಂ ಬಸವರಾಜ ಬೊಮ್ಮಾಯಿ, ಗೋವಾ ಸಿಎಂ ಪ್ರಮೋದ್ ಸಾವಂತ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸಚಿವರಾದ ಗೋವಿಂದ್ ಕಾರಜೋಳ, ಬಿ.ಎನ್.ನಾಗೇಶ, ಬೈರತಿ ಸುರೇಶ, ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ, ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ.ದೇಶಪಾಂಡೆ, ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ವಿಧಾನ ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಸೇರಿ ಜಿಲ್ಲೆಯ ಶಾಸಕರು, ಮುಖಂಡರು ಭಾಗಿಯಾಗಿದ್ದಾರೆ.ಲಕ್ಷಾಂತರ ಸಂಖ್ಯೆಯಲ್ಲಿ ನೆರೆದ ಜನ ಹಾರೈಸಿದರು.
ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರು ನಿಜವಾದ ಸತ್ಪರುಷರೆಂದರೇ, ಮಾತು, ಮನಸ್ಸು ಮತ್ತು ಕೃತಿಯಲ್ಲಿ ಒಂದೇ ಆಗಿರುವವರು. ಡಾ. ಪ್ರಭಾಕರ ಕೋರೆ ಅವರು ಇದಕ್ಕೆ ಉದಾಹರಣೆಯಾಗಿದ್ದಾರೆ ಎಂದರು. ಕೆಎಲ್ಇ ಸಂಸ್ಥೆಯ ಮೂಲಕ ಎಲ್ಲ ವರ್ಗದ ಏಳ್ಗೆಯನ್ನು ಪ್ರಭಾಕರ ಕೋರೆ ಮಾಡಿದ್ದಾರೆ. ದೇಶ ವಿದೇಶದಲ್ಲಿಯೂ ಕೆಎಲ್ಇ ಸಂಸ್ಥೆ ತನ್ನ ಅಜಾನುಬಾಹುವನ್ನು ಚಾಚುತ್ತಿದೆ. ಅಲ್ಲದೇ ಅವರ ಒಡನಾಟದ ಕುರಿತು ತಮ್ಮ ಅನುಭವವನ್ನು ಹಂಚಿಕೊAಡರು.ಕೇAದ್ರ ಸರ್ಕಾರದ ಶಿಕ್ಷಣ ಸಚಿವ ಧಮೇಂದ್ರ ಪ್ರದಾನ ಅವರು ಕೋರೆ ಅವರು ಓರ್ವ ಜೀವಂತ ವಿಶ್ವವಿದ್ಯಾಲಯವಾಗಿದೆ. ೪ ದಶಕಗಳಿಂದ ಕೆಎಲ್ಇಯ ಮೂಲಕ ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕೆಎಲ್ಇಯ ಹೆಸರನ್ನು ಜಗತ್ಪ್ರಸಿದ್ಧಗೊಳಿಸಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ ಈಗ ರಚಿಸಲಾಗಿದೆ. ಆದರೇ ೧೦೦೦ ವರ್ಷಗಳ ಮೊದಲೇ ಈ ನೀತಿಗಳು ಅದರಲ್ಲಿ ಇದ್ದವು.ಗೋವಾ ಸಿಎಂ ಪ್ರಮೋದ ಸಾವಂತ್ ಅವರು ಕೆಎಲ್ಇ ಸಂಸ್ಥೆಯೂ ಶಿಕ್ಷಣ ಸಂಸ್ಥೆಯೂ ಸಮಾಜದಲ್ಲಿ ಹೆಸರುವಾಸಿಯಾಗಿ ಈಗ ಪ್ರತಿಯೊಂದು ಕ್ಷೇತ್ರದಲ್ಲಿಯೂ ಅಗ್ರಸರವಾಗಿದೆ. ಪಿಎಂ ಮೋದಿ ಅವರ ನವಭಾರತದ ಕನಸನ್ನು ಕೆಎಲ್ಇ ಸಂಸ್ಥೆಯ ಮೂಲಕ ಡಾ. ಪ್ರಭಾಕರ ಕೋರೆ ನನಸು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿಯೂ ಕೆಎಲ್ಇ ಸಂಸ್ಥೆ ಇನ್ನಷ್ಟು ಹೆಸರುಗಳಿಸಲಿ ಎಂದು ಹಾರೈಸಿದರು.
ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಡಾ.ಪ್ರಭಾಕರ ಕೋರೆ ಅವರ ಅಧಿಕಾರವಧಿ ಸುವರ್ಣಾಕ್ಷರಗಳಲ್ಲಿ ಬರೆಯಬೇಕು. ಅವರು ಕೇವಲ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರು ಅಲ್ಲ. ಸಮಾಜದ ಏಳ್ಗೆಗೆ ಶ್ರಮಿಸುವವರು. ಎಲ್ಲ ಕ್ಷೇತ್ರದಲ್ಲೂ ಕೆಎಲ್ಇ ಸಂಸ್ಥೆಯ ಮೂಲಕ ಅವರು ಎಲ್ಲ ಕ್ಷೇತ್ರದಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಈ ಸೇವೆ ಅಪ್ರತಿಮ. ದೇವರು ಅವರಿಗೆ ಇನ್ನಷ್ಟು ಸೇವೆಸಲ್ಲಿಸಲು ಆರ್ಯುರಾರೋಗ್ಯ ನೀಡಲಿ ಎಂದು ಹಾರೈಸಿದರು.ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿ ಎಲ್ಲ ರೀತಿಯ ಸವಾಲುಗಳನ್ನು ಮೆಟ್ಟಿ ನಿಂತು ಕೆಎಲ್ಇ ಸಂಸ್ಥೆಯನ್ನು ಬೆಳೆಸುವಲ್ಲಿ ಡಾ. ಪ್ರಭಾಕರ ಕೋರೆ ಅವರು ಅಗ್ರಗಣ್ಯ ಸೇವೆ ಸಲ್ಲಿಸಿದ್ದಾರೆ. ತಮ್ಮ ಬುದ್ಧಿ ಶಕ್ತಿಯಿಂದ ಸರ್ವ ಸ್ವತಂತ್ರ ಸಂಸ್ಥೆಯಾಗಿ ಕೆಎಲ್ಇಯನ್ನು ಬೆಳೆಸಿದ್ದಾರೆ. ಈ ಸಂಸ್ಥೆಯನ್ನು ಮುನ್ನೆಡಲು ಎಷ್ಟು ಶ್ರಮಪಟ್ಟುದ್ದಾರೋ ಅಷ್ಟೇ ಶ್ರಮವನ್ನು ರಾಜಕೀಯ ಪ್ರತಿನಿಧಿಯಾಗಿ ಸೇವೆ ಸಲ್ಲಿಸಲು ಶ್ರಮಪಟ್ಟಿದ್ದಾರೆ ಎಂದು ಶ್ಲಾಘಿಸಿದರು.ಈ ವೇಳೆ ವಿವಿಧ ಗಣ್ಯರು ಉಪಸ್ಥಿತರಿದ್ಧರು. ಸುಮಾರು ೧ ಲಕ್ಷಕ್ಕೂ ಅಧಿಕ ಜನರು ಇದರಲ್ಲಿ ಭಾಗಿಯಾಗಿದ್ದರು. ಇವರೆಲ್ಲರಿಗೂ ಊಟದ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು.