This is the title of the web page
This is the title of the web page

Please assign a menu to the primary menu location under menu

Local News

ರಕ್ತದಾನ ಶಿಬಿರದ ಮೂಲಕ ಅಮೃತ ಮಹೋತ್ಸವ ಆಚರಣೆ: ಅಭಯ ಆದಿಮನಿ


ಬೆಳಗಾವಿ: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಗತಿಸಿದ ಸಂದರ್ಭದಲ್ಲಿ ದೇಶಾದ್ಯಂತ ಅಜಾದಿ ಕಾ ಅಮೃತ ಮಹೋತ್ಸವ ಆಚರಣೆ ಮಾಡಲಾಗುತ್ತಿದ್ದು. ಈ ಹಿನ್ನೆಲೆ ಜೈನ ಇಂಟರ್‌ನ್ಯಾಷನಲ್ ಟ್ರೆಡ್ ಆರ್ಗನೈಝೇಶನ ಜಿತೋ ಸಂಸ್ಥೆ ಹಾಗೂ ಉಪ ಔಷಧ ನಿಯಂತ್ರಕರ ಪ್ರಾದೇಶಿಕ ಕಚೇರಿ ಬೆಳಗಾವಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆ.15 ರಂದು ಬೆಳಗಾವಿಯ ಮಹಾವೀರ ಭವನದಲ್ಲಿ ಬೃಹತ್ತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿತೋ ಸಂಸ್ಥೆಯ ರಕ್ತದಾನ ಶಿಬಿರ ಸಂಯೋಜಕ ಅಭಯ ಆದಿಮನಿ ಅವರು ಹೇಳಿದರು.

ನಗರದ ಖಾಸಗಿ ಹೊಟೇಲ್ ಒಂದರಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು 75 ವರ್ಷದ ಆಜದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮವನ್ನು ದೇಶದೆಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಆಚರಣೆಯ ಹಿನ್ನಲೆಯಲ್ಲಿ ಜಿತೋ ಸಂಸ್ಥೆಯ ವತಿಯಿಂದ ಬೃಹತ್ತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರವು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನಡೆಯಲಿದ್ದು
ಕೆಎಲ್‌ಇ ಬ್ಲಡ ಬ್ಯಾಂಕ, ಮಹಾವೀರ ಬ್ಲಡ ಬ್ಯಾಂಕ, ಬಿಮ್ಸ ಬ್ಲಡ ಬ್ಯಾಂಕ, ಬೆಳಗಾಂ ಬ್ಲಡ ಬ್ಯಾಂಕ ಈ ಸಂಸ್ಥೆಗಳು ಸಹ ನಮಗೆ ಸಹಕರಿಸಲಿವೆ ಎಂದರು.

ಆಗಸ್ಟ 15 ರಂದು ರಕ್ತದಾನ ಮಾಡುವ ದಾಣಿಗಳಿಗೆ 1 ಲಕ್ಷ ರೂಗಳ ವಿಮೆ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ. ದಿ. ನ್ಯೂ ಇಂಡಿಯಾ ಎಷ್ಯುರೆನ್ಸ್‌ ಕಂಪನಿಯ ವತಿಯಿಂದ ರಕ್ತ ದಾನಿಗಳಿಗೆ ಜನತಾ ವ್ಯಯಕ್ತಿಕ ಅಪಘಾತ ಪಾಲಿಸಿ ಯೋಜನೆಯಡಿ ಒಂದು ವರ್ಷದ ಅವಧಿಗೆ 1 ಲಕ್ಷ ರು.ಗಳ ವಿಮೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿತೋ ಬೆಳಗಾವಿ ವಿಭಾಗದ ಅಧ್ಯಕ್ಷ ಪುಷ್ಪಕ ಹನಮಣ್ಣವರ, ಕಾರ್ಯದರ್ಶಿ ಅಮೆರಿಕಾ ತ ದೋಷಿ ಕಾರ್ಯಕ್ರಮ ಯೋಜನಾಧಿಕಾರಿ ಹರ್ಷವರ್ಧನ ಇಂಚಲ, ಕೆಕೆಜಿ ವಲಯದ ಕಾರ್ಯದರ್ಶಿ ವಿಕ್ರಮ ಜೈನ, ದಿ. ನ್ಯೂ ಇಂಡಿಯಾ ಎಷ್ಯುರೆನ್ಸ್‌ ಕಂಪನಿಯ ಸಹಾಯಕ ಪ್ರಬಂಧಕ ರತನ ರಾಮಗೊಂಡಾ ಕೆ.ಎಲ್‌.ಇ.ರಕ್ತ ಭಂಢಾರ ಪ್ರಬಂಧಕ ಶ್ರೀಕಾಂತ ವಿ.ವಿರಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Gadi Kannadiga

Leave a Reply