ಗಡಿ ಕನ್ನಡಿಗ ಸುದ್ದಿ
ಖಾನಾಪುರ:ಪಟ್ಟಣದ ಜಾಂಬೋಟಿ ಕ್ರಾಸ್ ಹತ್ತಿರ ದ್ವಿಚಕ್ರ ವಾಹನ ಒಂದು ಕೆಟ್ಟ ರಸ್ತೆ ಮಧ್ಯದಲ್ಲಿ ಇರುವ ಗುಂಡಿಯನ್ನು ತಪ್ಪಿಸಲು ಹೋಗಿ ಡಿವೈಡ್ ಗೆ ಡಿಕ್ಕಿ ಹೊಡೆದು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದ್ದು ಘಟನಾ ಸ್ಥಳಕ್ಕೆ ಘಂಟೆ ಕಳೆದರೂ ಅಂಬ್ಯೂಲೆನ್ಸ್ ಬಾರದೇ ಸಾರ್ವಜನಿಕರೇ ಗಾಯಾಳುಗಳನ್ನ ಆಸ್ಪತ್ರೆಗೆ ಸಾಗಿಸಿದ ಘಟನೆ ನಡೆದಿದೆ.
ಖಾನಾಪುರದ ನಾಯಕ್ ಗಲ್ಲಿ ನಿವಾಸಿಗಳಾದ ರುದ್ರಪ್ಪ ಹನುಮಂತ್ ನಾಯಕ್(45) ಮತ್ತು ನಾಗಪ್ಪ ಬಾಳಪ್ಪ ನಾಯಕ್ (39) ಇಬ್ಬರು ತಮ್ಮ ದ್ವಿಚಕ್ರ ವಾಹನದ ಮೇಲೆ ಪಟ್ಟಣಕ್ಕೆ ಹೊರಟಿದ್ದು ಜಾಂಬೋಟಿ ಕ್ರಾಸನ ಪೆಟ್ರೊಲ್ ಪಂಪ ಎದುರಿಗಿನ ಗುಂಡಿ ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದಿದ್ದು ಅಪಘಾತದ ವೇಳೆಯಲ್ಲಿ ಸವಾರರಿಬ್ಬರೂ ಗಾಯಗೊಂಡಿದ್ದರು.
ಸ್ಥಳದಲ್ಲಿದ್ದ ಸಾರ್ವಜನಿಕರು ಗಾಯಾಳುಗಳನ್ನ ಆಸ್ಪತ್ರೆಗೆ ಸಾಗಿಸಲು ಅಂಬುಲೆನ್ಸ್ ಗೆ ಕರೆ ಮಾಡಿ ಕಾಯ್ದರೂ ಅಂಬ್ಯುಲೆನ್ಸ ಬಾರದೇ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಸೇವಾ ಸಮಿತಿ ಎಸ್ ಸಿ ಎಸ್ ಟಿ ಅಲ್ಪಸಂಖ್ಯಾತ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಪ್ರಕಾಶ್ ಖಾನಾಪುರಿ ಹಾಗೂ ಅಲ್ಪಸಂಖ್ಯಾತರ ರಾಜ್ಯದ ಉಪಾಧ್ಯಕ್ಷರಾದ ಜಾವಿದ್ ಮೊಕಾಶಿ ಅವರು ತಮ್ಮ ವಾಹನದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದು ಅದರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದ್ದು ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಆದರೆ ಘಂಟೆ ಕಳೆದರೂ ಅಂಬುಲೆನ್ಸ್ ಸಿಗದೆ ಅಲ್ಲಿಯ ಸ್ಥಳೀಯರು ಆಸ್ಪತ್ರೆಯ ವೈದ್ಯರನ್ನು ತರಾಟೆಗೆ ತೆಗೆದುಕೊಂಡಿದ್ದು ಮುಂದಿನ ದಿನಗಳಲ್ಲಿ ಹೆಚ್ಚಿನ ಅಂಬ್ಯುಲೆನ್ಸ ಒದಗಿಸುವಂತೆ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೇವೆ ಎಂದ ಮೇಲೆ ಸಾರ್ವಜನಿಕರು ತೆರಳಿದರು ಎನ್ನಲಾಗಿದೆ.