This is the title of the web page
This is the title of the web page

Please assign a menu to the primary menu location under menu

Local News

ಅಪಘಾತದಲ್ಲಿ ಆದರ್ಶ ಶಿಕ್ಷಕರಾದ ಆರ್ ಸಿ ಗಿರೆಣ್ಣವರ ನಿಧನ


ಬೆಳಗಾವಿ ದಿ 16:-ಳಗಾವಿ ತಾಲೂಕಿನ ವೀರಪ್ಪನಕೊಪ್ಪ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ರುದ್ರಪ್ಪ ಚಿನ್ನಪ್ಪ  ಗಿರೆಪ್ಪನವರ (55 ವಯಸ್ಸು ) ಶುಕ್ರವಾರ ಸಂಜೆ ಹಿರೇಬಾಗೇವಾಡಿಯ ಪ್ರವಾಸಿ ಮಂದಿರ ಹತ್ತಿರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಅವರು ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಟ್ಯಾಂಕರ ಹಾಯ್ದ ಪರಿಣಾಮ  ಅಪಘಾತದಲ್ಲಿ ನಿಧನ ರಾದರು

ಬೈಕ್ ಮೂಲಕ ಬೆಳಗಾವಿಯಿಂದ ಹಿರೇಬಾಗೇವಾಡಿಗೆ ಬರುವಾಗ ಈ ಅಪಘಾತ ಜರುಗಿದೆ, ಬೈಕ್ ಹಿಂದುಗಡೆ ಕುಳಿತಿದ್ದ ಅವರ ಪತ್ನಿಗೆ ಅಲ್ಪಸ್ವಲ್ಪ ಗಾಯವಾಗಿದ್ದು ಪ್ರಣಾಪಾಯದಿಂದ ಪಾರಾಗಿದ್ದಾರೆ

ಹಿರೇಬಾಗೇವಾಡಿ ಗ್ರಾಮದ ನಿವಾಸಿಯಾಗಿದ್ದ ಗಿರೆಣ್ಣವರ ಅವರು ಸರಳ ಸಜ್ಜನಿಕೆಯ, ಆದರ್ಶ ಶಿಕ್ಷಕರಾಗಿದ್ದರು, ಶಾಲೆಯ ಮಕ್ಕಳ ಅಚ್ಚು ಮೆಚ್ಚಿನ ಶಿಕ್ಷಕರಾಗಿದ್ದರು, ಬೆಳಗಾವಿ ತಾಲೂಕಿನ ಶಿಕ್ಷಕರ ಹಾಗೂ ಇಲಾಖೆಯ ಅಧಿಕಾರಿಗಳ ಪ್ರೀತಿ ಗಳಿಸಿದ್ದರು

ಮೃತರು ತಮ್ಮ ಹಿಂದೆ ಧರ್ಮಪತ್ನಿ, ಓರ್ವ ಸುಪುತ್ರ, ಓರ್ವ ಸುಪುತ್ರಿ, ಇಬ್ಬರು ಸಹೋದರರು ಸೇರಿದಂತೆ ಅಪಾರ ಬಂಧು ಬಳಗ ಸಂಬಂಧಿಕರನ್ನು ಬಿಟ್ಟು ಅಗಲಿದ್ದಾರೆ

ಸಂತಾಪ :- ಕಾಲೇಜಿನ ಸಹಪಾಠಿಯಾಗಿದ್ದ, ಸರಳ ಸಜ್ಜನಿಕೆಯ, ಸ್ನೇಹ ಜೀವಿಯಾಗಿದ್ದ ಶಿಕ್ಷಕರಾದ ಆರ್ ಸಿ ಗಿರೆಣ್ಣವರ ಅಕಾಲಿಕ ನಿಧನಕ್ಕೆ ತಾಲೂಕಾ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷರಾದ ಬಸವರಾಜ ಸುಣಗಾರರು ತೀವ್ರ ಶೋಕ ವ್ಯಕ್ತ ಪಡಿಸಿ ದೇವರು ಅವರ ಆತ್ಮಕ್ಕೆ ಚಿರಶಾಂತಿ ನೀಡಲೆಂದು ಪ್ರಾರ್ಥಿಸಿದ್ದಾರೆ , ಅವರ ಶ್ರೀಮತಿ ಯರುಕೂಡಲೇಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ ,


Gadi Kannadiga

Leave a Reply