ಗದಗ ಜುಲೈ ೭:ಕರ್ನಾಟಕ ಸರ್ಕಾರವು ೨೦೨೩-೨೪ ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯನ್ನು ಅನುಷ್ಟಾನಗೊಳಿಸಲು ಮಂಜೂರಾತಿ ನೀಡಲಾಗಿದೆ. ಈ ಯೋಜನೆಯಡಿ ಶಿರಹಟ್ಟಿ ತಾಲೂಕಿನ ಈರುಳ್ಳಿ (ಮಳೆಯಾಶ್ರಿತ), ಕೆಂಪು ಮೆಣಸಿನಕಾಯಿ (ಮಳೆಯಾಶ್ರಿತ) ಹಾಗೂ ಲಕ್ಷ್ಮೇಶ್ವರ ತಾಲೂಕಿಗೆ ಈರುಳ್ಳಿ ( ನೀರಾವರಿ), ಈರುಳ್ಳಿ (ಮಳೆಯಾಶ್ರಿತ), ಕೆಂಪು ಮೆಣಸಿನಕಾಯಿ (ನೀರಾವರಿ) ಹಾಗೂ ಕೆಂಪು ಮೆಣಸಿನಕಾಯಿ (ಮಳೆಯಾಶ್ರಿತ) ಅಧಿಸೂಚಿತ ತೋಟಗಾರಿಕೆ ಬೆಳೆಗಳಾಗಿರುತ್ತವೆ.
ಈರುಳ್ಳಿ (ನೀರಾವರಿ) ಬೆಳೆಗೆ ಪ್ರತಿ ಹೆಕ್ಟೇರಿಗೆ ರೈತರು ೪೦೨೫ ರೂ. ವಿಮಾ ಕಂತು ಪಾವತಿಸಬೇಕಾಗಿದ್ದು ರೈತರು ಅರ್ಜಿ ಸಲ್ಲಿಸಲು ಜುಲೈ ೩೧ ಕೊನೆಯ ದಿನವಾಗಿದೆ. ಈರುಳ್ಳಿ ( ಮಳೆ ಆಶ್ರಿತ) ಬೆಳೆಗೆ ಪ್ರತಿ ಹೆಕ್ಟೇರಿಗೆ ೩೭೮೭ ರೂ. ವಿಮಾ ಕಂತು ಪಾವತಿಸಬೇಕಾಗಿದ್ದು ಅರ್ಜಿ ಸಲ್ಲಿಸಲು ಅಗಸ್ಟ ೧೬ ಕೊನೆಯ ದಿನವಾಗಿದೆ. ಕೆಂಪು ಮೆಣಸಿನಕಾಯಿ (ನೀರಾವರಿ) ಸಾಮಾನ್ಯ ವಿಮೆಗೆ ಪ್ರತಿ ಹೆಕ್ಟೇರಿಗೆ ೫೩೭೫ ರೂ. ವಿಮಾ ಕಂತು ಪಾವತಿಸಬೇಕಾಗಿದ್ದು ಅರ್ಜಿ ಸಲ್ಲಿಸಲು ಜುಲೈ ೩೧ ಕೊನೆಯ ದಿನವಾಗಿದೆ. ಕೆಂಪು ಮೆಣಸಿನಕಾಯಿ (ಮಳೆ ಆಶ್ರಿತ) ಪ್ರತಿ ಹೆಕ್ಟೇರಿಗೆ ೩೯೩೭ ರೂ. ವಿಮಾ ಕಂತು ಪಾವತಿಸಬೇಕಾಗಿದ್ದು ಅರ್ಜಿ ಸಲ್ಲಿಸಲು ಅಗಸ್ಟ ೧೬ ಕೊನೆಯ ದಿನವಾಗಿದೆ.
ವಿಮಾ ಮೊತ್ತವು ಬೆಳೆ ಸಾಲ ಪಡೆಯುವ ಮತ್ತು ಬೆಳೆ ಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ. ಗದಗ ಜಿಲ್ಲೆಗೆ ಬಜಾಜ್ ಅಲಿಯನ್ಸ್ ಜನರಲ್ ಇನ್ಸೂರನ್ಸ್ ಕಂಪನಿಯವರು ವಿಮಾ ಸಂಸ್ಥೆಯಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ, ಕಂದಾಯ ಇಲಾಖೆ, ರೈತ ಸಂಪರ್ಕ ಕೇಂದ್ರ ಹಾಗೂ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಲು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೆಶಕರಾದ ಸುರೇಶ ವಿ ಕುಂಬಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.