ವಿಜಯನಗರ ನ ೧೬. ಹೊಸಪೇಟೆಯಲ್ಲಿ ನ ೧೨ರಂದು ಜರುಗಿದ ವೀರಶೈವ ಪಂಚಮಸಾಲಿ ಸಮುದಾಯದ ಜಿಲ್ಲಾ ಸಮಾವೇಶದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಮಾತನಾಡಿ, ವೀರಶೈವ ಸಮಾಜದ ನಿರಂತರ ಹೋರಟ ಫಲಿಸುವ ವಿಶ್ವಾಸ ತಮಗಿರುವುದಾಗಿ ಅವರು ನುಡಿದಿದ್ದಾರೆ. ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಚರ್ಚೆಗಳಾಗುತ್ತಿದ್ದು, ಹೋರಾಟಗಳ ರೂಪರೇಷ ಹಾಗೂ ಇತರೆ ವಿದ್ಯಾಮಾನಗಳ ಕುರಿತು ತಾವು ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿರುವುದಾಗಿ ಅವರು ತಿಳಿಸಿದರು. ಸಮಾಜದ ಗುರುಗಳಾದ ಶ್ರೀವಚನಾನಂದ ಪೀಠದ ಸ್ವಾಮಿಗಳು, ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು. ವೀರಶೈವ ಪಂಚಮಸಾಲಿ ಸಮುದಾಯ ರಾಜ್ಯದಲ್ಲಿ ೮೦ ಲಕ್ಷ ಜನಸಂಖ್ಯೆ ಇದ್ದು, ಸಮುದಾಯಕ್ಕೆ ೨ಎ ಮೀಸಲಾತಿಯನ್ನು ಕೊಡಲೇಬೇಕೆಂದು ಸರ್ಕಾರಕ್ಕೆ ಅವರು ಒತ್ತಾಯಿಸಿದರು. ಕೂಡ್ಲಿಗಿ ಕ್ಷೇತ್ರದ ಶಾಸಕ ಎನ್.ವೈ. ಗೋಪಾಲಕೃಷ್ಣರವರು ಮಾತನಾಡಿ, ಕೂಡ್ಲಿಗಿ ಕ್ಷೇತ್ರದಲ್ಲಿ ಸಮಾಜದ ೬೫,೦೦೦ ಮತದಾರರಿದ್ದು. ಸರ್ಕಾರಿ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವಲ್ಲಿ ಆಧ್ಯತೆ ನಿಡಲಾಗಿದೆ. ಸರ್ಕಾರ ಮಟ್ಟದಲ್ಲಿ ಮೀಸಲಾತಿ ಹೋರಾಟಕ್ಕೆ ಸಂಬಂಧಿಸಿದಂತೆ, ತಾವೂ ಕೂಡ ಮುಖ್ಯಮಂತ್ರಿಗಳೊಂದಿಗೆ ಮಾತನಾಡುವುದಾಗಿ ಅವರು ತಿಳಿಸಿದರು. ಕಾನೂನಾತ್ಮಕವಾಗಿ ಸಂವಿಧಾನದ ಅಡಿಯಲ್ಲಿ ಏನು ಕೊಡಬೇಕು, ಅದನ್ನು ಸಮುದಾಯಕ್ಕೆ ನಾವು ಕೊಡಿಸುವಲ್ಲಿ ಯತ್ನಿಸುವುದಾಗಿ ತಿಳಿಸಿದರು. ಜಿಲ್ಲೆಯ ವಿವಿದ ತಾಲೂಕುಗಳಿಂದ ಆಗಮಿಸಿದ್ದ, ವೀರಶೈವ ಪಂಚಮಸಾಲಿ ಸಮುದಾಯದ ಮಹಿಳೆಯರು. ಕುಂಭಮೇಳದ ಮುಖಾಂತರ ಮೆರವಣಿಗೆಯಲ್ಲಿ ಭಾಗವಹಿಸಿದ್ದರು, ಕೆಲವು ಮಹಿಳೆಯರು ಕಿತ್ತೂರು ರಾಣಿ ಚೆನ್ನಮ್ಮನ ವೇಷದಲ್ಲಿ ಕುದುರೆಯನ್ನೇರಿ ಕತ್ತಿ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಹೊಸಪೇಟೆ ಪಟ್ಟಣದ ಜೆ ಸಿ ಐ ಶಾಲಾ ಮೈದಾನದ ಹತ್ತಿರ ಹಮ್ಮಿಕೊಂಡಿದ್ದ ಈ ಸಮಾವೇಶದಲ್ಲಿ ೨೦ ಸಾವಿರಕ್ಕೂ ಅಧಿಕ ಜನಸಂಖ್ಯೆಯಲ್ಲಿ, ವೀರಶೈವ ಸಮುದಾಯದವರು ಸಮಾವೇಶದಲ್ಲಿ ಭಾಗಿಯಾಗಿದ್ದರು. ವೀರ ಶೈವ ಪಂಚಮಸಾಲಿ ರಾಜ್ಯ ಅಧ್ಯಕ್ಷರಾದ ಬಾವಿ ಬೆಟ್ಟಪ್ಪನವರು, ಜಿಲ್ಲಾ ಅಧ್ಯಕ್ಷರಾದ ಪ್ರಕಾಶ್ ಹುಕ್ಕೇರಿ, ಕಿಚಡಿ ಕೊಟ್ರೇಶ, ಬಳ್ಳಾರಿ ಅಖಂಡ ಲೋಕಸಭಾ ಸದಸ್ಯರಾದ ದೇವೇಂದ್ರಪ್ಪ, ಕೊಪ್ಪಳ ಲೋಕಸಭಾ ಸದಸ್ಯ ಕರಡಿ ಸಂಗಣ್ಣ. ಜಿಲ್ಲಾ ಬಿಜೆಪಿ ಮುಖಂಡ ಚನ್ನಬಸವನಗೌಡ, ಹಗರಿಬೊಮ್ಮನಹಳ್ಳಿ ಶಾಸಕ ಭೀಮ ನಾಯ್ಕ, ವಿವಿದ ಕ್ಷೇತ್ರಗಳ ಶಾಸಕರು. ಜಿಲ್ಲಾ ಹಾಗೂ ತಾಲೂಕು ಮುಖಂಡರು, ಮಹಿಳಾ ಮುಖಂಡರು ಮತ್ತು ಗ್ರಾಮೀಣ ಮುಖಂಡರು ಹಾಗೂ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿವಿದ ಪಕ್ಷಗಳ ಮುಖಂಡರು, ವಿವಿದ ಸಮುದಾಯಗಳ ಪ್ರಮುಖರು. ನೌಕರರ ಸಂಘದವರು. ಸಮಾವೇಶದಲ್ಲಿ ಭಾಗವಹಿಸಿದ್ದರು.
Gadi Kannadiga > State > ವೀರಶೈವ ಪಂಚಮಸಾಲಿ ೨ಎ ಮೀಸಲಾತಿ ಹೋರಾಟಕ್ಕೆ ಜಯ ನಿಶ್ಚಯ- ಆನಂದ ಸಿಂಗ್