This is the title of the web page
This is the title of the web page

Please assign a menu to the primary menu location under menu

Local News

ಬೃಹತ್ ಆರೋಗ್ಯ ಮೇಳಕ್ಕೆ ಚಾಲನೆ ನೀಡಿದ ವಿಧಾನ ಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ


ಸವದತ್ತಿ: ಪಟ್ಟಣದಲ್ಲಿ ಹಮ್ಮಿಕೊಂಡ ತಾಲೂಕಾ ಮಟ್ಟದ ಬೃಹತ ಉಚಿತ ಆರೋಗ್ಯ ಮೇಳ ಹಾಗೂ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಜಾಗೃತಿ ಅಭಿಯಾನ ಕಾರ್ಯಕ್ರಮ ಹಾಗೂ 29. ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆಯನು

ಶಾಸಕ ಆನಂದ ಮಾಮನಿ ನೆರವೇರಿಸಿದರು.

ಸವದತ್ತಿ ತಾಲೂಕಿನ ಸಂಗ್ರೇಶಕೂಪ್ಪ ಗ್ರಾಮಕ್ಕೆ ರಸ್ತೆ ಸುಧಾರಣೆ 10.ಕೋಟಿ. ಹಂಚಿನಾಳ ಗ್ರಾಮಕ್ಕೆ ರಸ್ತೆ ಸುಧಾರಣೆ 7.40 ಕೋಟಿ. ಯಲ್ಲಮ್ಮ ದೇವಸ್ಥಾನ ದಿಂದ ರಾಜ್ಯ ಹೆದ್ದಾರಿ ರಸ್ತೆ ಸುಧಾರಣೆಗೆ 5.10ಕೋಟಿ. ಸಿಂಗಾರ ಕೊಪ್ಪ ಗ್ರಾಮಕ್ಕೆ ರಸ್ತೆ ಸುಧಾರಣೆ 4ಕೋಟಿ. ಹಾಗೂ ಸವದತ್ತಿ ಪುರಸಭೆ ವ್ಯಾಪ್ತಿಯಲ್ಲಿ ಬರುವ ರಾಮಾಪುರ ಸೈಟಿನಲ್ಲಿ ರಸ್ತೆ ಸುಧಾರಣೆ 2.50ಕೋಟಿ. ಹೀಗೆ ವಿವಿಧ ಕಾಮಗಾರಿಗಳಿಗೆ ಪೂಜೆ ನೆರವೇರಿಸಿದರು.

ಬೆಳಗಾವಿ ಜಿಲ್ಲೆ ಸವದತ್ತಿ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಹಮ್ಮಿಕೊಂಡ ತಾಲೂಕಾ ಮಟ್ಟದ ಬೃಹತ ಉಚಿತ ಆರೋಗ್ಯ ಮೇಳ ಹಾಗೂ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳ ಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದೇಶ ಹಾಗೂ ರಾಜ್ಯದ ಜನತೆಯ ಆರೋಗ್ಯವನ್ನು ರಕ್ಷಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಆರೋಗ್ಯ ಮೇಳ ಆಯೋಜಿಸಿ ಜನತೆಯ ಆರೋಗ್ಯ ರಕ್ಷಣೆಗೆ ಮುಂದಾಗಿದ್ದಾರೆ. ವಿಶ್ವದಲ್ಲಿಯೇ ಭಾರತ ದೇಸವನ್ನು ಆರೋಗ್ಯವಂತರ ರಾಷ್ಟ್ರವನ್ನಾಗಿ
ಕಟ್ಟಬೇಕೆಂದು ಪ್ರಧಾನಿ ಮೋದಿಯವರು ದೇಶದ ಪ್ರತಿಯೊಂದು ಬಿಪಿಎಲ್ ಕುಟುಂಬಕ್ಕೆ 5 ಲಕ್ಷ ಮೌಲ್ಯದ ಆಯುಷ್ಯಮಾನ್ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

ಸಾಕಷ್ಟು ಬಡ
ಕುಟುಂಬಗಳ ಜನರು ಹಣಕಾಸಿನ ತೊಂದರೆಯಿಂದಾಗಿ ಆಸ್ಪತ್ರೆಗೆ ಹೋಗದೆ ಮರಣ ಹೊಂದುವ ಸನ್ನಿವೇಶಗಳನ್ನು ಕಂಡಿದ್ದೇವೆ.

ಅಂತಹ ಪರಸ್ಥಿತಿಗಳನ್ನು ದೂರ ಮಾಡುವ ಸುದ್ದುದ್ದೇಶದಿಂದ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಜಂಟಿ ಯಾಗಿ ಹಲವಾರು ವೈದ್ಯಕಿಯ ಯೋಜನೆಗಳನ್ನು ತಂದಿದೆ. ಜನರು ಆರೋಗ್ಯ ಇಲಾಖೆಯಿಂದ ಮಾಹಿತಿ ಪಡೆದುಕೊಂಡು ಅವುಗಳ ಸದುಪಯೋಗ ಪಡೆದುಕೊಳ್ಳಿ ಎಂದು ಶಾಸಕ ಆನಂದ ಮಾಮನಿ ಹೇಳಿದರು

ಡಿಎಚ್‌ಓ ಡಾ: ಶಶಿಕಾಂತ ಮುನ್ಯಾಳ ಮಾತನಾಡಿ, ತಾಲೂಕಿನಲ್ಲಿ ಉಚಿತ ಆರೋಗ್ಯ ಆಯೋಜಿಸುವ ಕುರಿತು ಶಾಸಕರಿಗೆ ತಿಳಿಸಿದಾಗ ಸರಕಾರಿ ವೈದ್ಯರಷ್ಟೇ ಆದರೆ ಜನತೆಗೆ ಪ್ರಯೋಜವಾಗದು.

ನುರಿತ ತಜ್ಞರ ತಂಡವಾಗಿರುವ ಶ್ರೀ ಶಿವಯೋಗೇಶ್ವರ
ಆಯುರ್ವೇದಮೆಡಿಕಲ್ ಕಾಲೇಜು ಇಂಚಲ ಹಾಗೂ ಎಸ್.ಡಿ.ಎಮ್ ನಾರಾಯಣ ಹಾರ್ಟ ಸೆಂಟರ್ ಧಾರವಾಡ ಆಸ್ಪತ್ರೆಯ ವೈದ್ಯರನ್ನು ಕರೆಯಿಸಿ ಇಂದು ಸವದತ್ತಿ
ತಾಲೂಕಿನ ಜನತೆಗೆ ವೈದ್ಯಕಿಯ ಸೇವೆ ನೀಡಲು ಶ್ರಮಿಸುತ್ತಿರುವದು ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಕಾ

ರ್ಯಕ್ರಮದಲ್ಲಿ  ಮುರುಘೇಂದ್ರ ಮಹಾಸ್ವಾಮಿಗಳು ಸೋಮಶೇಖರ ಮಠ ಮನವಳ್ಳಿ, ಪುರಸಭೆಯ ಅಧ್ಯಕ್ಷ ರಾಜಶೇಖರ್ ಕಾರದಗಿ, ಪುರಸಭೆ ಉಪಾಧ್ಯಕ್ಷ ದೀಪಕ್ ಜಾನ್ಟೇಕರ, ಪಿ ಎಲ ಡಿ ಬ್ಯಾಂಕ್ ಅಧ್ಯಕ್ಷ ಜಗದೀಶ್ ಶಿಂತ್ರಿ, ಬೈಲಹೊಂಗಲ ಉಪವಿಭಾಗಾಧಿಕಾರಿಗಳು ಶಶಿಧರ ಬಗಲಿ, ಜಿಲ್ಲಾ ಆಯುಷ ಅಧಿಕಾರಿಗಳು ಡಾ: ಎಸ.ಬಿ. ಸುಣಧೋಳಿ, ತಾಲೂಕು ದಂಡಾಧಿಕಾರಿಗಳಾದ ಪ್ರಶಾಂತ ಪಾಟೀಲ, ತಾಲೂಕು ಪಂಚಾಯತ ಅಧಿಕಾರಿ ಯಶವಂತಕುಮಾರ, ಮುಖ್ಯವೈದ್ಯಾಧಿಕಾರಿಗಳು ಡಾ: ಎಚ್ ಎಮ್ ಮಲ್ಲನಗೌಡ್ರ, ಜಿಲ್ಲಾ ಸಮಿಕ್ಷಣಾಧಿಕಾರಿಗಳು ಡಾ: ಬಿ. ಎನ್. ತುಕ್ಕಾರ, ತಾಲೂಕು ನೋಡಲ್ ಅಧಿಕಾರಿ ಡಾ: ಎಮ್. ಎಸ್. ಪಲ್ಲೇದ, ಸಿ.ಡಿ.ಪಿ.ಒ ಕಾಂಚನಾ ಅಮಠ, ತಾಲೂಕು ಆರೋಗ್ಯ ಅಧಿಕಾರಿಗಳು ಡಾ: ಮಹೇಶ ಚಿತ್ತರಗಿ, ಪುರಸಭೆಯ ಮುಖ್ಯಾಧಿಕಾರಿಗಳು ಪ್ರಕಾಶ ಚನ್ನಪ್ಪನವರ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ತಜ್ಞವೈದ್ಯರು,ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗ, ಆರೋಗ್ಯ ರಕ್ಷ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.


Gadi Kannadiga

Leave a Reply