This is the title of the web page
This is the title of the web page

Please assign a menu to the primary menu location under menu

Local News

ರೋಟರಿ ಕಬ್ಲ್ ಆಫ್ ಬೆಲಗಮ್ ಮಿಡ್ ಟೌನ್ ಪದಗ್ರಹಣ ಕರ‍್ಯಕ್ರಮ ಸಂಘಟನಾ ಕರ‍್ಯಕ್ಕೆ ಕುಟುಂಬದ ಸಹಕಾರ ಮುಖ್ಯ: ಆನಂದ ಸರಾಫ


ಬೆಳಗಾವಿ :- ರೋಟರಿ ಕಬ್ಲ್ ಆಫ್ ಬೆಲಗಮ್ ಮಿಡ್ ಟೌನ್ ದ ಕಣ ಕಣದಲ್ಲಿಯೂ ಸಮಾಜ ಸೇವೆಯೇ ತುಂಬಿದ್ದು. ಹಣವಿದ್ದರಿಂದ ದೇಣಿಗೆ ತೆಗೆದುಕೊಂಡು ಸಮಾಜದ ಅವಶ್ಯಕತೆಗೆ ವಿನಿಯೋಗಿಸುವದೆ ಮುಖ್ಯ ಉದ್ದೇಶವನ್ನು ಹೊಂದಿದೆ ಸಂಘಟನಾ ಕರ‍್ಯಕ್ಕೆ ಮನೆಯಲ್ಲಿಯ ಮಡದಿ ಮಕ್ಕಳ ಸಹಕಾರ ಅತ್ಯವಶ್ಯ ಅದಕ್ಕಾಗಿ ಮೊದಲು ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಇನಾö್ಟಲಿಂಗ್ ಆಫಿಸರ್ ಪಿ.ಡಿ.ಜಿ. ಆನಂದ ಸರಾಫ ಇಂದಿಲ್ಲಿ ಹೇಳಿದರು.
ನಗರದ ಕ್ಯಾಂಪ ಪ್ರದೇಶದಲ್ಲಿ ಬರುವ ಮೆಸೋನಿಕ್ ಸಭಾಗೃಹದಲ್ಲಿ ಇದೇ ದಿ. ೧೨ ರಂದು ಸಾ. ೭-೩೦ ಗಂಟೆಗೆ ಹಮ್ಮಿಕೊಳ್ಳಲಾಗಿದ್ದ ರೋಟರಿ ಪದಗ್ರಹಣ ಸಮಾರಂಭದಲ್ಲಿ ಪಿ.ಡಿ.ಜಿ. ಆನಂದ ಸರಾಫ ಅವರು ಮೇಲಿನಂತೆ ಅಭಪ್ರಾಯ ಪಟ್ಟರು. ಮುಂದೆ ಮಾತನಾಡುತ್ತ ಪಿಡಿಜಿ ಆನಂದ ಸರಾಫ ಅವರು ಮೊದಲು ನಾವು ನಮ್ಮ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಬೇಕು. ನಾವು ಶಾಂತವಾಗಿದ್ದರೆ ನಮ್ಮ ಕುಟುಂಬ ಅದರೆ ನಗರ, ರಾಜ್ಯ, ರಾಷ್ಟ ಹೀಗೆ ಎಲ್ಲರೂ ಸುಖಕರ ಜೀವನ ನಡೆಸಲು ಸಾಧ್ಯ. ರೋಟರಿ ಕ್ಲಬ್ ಆಪ್ ಬೆಳಗಾವಿ ಮಿಡ್ ಟೌನ್ ದಂತಹ ಸಂಘಟನೆಯಲ್ಲಿ ಸೇವೆ ಮಾಡುವುದರಿಂದ ಮಾನಸಿಕ, ನೆಮ್ಮದಿ ಶಾಂತಿ ಸಿಗಲು ಸಾಧ್ಯ ಎಂದು ಹೇಳಿದರು.
ರೋಟರಿ ಕ್ಲಬ್ ಬೆಳಗಾವಿ ಮಿಡ್ ಟೌನ್ ೨೦೨೩-೨೪ ಸಾಲಿಗೆ ಅಧ್ಯಕ್ಷ ಸ್ಥಾನವನ್ನು ರೊ. ಸತೀಶ ನಾಯಕ ಅವರಿಗೆ ಹಸ್ತಾಂತರಿಸಿದ ಡಾ, ವಿಜಯ ಪೂಜಾರ ಅವರು ಮಾತನಾಡುತ್ತ, ನಾನು ರೋಟರಿ ಕ್ಲಬ್ ಆಫ್ ಬೆಳಗಾವಿ ಮಿಡ್ ಟೌನ್ ವತಿಯಿಂದ ಬೇರೆ, ಬೇರೆ ಶಾಲೆಯ ಮಕ್ಕಳಿಗಾಗಿ ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಅಲ್ಲದೇ ಬೇರೆ ಬೇರೆ ಸ್ಥಳಗಳಲ್ಲಿ ರಕ್ತದಾನ ಶಿಬರಗಳನ್ನು ಹಮ್ಮಿಕೊಳ್ಳಲಾಗಿತ್ತು. ಜೊತೆಗೆ ಸಾಂಸ್ಕೃತಿಕ ಕರ‍್ಯಕ್ರಮಗಳನ್ನು ಆಯೋಜಿಸಲಾಗಿತ್ತು. ನನ್ನೆಲ್ಲ ಕರ‍್ಯಗಳಿಗೆ ಸಂಘದ ಎಲ್ಲ ಸದಸ್ಯರ ಸಹಕಾರವೂ ನನಗೆ ತುಂಬಾ ಇತ್ತು ಎಂದು ಎಲ್ಲರನ್ನೂ ಸ್ಮರಿಸಿಕೊಂಡರು.
೨೦೨೨-೨೩ ನೇ ಸಾಲಿನ ಅಧ್ಯಕ್ಷ ಡಾ. ವಿಜಯ ಪೂಜಾರ ಅವರನ್ನು ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ರೋಟರಿ ಕ್ಲಬ್ ಬೆಳಗಾವಿ ಮಿಡ್ ಟೌನ್ ೨೦೨೩-೨೪ ಸಾಲಿಗೆ ಅಧ್ಯಕ್ಷ ಸ್ಥಾನವನ್ನು ಸ್ವೀಕರಿಸಿದ ರೊ. ಸತೀಶ ನಾಯಕ ಅವರು ಮಾತನಾಡಿ ಹಲವಾರು ಯೋಜನೆಗಳು ನನ್ನ ಗಮನದಲ್ಲಿದ್ದು ಅವನ್ನು ಕರ‍್ಯರೂಪಕ್ಕೆ ತರಲು ಎಲ್ಲ ಸದಸ್ಯರ ಸಹಾಯ, ಸಹಕಾರ ಹಾಗೂ ಹಿರಿಯರ ಆಶರ‍್ವಾದವನ್ನು ಬಯಸುತ್ತೇನೆ ಎಂದು ಹೇಳಿದರು.
ಅಶೋಕ ಮಳಗಲಿ,ಫೋರ್ ವೇ ಟೆಸ್ಟ್ ಬೋದನೆಮಾಡಿದರು. ಶ್ರೀಮತಿ ಶೃತಿ ಸ್ವಾಗತ ಗೀತೆಯನ್ನು ಹಾಡಿದರು. ರೊ.ಮನೋಹರ ಜರತಾರಕರ ವಂದಿಸಿದರು. ನಂದನ ಬಾಗಿ, ಡಾ.ಮನೋಹರ ಜಾದವ, ಸಮೀರ ಲೋಕೂರ ಅತಿಥಿಗಳ ಪರಿಚಯಿಸಿದರು.
ವೇದಿಕೆಯ ಮೇಲೆ ಗುಲಾಬಚಂದ ಚೌಗಲೆ, ಸಂಜಯ ಕುಲರ‍್ಣಿ, ರೇಣು ಕುಲರ‍್ಣಿ ಮನೋಹರ ಜರತಾರಕರ ಡಾ.ಸುಜಾತಾ ಜಾಲಿ ಮತ್ತು ಎಲ್.ವಿ ದೇಸಾಯಿ ನಿರುಪಿಸಿದರು. ಈ ಸಾಲಿನ ಅತ್ಯುತ್ತಮ ರೋಟೆರಿಯನ್ ಆಗಿ ರೊ. ನೀತಾ ಬೀಡಿಕರ ಅವರನ್ನು ಆಯ್ಕೆ ಮಾಡಲಾಯಿತು. ಸಮಾರಂಭದಲ್ಲಿ ಬೆಳಗಾವಿ ರೋಟರಿ ಪರಿವಾರದ ರ‍್ವ ಸದಸ್ಯರು, ಪಿ.ಡಿ.ಜಿ ಆನಂದ ಕುಲರ‍್ಣಿ, ದಿನೇಶ ಕಾಳೆ,ಮಹೇಶ ಆನಗೋಳಕರ, ಸಂಜೀವ ದೇಶಪಾಂಡೆ, ಡಾ.ಎಮ್.ವಿ.ಜಾಲಿ, ಡಾ. ಮನೋಜ ಸುತಾರ, ಜಯದೇವ ಸಿದ್ದನ್ನವರ, ಉಪಸ್ಥಿತರಿದ್ದರು.


Leave a Reply