ಬೆಳಗಾವಿ : ಏಪ್ರಿಲ್ ೨೪ ರಂದು ಕ್ರಾಂತಿ ಮಹಿಳಾ ಮಂಡಲಳ ಹಾಗೂ ಉಮಾ ಸಂಗೀತ ಪ್ರತಿಷ್ಠಾನ ಸಂಸ್ಥೆಗಳ ವತಿಯಿಂದ ಬಾ ಮನೆ ವಾಡಿಯಲ್ಲಿ ಇರುವ ಶಾಂತಾಯಿ ವೃದ್ಧಾಶ್ರಮದಲ್ಲಿ ಸಂಗೀತ ಸಂಧ್ಯಾ ಕಾರ್ಯಕ್ರಮವನ್ನು ಮಾಡಲಾಯಿತು ಕೆಎ ಸಂಗೀತ ವಿಶ್ವವಿದ್ಯಾಲಯದ ಶಿಕ್ಷಕಿ ಡಾಕ್ಟರ್ ಸುನಿತಾ ಪಾಟೀಲ್ ಹಾಗೂ ಸಂಗೀತ ಶಿಕ್ಷಕಿ ನೈನಾ ಗಿರಿ ಗೌಡರ ಇವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು ಮುಖ್ಯ ಅತಿಥಿಯಾಗಿ ಶ್ರೀಯುತ ರಾಜೀವ ಕೃಷ್ಣಾ ಮೇತ್ರಿ ಛಿouಟಿಛಿiಟಟoಡಿ oಜಿ ಆeಟಿbighshiಡಿe ಅouಟಿಣಥಿ ಅouಟಿಛಿiಟ Uಟಿiಣeಜ ಏiಟಿgಜom ಇವರನ್ನು ಅವರು ಮಾಡುತ್ತಿರುವ ವೈದ್ಯಕೀಯ ಸಾಮಾಜಿಕ ರಾಜಕೀಯ ಕ್ರೀಡಾ ಕ್ಷೇತ್ರ ಶಿಕ್ಷಣ ಕ್ಷೇತ್ರ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸಿ ಸಾಧನೆಯನ್ನು ಮಾಡಿದ್ದಕ್ಕಾಗಿ ಗುರುತಿಸಿ ನಮ್ಮ ಎರಡೂ ಸಂಸ್ಥೆಗಳ ವತಿಯಿಂದ ಅವರಿಗೆ ಚಾಣಕ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು ಮೂಲತಃ ಬೆಳಗಾವಿ ಜಿಲ್ಲೆಯ ದಡ್ಡಿ ಗ್ರಾಮದ ಮೇತ್ರಿ ಇವರು ಈಗ ಇಂಗ್ಲೆಂಡ್ ದೇಶದ ನಿವಾಸಿ ಆಗಿದ್ದಾರೆ ಗೌರವವನ್ನು ಸ್ವೀಕರಿಸಿ ಮಾತನಾಡಿದ ಅವರು ಈ ಚಾಣಕ್ಯ ಪ್ರಶಸ್ತಿಯನ್ನು ಸ್ವೀಕರಿಸಿ ನನಗೆ ಇನ್ನೂ ಸಮಾಜಮುಖಿ ಕೆಲಸಗಳನ್ನು ಮಾಡಲು ಇನ್ನಷ್ಟು ಬಲ ಬಂದಂತಾಗಿದೆ ಹಾಗೂ ಈ ಪ್ರಶಸ್ತಿಯನ್ನು ಪಡೆದದ್ದಕ್ಕಾಗಿ ಅತ್ಯಂತ ಸಂತೋಷವಾಗಿದೆ ಎಂದು ಹೇಳಿ ಧನ್ಯವಾದ ಹೇಳುವುದರ ಜೊತೆಗೆ ಇನ್ನು ನನ್ನ ಜವಾಬ್ದಾರಿ ಹೆಚ್ಚಾದಂತಾಗಿದೆ ಎಂದು ಹೇಳಿದರು ನಮ್ಮ ಎರಡೂ ಸಂಸ್ಥೆಗಳು ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಮಾಡುತ್ತಿರುವ ಕಾರ್ಯ ನಿರಾಶ್ರಿತರಿಗಾಗಿ ನಾವು ಮಾಡುತ್ತಿರುವ ಸಹಾಯ ಎ???ವಿ ಪೀಡಿತರಿಗೆ ಮಾಡುತ್ತಿರುವ ಸಹಾಯ ಅನಾಥ ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಕರೋನಾ ಸಮಯದಲ್ಲಿ ನಾವು ಮಾಡಿದ ಸಹಾಯ ಹಾಗೂ ನಮ್ಮ ದೇಶದ ಗಡಿ ಕಾಯುತ್ತಿರುವ ಯೋಧರನ್ನು ಗುರುತಿಸಿ ಸನ್ಮಾನಿ ಸುತ್ತಿರುವುದು ಮತ್ತು ಆರ್ಮಿ ಪಂಡಿಗೆ ಪ್ರತಿ ತಿಂಗಳು ಹಣವನ್ನು ಕಳುಹಿಸುತ್ತಿರುವ ವಿಷಯವನ್ನು ಅರಿತು ಅವಶ್ಯವಿರುವವರಿಗೆ ನಾವು ಮಾಡುತ್ತಿರುವ ಸಹಾಯವನ್ನು ಮೆಚ್ಚಿಕೊಂಡು ನಿಮ್ಮ ಕಾರ್ಯಗಳಲ್ಲಿ ನಾನು ಕೂಡ ಕೈಗೂಡುತ್ತೇನೆ ಎಂದು ಹೇಳಿದರಲ್ಲದೆ ಎಲ್ಲ ಸದಸ್ಯರನ್ನು ಇಂಗ್ಲೆಂಡಿಗೆ ಬರಲು ಆಹ್ವಾನಿಸಿದರು ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಆಶ್ರಮದ ಸಂಚಾಲಕರಾದ ಶ್ರೀಮತಿ ಮಾರಿಯಾ ವಿಜಯ ಮೋರೆ ಉಪಸ್ಥಿತರಿದ್ದರು ಆಶ್ರಮದ ಹಿರಿಯ ನಾಗರಿಕರಿಗೆ ಎರಡೂ ಸಂಸ್ಥೆಗಳ ವತಿಯಿಂದ ಗುಣಮಟ್ಟದ ಕುಡಿಯುವ ನೀರಿನ ಬಾಟಲಿ ಹಾಗೂ ಬಟ್ಟೆಗಳನ್ನು ನೀಡಲಾಯಿತು ಮಂಡಳದ ಅಧ್ಯಕ್ಷರಾದ ಶ್ರೀಮತಿ ಮಂಗಲ ಮಠದ ಅವರು ಸ್ವಾಗತಿಸಿದರು ಕಾರ್ಯದರ್ಶಿಗಳಾದ ರತ್ನಶ್ರೀ ಗುಡೇರ ಪ್ರಾತ್ಸಾವಿಕವಾಗಿ ಮಾತನಾಡಿದರು ಬೇಬಿ ನಂದಾ ಖಾತೆದಾರ ಜಾನ್ವಿ ಕಲ್ಯಾಣ್ ಶೆಟ್ಟಿ ಪ್ರಾರ್ಥಿಸಿದರು ದೀ ಪ್ತಿ ಕಾಗವಾಡ ಹಾಗೂ ಅಕ್ಷತಾ ಪಾಟೀಲ ನಿರೂಪಿಸಿದರು ತೃಶೀಲಾ ಪಾಯಪ್ಪನವರ ವಂದಿಸಿದರು ಕಾರ್ಯಕ್ರಮದಲ್ಲಿ ಡಾಕ್ಟರ್ ರಾಜೇಂದ್ರ ಮಠದ ದ್ರೌಪದಿ ಮೇತ್ರೀ ಆಶಾ ನಿಲಜಿಗಿ ಆಶ್ರಮದ ಸಂಸ್ಥಾಪಕರಾದ ವಿಜಯ ಮೋರೆ ಮುಂತಾದವರು ಉಪಸ್ಥಿತರಿದ್ದರು ಕಾರ್ಯಕ್ರಮದ ನಂತರ ಆಶ್ರಮದ ಎಲ್ಲಾ ಅಜ್ಜ ಮತ್ತು ಅಜ್ಜಿಯರಿಗೆ ಭೋಜನದ ವ್ಯವಸ್ಥೆಯನ್ನು ಎರಡೂ ಸಂಸ್ಥೆಗಳ ವತಿಯಿಂದ ಮಾಡಲಾಯಿತು
Gadi Kannadiga > Local News > Àಂಗೀತ ಸಂಧ್ಯಾ ಕಾರ್ಯಕ್ರಮ