ಬೆಳಗಾವಿ: ಒಂದು ವರ್ಷದಲ್ಲಿ ಸಿಟಿ ಬಸ್ ನಿಲ್ದಾಣ ಸಾರ್ವಜನೀಕರ ಸೇವೆಗೆ ಸಜ್ಝಾಗಲಿದೆ ಮತ್ತು ನಗರದಲ್ಲಿರುವ ಖಾಸಗಿ ರೀಕ್ಷಾ ನಿಲ್ದಾಣ ತೆರವುಗೊಳಿಸಿ ಪ್ರೀ ಪೇಡ್ ಅಟೋ ರೀಕ್ಷಾ ನಿಲ್ದಾಣ ನಿರ್ಮಿಸಲಾಗುತ್ತದೆ ಎಂದು ಶಾಸಕ ಅನೀಲ್ ಬೆನಕೆ ಹೇಳಿದರು.
ಶನಿವಾರ ನಗರದಲ್ಲಿ ನಿರ್ಮಾಣವಾಗುತ್ತಿರುವ ಸಿಟಿ ಬಸ್ ನಿಲ್ದಾಣಕ್ಕೆ ಬೇಟಿ ನೀಡಿ ಕಾಮಗಾರಿ ಪ್ರಕ್ರಿಯೆಯನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು. ಒಂದು ವರ್ಷದ ಅವದಿಯೊಳಗೆ ಸಿಟಿ ಬಸ್ ನಿಲ್ದಾಣವು ಸಾರ್ವಜನೀಕರ ಸೇವೆಗೆ ಸಜ್ಜಾಗಲಿದೆ. ಸಧ್ಯದ ಪರಿಸ್ಥಿತಿಯಲ್ಲಿ ಬೀದಿ ವ್ಯಾಪಾರಿಗಳಿಗೆ, ಅಟೋ ರೀಕ್ಷಾ ನಿಲ್ದಾಣಕ್ಕೆ ತೊಂದರೆಯುಂಟಾಗುತ್ತಿದ್ದು ಸಾರ್ವಜನೀಕರು ಬಸ್ಸಿಗಾಗಿ ಬಿಸಿಲಲ್ಲಿ ಕಾಯುವ ಪರಿಸ್ಥಿತಿ ನಿರ್ಮಾಣ ವಾಗಿದೆ ಈ ಸಮಸ್ಯೆಗಳು ಮುಂದಿನ ದಿನಗಳಲ್ಲಿ ಉಲ್ಬಣಗೊಳ್ಳದಂತೆ ಎಚ್ಚರಿಕೆ ವಹಿಸಲಾಗುತ್ತದೆ ಎಂದರು.
ಇನ್ನು ಖಾಸಗಿ ರೀಕ್ಷಾ ನಿಲ್ದಾಣಗ ತೆರವು ಮಾಡುವಂತೆ ಈಗಾಗಲೆ ಕಾಂಟನ್ಮೆಂಟ್ ಆದೇಶ ಹೊರಡಿಸಿದ್ದು ನಗರದಲ್ಲಿ ಖಾಸಗಿ ಅಟೋ ರೀಕ್ಷಾ ನಿಲ್ದಾಣಗಳಿಗೆ ಅವಕಾಶವಿಲ್ಲ ರಸ್ತೆಯ ಎರಡೂ ಬದಿಗಳಲ್ಲಿ ಪ್ರೀ ಪೇಡ್ ರೀಕ್ಷಾ ನಿಲ್ದಾಣಗಳನ್ನು ನಿರ್ಮಿಸಲು ಯೋಜನೆ ಮಾಡಲಾಗಿದ್ದು ಅದು ನಗರದಲ್ಲಿ ಸಂಪೂರ್ಣವಾಗಿ ಜಾರಿಗೆ ಬರಬೇಕು ಮತ್ತು ಯೋಜನೆಗೆ ಸಾರ್ವಜನಿಕರು ಸಹಕರಿಸಬೇಕು. ಈಗಾಗಲೇ ಕಾಂಟೋನ್ಮೆಂಟ್ ವ್ಯಾಪ್ತಿಯಲ್ಲಿ ಇರುವ ಟಿಪ್ಪು ಸುಲ್ತಾನ್ ನಿಲ್ದಾಣವನ್ನು ತೆರವುಗೊಳಸಬೇಕು. ಬೇಕಾದರೆ ಪ್ರಿ ಪೇಡ್ ರೀಕ್ಷಾ ನಿಲ್ದಾಣದಲ್ಲಿ ಇಲ್ಲವಾದರೆ ಬಿಡಲಿ ಎಂದರು.
ಮಳೆಗಾಲದಲ್ಲಿ ಬಸ್ ನಿಲ್ದಾಣ ಕೆಸರು ಗದ್ದೆಯಾಗದಂತೆ ಜವಾಬ್ದಾರಿ ವಹಿಸಬೇಕು ಇಲ್ಲವಾದಲ್ಲಿ ಅಧಿಕಾರಗಳ ವಿರುದ್ಧ ಕಠೀಣ ಕ್ರಮ ಜರುಗಿಸಲಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.