This is the title of the web page
This is the title of the web page

Please assign a menu to the primary menu location under menu

Local News

ಏನ್. ಐ. ಆರ್. ಎಫ್. ಶ್ರೇಯಾಂಕ : ವಿ ಟಿ ಯು ಶ್ರೇಷ್ಠ ಸಾಧನೆ


ಬೆಳಗಾವಿ: ಇಂಜಿ£ಯರಿಂಗ್ ವಿಭಾಗದಲ್ಲಿ ೪೯ ನೇ ಸ್ಥಾನ, ವಿಶ್ವವಿದ್ಯಾಲಯ ವಿಭಾಗದಲ್ಲಿ ೭೨ ನೇ ಸ್ಥಾನ, ಸಮಗ್ರ ಶಿಕ್ಷಣ ಸಂಸ್ಥೆಗಳ ಶ್ರೇಷ್ಠ ೧೦೦ ರಲ್ಲಿ ಸ್ಥಾನವನ್ನು ಪಡೆದುಕೂಳ್ಳುವ ಮೂಲಕ ರಾಷ್ಟ್ರಮಟ್ಟದಲ್ಲಿ ತನ್ನ ಶ್ರೇಯಾಂಕವನ್ನು ಹೆಚ್ಚಿಸಿಕೊಂಡಿದೆ.
ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಮಿತಿ (ಎನ್ ಐ ಆರ್ ಎಫ್) ಆಧರಿಸಿ ಭಾರತ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ೨೦೨೨ ರ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕದ ಏಳನೇ ಆವೃತ್ತಿಯನ್ನು ಪ್ರಕಟಿಸಿದೆ. ಇದರಲ್ಲಿ ರಾಜ್ಯದ ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ( ವಿ ತಾ ವಿ), ಬೆಳಗಾವಿ ರಾಷ್ಟ್ರದ ಅತ್ತು÷್ಯನ್ನತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದು ಗಮನಾರ್ಹ ಸಾಧನೆ ಮಾಡಿದೆ.
ಇಂಜಿ£ಯರಿಂಗ್ ವಿಭಾಗದಲ್ಲಿ ಕಳೆದ ಬಾರಿಗಿಂತ ೭ ಸ್ಥಾನ ಮೇಲೇರಿ ೪೯ನೇ ಸ್ಥಾನ ಪಡೆದುಕೊಂಡಿದೆ ಈ ಪಟ್ಟಿಯಲ್ಲಿ ರಾಷ್ಟ್ರೀಯ ಪ್ರಾಮುಖ್ಯತೆಯ ಪಡೆದ ಸಂಸ್ಥೆಗಳಾದ ಐಐಟಿಗಳು, ಐಐಐಟಿಗಳು, ಎನ್‌ಐಟಿಗಳು ಮತ್ತು ಇತರೆ ಎಂಜಿ£ಯರಿಂಗ್ ಸಂಸ್ಥೆಗಳು ಮತ್ತು ದೇಶದ ವಿಶ್ವವಿದ್ಯಾಲಯಗಳಿವೆ.
ಹಾಗೆಯೇ ಸಮಗ್ರ ಶಿಕ್ಷಣ ಸಂಸ್ಥೆ ವಿಭಾಗ(ಓವರ್ ಆಲ್ ಕೆಟಗರಿ)ದಲ್ಲಿ ಕಳೆದ ಬಾರಿ ೧೦೧ – ೧೫೦ ಶ್ರೇಯಾಂಕ ಬ್ಯಾಂಡ್ ನಲಿದ್ದ ವಿ ಟಿ ಯು ಈ ಬಾರಿ ತನ್ನ ಶ್ರೇಯಾಂಕದಲ್ಲಿ ಜಿಗಿತ ಕಂಡು ಶ್ರೇಷ್ಠ ೧೦೦ ರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.
ವಿ ಟಿ ಯು ರಾಷ್ಟ್ರದ ಶ್ರೇಷ್ಟ ೧೦೦ ವಿಶ್ವವಿದ್ಯಾಲಯಗಳ (ತಾಂತ್ರಿಕ ಮತ್ತು ತಾಂತ್ರಿಕೇತರ) ವಿಭಾಗದಲ್ಲಿಯೂ ೧೦ ಸ್ಥಾನಗಳ ಜಿಗಿತ ಕಂಡು ೭೨ನೇ ಸ್ಥಾನವನ್ನು ಪಡೆದಿದೆ ಹಾಗೆಯೇ ಮ್ಯಾನೇಜ್ಮೆಂಟ್ ವಿಭಾಗದಲ್ಲಿಯೂ ವಿ ತಾ ವಿ ೭೬ ನೇ ಸ್ಥಾನದಲ್ಲಿದೆ.
ವಿ ಟಿ ಯು ೨೪ ವರ್ಷಗಳಲ್ಲಿ ಸಂಬಂಧಪಟ್ಟ ಎಲ್ಲ ವಿಭಾಗಗಳಲ್ಲಿ ಶ್ರೇಷ್ಠ ೧೦೦ ರಲ್ಲಿ ಸ್ಥಾನ ಪಡೆಯುದರ ಮುಖಾಂತರ ಅದ್ಭುತ ಸಾಧನೆ ಮಾಡಿದೆ. ಇದು ವಿ ಟಿ ಯು, ಎಂಜಿ£ಯರಿಂಗ್ ಕ್ಷೇತ್ರದಲ್ಲಿ £Ãಡುತ್ತಿರುವ ಉತ್ತಮ ಗುಣಮಟ್ಟ ಶಿಕ್ಷಣದ ವ್ಯವಸ್ಥೆಯನ್ನು, ಯುವ ಪೀಳಿಗೆಯಲ್ಲಿ ಸಂಶೋಧನೆ ಮತ್ತು ನಾವೀನ್ಯತೆ ಸಂಸ್ಕöÈತಿಯನ್ನು ಪ್ರೋತ್ಸಾಹಿಸುತ್ತಿರುವ ಹಾಗೂ ಕೈಗಾರಿಕ ವಲಯ ಮತ್ತು ಶಿಕ್ಷಣ ಸಂಸ್ಥೆಗಳನ್ನು ಒಂದೇ ವೇದಿಕೆಯಲ್ಲಿ ಮುಖಾಮುಖಿ ಚರ್ಚಗೆ ಒಳಪಡಿಸಿ ವಿದ್ಯಾರ್ಥಿಗಳಿಗೆ ಹೊಸ ಅವಕಾಶಗಳ ಬಗ್ಗೆ ತಿಳಿಸುವ ಕೆಲವು ಕ್ರಾಂತಿಕಾರಿ ಕ್ರಮಗಳನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸದ್ದನ್ನು ಪ್ರತಿಬಿಂಬಿಸುತ್ತದೆ.
ಈ ಎಲ್ಲ ಯೋಜನೆಗಳಿಂದ ಸತತ ಮೂರು ವರ್ಷಗಳಿಂದ ವಿ ಟಿ ಯು ಪ್ರತಿಷ್ಠಿತ ಶ್ರೇಯಾಂಕದಲ್ಲಿ ಸ್ಥಾನವನ್ನು ಪಡೆಯುತ್ತ ಬಂದಿದೆ ಹಾಗೂ ಈ ಬಾರಿ ಶ್ರೇಯಾಂಕದಲ್ಲಿ ಕಳೆದ ಬಾರಿಗಿಂತ ಜಿಗಿತಕಂಡು ಇಲ್ಲಿವರೆಗಿನ ಅತ್ಯುತ್ತಮ ಸ್ಥಾನವನ್ನೂ ಈ ಬಾರಿ ಪಡೆದುಕೊಂಡಿದೆ.
ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಸಮಿತಿ (ಎನ್ ಐ ಆರ್ ಎಫ್) ಮುಖಾಂತರ ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯವು ವಿಶ್ವವಿದ್ಯಾಲಯಗಳನ್ನು ಮತ್ತು ಸಂಸ್ಥೆಗಳನ್ನು ಅಲ್ಲಿಯ ಬೋಧನೆ, ಕಲಿಕೆ, ಸಂಪನ್ಮೂಲಗಳ, ಸಂಶೋಧನೆ ಮತ್ತು ವೃತ್ತಿಪರ ಅಭ್ಯಾಸ; ಪದವಿ ಫಲಿತಾಂಶಗಳು, ಸಾಮಾಜಿಕ ಪಾಲ್ಗೊಳ್ಳುವಿಕೆ ಮತ್ತು ಸಂಸ್ಥೆಗಳ ಮೇಲಿರುವ ಸಾರ್ವಜ£ಕ ಗ್ರಹಿಕೆ. ಈ ಅಂಶಗಳ ಬಗ್ಗೆ ಅತ್ಯಂತ ಕಠಿಣವಾದ ಮಾನದಂಡಗಳೊಂದಿಗೆ ಮೌಲ್ಯಮಾಪನ ಮಾಡಿ ಈ ಶ್ರೇಯಾಂಕಗಳನ್ನು ಕೇಂದ್ರ ಸರ್ಕಾರ ಪ್ರಕಟಿಸುತ್ತದೆ.
ವಿ ಟಿ ಯು ನ ಈ ಸಾಧನೆಗೆ ಕುಲಪತಿಗಳಾದ ಪ್ರೊ. ಕರಿಸಿದ್ದಪ್ಪ ವಿ ತಾ ವಿಯ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ ಹಾಗೂ ವಿ ತಾ ವಿ ರಜತ ಮಹೋತ್ಸವ ಸಂದರ್ಭದಲ್ಲಿನ ಈ ಸಾಧನೆ ಮತ್ತಷ್ಟು ಸಂತೋಷವನ್ನು ತಂದಿದೆ ಎಂದು ಹೇಳಿದರು.


Gadi Kannadiga

Leave a Reply