ಬೆಳಗಾವಿ-೭: ಇಂದು ಆಧುನಿಕ ಜೀವನ ಶೈಲಿ ಅನೇಕ ರೀತಿಯ ಹೊಸ ಖಾದ್ಯ ಪಡಿ ಪದಾರ್ಥಗಳನ್ನು ಅನುಭವಿಸುವ ಸಾಧ್ಯತೆಗಳನ್ನು ತಂದಿದೆ. ಪಾಶ್ಚಾತ್ಯದ ಹಲವು ತಿಂಡಿ ತಿನಿಸು, ಭಕ್ಷ, ಭೋಜ್ಯಗಳು ನಮ್ಮ ದೇಶೀಯ ಆಹಾರ ಪದಾರ್ಥಗಳೊಂದಿಗೆ ಬೆರೆತು ಹೊಸ ರುಚಿ, ರಸ, ಆನಂದಗಳನ್ನು ನೀಡುತ್ತಿವೆ. ಆದುದರಿಂದ ಇಂದು ಆಹಾರ ಉತ್ಪಾದನಾ ಕ್ಷೇತ್ರದಲ್ಲಿ ಹೊಸ ಅವಿಸ್ಕಾರಗಳಾಗುತ್ತಿದ್ದು ಯುವ ಜನಾಂಗಕ್ಕೆ ಸಾಕಷ್ಟು ಅವಕಾಶಗಳಿವೆ ಎಂದು ಬೆಳಗಾವಿಯ ಪೈ ಬೇಕರಿ ವ್ಯವಸ್ಥಾಪಕರಾದ ಶ್ರೀಮತಿ ಜೋತ್ಸಾö್ನ ಪೈ ನುಡಿದರು. ದಿನಾಂಕ ೦೭-೦೧- ೨೦೨೩ರಂದು ಬೆಳಗಾವಿಯ ಪ್ರತಿಷ್ಠಿತ ಆರ್.ಪಿ.ಡಿ ಮಹವಿದ್ಯಾಲಯ ದಲ್ಲಿ “ಯುತ್ ರೆಡ್‌ಕ್ರಾಸ್ ವಿಂಗ್”ದ ವತಿಯಿಂದ ಹಮ್ಮಿಕೊಳ್ಳಲಾದ “ಅನ್ನಬ್ರಹ್ಮ” ಉತ್ಸವದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು. ಗೌರವಾನ್ವಿತ ಅತಿಥಿಗಳಾಗಿ ಚಚಡಿಯ ಪ್ರಗತಿಪರ ರೈತ ಶ್ರೀ ನಾಗರಾಜ ದೇಸಾಯಿ ಅವರು ಆಗಮಿಸಿ, ಆಧುನಿಕ ಕೃಷಿ ಪದ್ಧತಿಯ ಕುರಿತು ಯುವ ಜನಾಂಗಕ್ಕೆ ತಿಳುವಳಿಕೆ ನೀಡಿದರು. ವಿಶೇಷ ಅತಿಥಿಗಳಾಗಿ ಆಗಮಿಸಿದ್ದ ಗುಂಡೇನಟ್ಟಿಯ ಪ್ರಗತಿಪರ ಸಾವಯವ ರೈತ ಶ್ರೀ ಶಂಕರ ಲಂಗಟಿ ಅವರು ಕೃಷಿಯು ಭಾರತ ದೇಶದ ಬೆನ್ನೆಲುಬು. ಇಂದಿನ ಯುವ ಜನಾಂಗ ಕೃಷಿ ಕ್ಷೇತ್ರದಲ್ಲಿ ಧುಮುP Àಬೇಕಾದ ಅಗತ್ಯ ನಿರ್ಮಾಣವಾಗಿದೆ. ಶಿಕ್ಷಿತ ಯುವ ಜನಾಂಗ ಕೃಷಿಯಲ್ಲಿ ಧುಮುಕಿದ್ದೇ ಆದರೆ ಇನ್ನೂ ನವೀನ ರೀತಿಯಲ್ಲಿ ಕೃಷಿ ಮಾಡಬಹುದಾ ಗಿದೆ ಎಂ ದರು. ಈ ಉತ್ಸವದಲ್ಲಿ ಎಸ್.ಕೆ.ಇ ಸಂಸ್ಥೆಯ ಸದಸ್ಯರಾದ ಶ್ರೀಮತಿ ಬಿಂಬಾ ನಾಡಕರ್ಣಿ, ಮಹಾವಿ ದ್ಯಾಲಯದ ಪ್ರಾಚಾರ್ಯೆ ಡಾ. ಅನುಜಾ ನಾಯಿಕ, ಯುತ್ ರೆಡ್ ಕ್ರಾಸ್ ವಿಂಗ್‌ದ ಮುಖ್ಯ ಸ್ಥರಾದ ಡಾ. ಸುನಂದಾ ಕಿತ್ತಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿ ತರಿದ್ದರು. ಆಹಾರ ಉತ್ಪಾದನಾ ಸ್ಪರ್ಧೆಯಲ್ಲಿ ವಿವಿಧ ಮಹಾ ವಿದ್ಯಾಲಯಗಳ ವಿದ್ಯಾರ್ಥಿಗಳು ಭಾಗಿಯಾ ಗಿದ್ದರು. ಸ್ಪರ್ಧೆಯಲ್ಲಿ ವಿಜೇತ ರಾದ ವಿದ್ಯಾರ್ಥಿಗಳಿಗೆ ಬಹು ಮಾನವನ್ನು ವಿತರಿಸಲಾಯಿತು.
Gadi Kannadiga > Local News > ಆರ್.ಪಿ.ಡಿ ಮಹಾವಿದ್ಯಾಲಯದಲ್ಲಿ ಅನ್ನಬ್ರಹ್ಮೋತ್ಸವ