This is the title of the web page
This is the title of the web page

Please assign a menu to the primary menu location under menu

international

ಕರ್ನಾಟಕ ಸಂಘ ಕತಾರಿನ ವಾರ್ಷಿಕೋತ್ಸವ


ದೋಹಾ, ಕತಾರ್ಕ : ರ್ನಾಟಕ ಸಂಘ ಕತಾರಿನ ವಾರ್ಷಿಕೋತ್ಸವವನ್ನು ಶುಕ್ರವಾರದಂದು ಸಂಜೆ ೫ ಗಂಟೆಗೆ ಭಾರತೀಯ ಸಾಂಸ್ಕೃತಿಕ ಕೇಂದ್ರದ (ಐ.ಸಿ.ಸಿ) ಅಶೋಕಾ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು. ಸಂಘದ ಮಹಿಳಾ ಕಾರ್ಯದರ್ಶಿ ಶ್ರೀಮತಿ ಸುಶೀಲ ಸುನೀಲ್ ಅವರು ಕಾರ್ಯಕ್ರಮದ ನಿರೊಪಕಿಯಾಗಿದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾರತೀಯ ದೂತಾವಾಸದಿಂದ ಘನವೆತ್ತ ರಾಯಭಾರಗಳಾದ ಶ್ರೀ ಡಾ|| ದೀಪಕ್ ಮಿತ್ತಲ್ ಆಗಮಿಸಿದ್ದರು. ಶ್ರೀಯುತರು ಕನ್ನಡದಲ್ಲಿ ಮಾತನಾಡಿ ಕರ್ನಾಟಕ ಸಂಘಕ್ಕೆ ಶುಭಕೋರಿದುದು ಪ್ರೇಕ್ಷಕರಿಗೆ ಆಶ್ಚರ್ಯ ಆನಂದವೆರಡಲ್ಲಿ ಒಮ್ಮೆಲೆ ನೀಡಿತು.
ಸಂಜೆಯ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ನಾಂದಿ ಹಾಡಲಾಯಿತು. ವಿಶೇಷ ಆಹ್ವಾನಿತರಾಗಿದ್ದ ಐ.ಸಿ.ಸಿ. ಅಧ್ಯಕ್ಷರಾದ ಶ್ರೀ ಬಾಬೂರಾಜನ್, ಐ.ಸಿ.ಸಿ ಉಪಾಧ್ಯಕ್ಷರಾದ ಶ್ರಿ ಸುಬ್ರಮಣ್ಯ ಹೆಬ್ಬಾಗಿಲು, ಕರ್ನಾಟಕ ಸಂಘ ಕತಾರಿನ ಪೂರ್ವಾಧ್ಯಕ್ಷರು ಹಾಗು ಸಲಹಾ ಸಮಿತಿ ಸದಸ್ಯರಾದ ಶ್ರೀ ವಿ.ಎಸ್.ಮನ್ನಂಗಿ, ಶ್ರೀ ದೀಪಕ್ ಶಟ್ಟಿ ಹಾಗು ಶ್ರೀ ಎಚ್.ಕೆ. ಮಧು ಅವರು ಉಪಸ್ಥಿತರಿದ್ದರು. ಇವರೊಂದಿಗೆ ಸ್ವರ್ಣ ಪ್ರಾಯೋಜಕರಲ್ಲೊಬ್ಬರಾದ ಶ್ರೀ ಸತೀಶ್ ಕುಮಾರ್ ಅವರು ಆಗಮಿಸಿದ್ದರು.
ವಾರ್ಷಿಕೋತ್ಸವದ ಅಂಗವಾಗಿ ಸಂಘದ ಆಡಳಿತ ಸಮಿತಿ ಸದಸ್ಯರಿಂದ ಶ್ರೀ ಡಿ.ಎಸ್. ಕರ್ಕಿ ವಿರಚಿತ “ಹಚ್ಚೇವು ಕನ್ನಡದ ದೀಪ..” ಹಾಡನ್ನು ಎಲ್ಲರೂ ಅನಂದಿಸಿ, ನಂತರ ಆ ಸಾಲುಗಳು ಕಿವಿಯಲ್ಲಿ ಗುನುಗುವಂತಾಯಿತು.
ಸಾರ್ವಜನಿಕ ಸಭೆಯಲ್ಲಿ ಸಂಘದ ವಾರ್ಷಿಕ ವಿಶೇಷ ಸಂಚಿಕೆ “ಶ್ರೀಗಂಧ-೨೦೨೧” ಮುಖ್ಯ ಅತಿಥಿಗಳು ಹಾಗು ವೇದಿಕೆ ಮೇಲಿನ ಗಣ್ಯರಿಂದ ಬಿಡುಗಡೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಕನ್ನಡ ತರಗತಿ ನಡೆಸುತ್ತಿರುವ ನಾಲ್ಕು ಶಿಕ್ಷಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಶ್ರೀ ಪ್ರದೀಪಕುಮಾರ್ ದಿಲೀಪ್, ಶ್ರೀ ವಸಂತ್ ಕುಮಾರ್, ಶ್ರೀ ಯೋಗೀಶ್ ಪೈ ಹಾಗು ಶ್ರೀಮರಿ ಕಲಾವತಿ ಶೆಟ್ಟಿ ಅವರು ಸುಮಾರು ೫ ವರ್ಷಗಳಿಂದ ಪ್ರತಿ ಶುಕ್ರವಾರ ಕನ್ನಡ ತರಗತಿಯನ್ನು ನಡೆಸುತ್ತಾ ಬಂದಿರುವರು. ಕತಾರ್ ದೇಶದಲ್ಲಿ, ಶಾಲೆಯ ಶಿಕ್ಷಣದ ಅಂಗವಾಗಿ ಭಾರತೀಯ ಮೂಲದ ಭಾಷೆಗಳು ಕಡಿಮೆ, ಅದರಲ್ಲೂ ಕನ್ನಡ ಎಲ್ಲಾ ಶಾಲೆಯಲ್ಲು ಇಲ್ಲದ ಕಾರಣ ಕತಾರ್ ಕರ್ನಾಟಕ ಸಂಘದ ಅಡಿಯಲ್ಲಿ ಸುಮಾರು ಒಂದು ದಶಕದಿಂದ ಕನ್ನಡ ಕಲಿಕಾ ಕಾರ್ಯಕ್ರಮವು ಸಾಗುತ್ತಾ ಬಂದಿದೆ.
ಮನೋರಂಜನಾ ಕಾರ್ಯಕ್ರಮಗಳ ಸರಣಿಯಲ್ಲಿ ಮಕ್ಕಳಿಂದ ಸ್ವಾಗತ ನೃತ್ಯ ಅದ್ಭುತವಾಗಿತ್ತು. ನಂತರ ಪ್ರಾದೇಶಿಕ ನೃತ್ಯ ರೂಪಕ, ಹೆಣ್ಣು ಮಗುವಿನ ಪ್ರಾಮುಖ್ಯತೆಯ ಬಗ್ಗೆ ಒಂದು ಪ್ರಹಸನ ಹಾಗು ಕೊನೆಯಲ್ಲಿ ಶ್ರೀ ಪುನೀತ್ ರಾಜ್ ಕುಮಾರ್ ಅವರ ನೆನಪಿಗೆ ಅವರ ಹಾಡುಗಳಿಗೆ ಕಿನ್ನರರು ಕುಣಿದು ’ಅಪ್ಪು’ ಗೆ ಪ್ರತಿಭೆಯ ಮೂಲಕ ನಮಿಸಿದರು. ಎಲ್ಲಾ ಪ್ರೇಕ್ಷಕರು ತಮ್ಮ ಆಸನದಿಂದ ಎದ್ದು ಚಪ್ಪಾಳೆ ನೀಡುತ್ತಾ ಕಲಾವಿದರಿಗೆ ಹಾಗು ಯುವರತ್ನರಿಗೆ ವಂದನೆ ಸಲ್ಲಿಸಿದರು.
ಪ್ರೇಕ್ಷಕರೆಲ್ಲರೂ ಮನೋರಂಜನಾ ಕಾರ್ಯಕ್ರಮದಿಂದ ಸಂತಸಗೊಂಡು ತಮ್ಮ ಪ್ರೋತ್ಸಾಹವನ್ನು ಕರತಾಡನಗಳಿಂದ ಪ್ರತಿಕ್ರಯಿಸಿದರು.


Gadi Kannadiga

Leave a Reply