ಬೆಳಗಾವಿ:- ಕೆ ಎಲ್ ಇ ಸಂಗೀತ ಮಹಾವಿದ್ಯಾಲಯದ ವಾರ್ಷಿಕೋತ್ಸವು ಯಶಸ್ವಿಯಾಗಿ ಜರುಗಿತು. ಪ್ರತಿ ವರ್ಷದಂತೆ ಸಂಗೀತ ಮಹಾವಿದ್ಯಾಲಯದ ವಾರ್ಷಿಕೋತ್ಸವವು ದಿವಂಗತ ಪಂಡಿತ್ ಹಯವದನ ಜೋಶಿ ಇವರ ಸ್ಮರಣಾರ್ಥ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಸುತ್ತಾ ಬಂದಿದ್ದು , ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಬೆಳಗಾವಿಯ ಸುಪ್ರಸಿದ್ಧ ಹಿರಿಯಗಾಯಕರಾದ ಪಂಡಿತ್ ನಂದನ್ ಹೇರಲೇಕರ ಗುರುಗಳು ಉಪಸ್ಥಿತರಿದ್ದರು. ಹಾಗೂ ಡಾಕ್ಟರ್ ರಾಜೇಂದ್ರ ಭಾಂದಂಕರ್ ಉಪಸ್ಥಿತರಿದ್ದರು. ಮುಖ್ಯ ಅತಿಥಿಗಳು ತಮ್ಮ ಭಾಷಣದಲ್ಲಿ ಸಂಗೀತದ ಶಾಲೆಯ ಏಳಿಗೆಯ ಬಗ್ಗೆ ಪ್ರಶಂಶಿಸಿದರು. ಹಾಗೂ ಸಂಗೀತ ಸಾಧನೆಯ ಬಗ್ಗೆ ವಿವರವಾಗಿ ತಿಳಿಸಿದರು. ಸಂಗೀತ ಮಹಾವಿದ್ಯಾಲಯದಿಂದ ನಂದನ್ ಹೇರಲೇಕರ್ ಗುರುಗಳಿಗೆ ಸನ್ಮಾನಿಸಲಾಯಿತು.
ಹಾಗೆ ಯೆ ಸಂಗೀತ ವಿಭಾಗದ ಹಾರ್ಮೋನಿಯಂ ವಾದಕರಾದ ಶ್ರೀ ಯಾದವೇಂದ್ರ ಪೂಜಾರಿಯವರು ಇತ್ತೀಚಿಗಷ್ಟೇ ರಾಜ್ಯ ಪ್ರಶಸ್ತಿ ಪಡೆದ ನಿಟ್ಟಿನಲ್ಲಿ ಅವರನ್ನು ಸಂಗೀತ ವಿಭಾಗ ದಿಂದ ಸನ್ಮಾನಿಸಲಾಯಿತು.ನಂತರ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಬೆಳಗಾವಿಯ ಸುಪ್ರಸಿದ್ಧ ತಬಲಾಪಟು ಶ್ರೀ ವಿಶಾಲ್ ಮೋಡಕ್ ಹಾಗೂ ಅವರ ಶಿಷ್ಯಂದಿರು, ಅದ್ಭುತವಾಗಿ ತಬಲಾ ಕಾರ್ಯಕ್ರಮವನ್ನು ನೀಡಿ ಶೋತ್ರುಗಳಿಗೆ ಬೆರಗು ಮೂಡಿಸಿದರು. ತದನಂತರ ಇನ್ನೋರ್ವ ಯುವ ಕಲಾವಿದ ಶ್ರೀ ಲಲಿತ್ ಮೇವುಂಡಿ ಇವರು ತಮ್ಮ ಶಾಸ್ತ್ರೀಯ ಸಂಗೀತದಲ್ಲಿ ರಾಗ ಪುರಿಯಾ ಧನಶ್ರೀ ಪ್ರಸ್ತುತಪಡಿಸಿದರು. ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಗೀತೆ ಅತ್ಯಂತ ಸುಶ್ರಾವ್ಯ ವಾಗಿ ಮೂಡಿಬಂದಿತು. ಸಂಗೀತ ವಿಭಾಗದ ಎಲ್ಲ ವಿದ್ಯಾರ್ಥಿ ವಿದ್ಯಾರ್ಥಿನಿಯರು ಹಾಗೂ ಬೆಳಗಾವಿಯ ಎಲ್ಲ ಹಿರಿಯ ಕಲಾವಿದರು ಯುವ ಕಲಾವಿದರು ಉಪಸ್ಥಿತರಿದ್ದರು. ಈ ಕಾರ್ಯಕ್ರಮಕ್ಕೆ ತಬಲಾಸಾತ್ ಶ್ರೀ ರಾಹುಲ್ ಮಂಡೋಳ್ಕರ್, ಹಾಗೂ ಜಿತೇಂದ್ರ ಸಾಬಣ್ಣವರ ಹಾರ್ಮೋನಿಯಂ ಸಾಥ್ ಶ್ರೀ ಯಾದವೆಂದ್ರ ಪೂಜಾರಿ ಅವರು ಮಾಡಿದರು. ಡಾಕ್ಟರ್ ರಾಜೇಂದ್ರ ಭಾಂದಂಕಾರ್ ಸಂಗೀತದ ಶಾಲೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ಸ್ವಾಗತವನ್ನು ಡಾ. ಸುನೀತಾ ಪಾಟೀಲ ಮಾಡಿದರು. ಡಾಕ್ಟರ್ ದುರ್ಗಾ ನಾಡ ಕರಣಿ ನಿರೂಪಿಸಿ ದರು, ಪ್ರತಿಭಾ ಕಳ್ಳಿಮಠ ಅತಿಥಿಗಳ ಅತಿಥಿಗಳನ್ನು ಪರಿಚಯಿಸಿದರು.
Gadi Kannadiga > Local News > ಕೆ ಎಲ್ ಇ ಸಂಗೀತ ಮಹಾವಿದ್ಯಾಲಯದ ವಾರ್ಷಿಕೋತ್ಸವ