This is the title of the web page
This is the title of the web page

Please assign a menu to the primary menu location under menu

Local News

ಲಿಂಗಾಯತ ಮಹಿಳಾ ಸಮಾಜದ ವಾರ್ಷಿಕೋತ್ಸವ


ಬೆಳಗಾವಿ:ಜುಲೈ-೧೯: ಬೆಳಗಾವಿಯ ಲಿಂಗಾಯತ ಮಹಿಳಾ ಸಮಾಜದ ವಾರ್ಷಿಕೋತ್ಸವ ಹಾಗೂ ಗಾನತೋರಣ ಲಿಂಗಾಯತ ಮಹಿಳಾ ಸಮಾಜದ ೨೦೨೨-೨೩ರ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಮನರಂಜನಾ ಕಾರ್ಯಕ್ರಮ ಜರುಗಿತು.
ಲಿಂಗಾಯತ ಮಹಿಳಾ ಸಮಾಜದ ಸಂಸ್ಥಾಪಕ ಅಧ್ಯಕ್ಷೆ ಶೈಲಜಾ ಭಿಂಗೆ ನೇತೃತ್ವದಲ್ಲಿ ಅಧ್ಯಕ್ಷರಾಗಿ ವೀಣಾ ಚಿನ್ನಣ್ಣವರ, ಕಾರ್ಯದರ್ಶಿಯಾಗಿ ಗೀತಾ ಗುಂಡಕಲ್ಲಿ, ಸಹ ಕಾರ್ಯದರ್ಶಿಯಾಗಿ ಮಾಧುರಿ ಉಪ್ಪಿನ, ಕೋಶಾಧ್ಯಕ್ಷರಾಗಿ ರಶ್ಮಿ ಪಾಟೀಲ್, ಸದಸ್ಯರಾಗಿ ಶ್ರೀಮತಿ ರಾಜೇಶ್ವರಿ ಪಾಟೀಲ್, ರತ್ನಾ ಜೊಂಡ, ಶೈಲಾ ವಿರುಪಾಕ್ಷಿ, ರೂಹಿ ಬೆಲ್ಲದ, ಸಂಗೀತಾ ಸುಲ್ತಾನಪುರಿ, ಉಮಾ ಶಿಗೀಹಳ್ಳಿ, ಸವಿತಾ ತಾರಳಿ, ರಾಧಾ ಮುಂಗರವಾಡಿ, ಸುನೀತಾ ದೇಸಾಯಿ, ಚಂದಾ ಚೌಗಲೆ, ಶ್ವೇತಾ ಚೆನ್ನಾವರ್ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಲಿಂಗಾಯತ ಮಹಿಳಾ ಸಮಾಜದ ಕಾರ್ಯದರ್ಶಿ ಸಂಗೀತಾ ಅಕ್ಕಿ ಮಾತನಾಡಿ, ” ಲಿಂಗಾಯತ ಸಮಾಜದ ಮಹಿಳೆಯರು ಸಾಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಬೆಳೆಯಬೇಕಿದೆ. ಸಮಾಜದ ಸಂಘಟನೆ ಬಲಗೊಳ್ಳುವ ದೃಷ್ಟಿಯಿಂದ ಹೊಸ ಮುಖಗಳಿಗೆ ಅಧಿಕಾರ ಹಸ್ತಾಂತರಿಸಲಾಗುತ್ತಿದೆ. ಹೀಗಾಗಿ ಸಮಾಜದ ಹೆಚ್ಚಿನ ಸಂಖ್ಯೆಯ ಮಹಿಳೆಯರನ್ನು ತಲುಪಬೇಕಿದೆ” ಎಂದರು.
ಇದೇ ಸಂದರ್ಭದಲ್ಲಿ ವೇಳೆ ಮಹಿಳಾ ಸಮಾಜದ ಸದಸ್ಯರು ಹೇಮರೆಡ್ಡಿ ಮಲ್ಲಮ್ಮನವರ ಹಾಡುಗಳನ್ನ ಹಾಡಿದರು. ಮಹಿಳಾ ಸದಸ್ಯೆಯರು ವಿವಿಧ ಹಾಡುಗಳಿಗೆ ನೃತ್ಯ ಪ್ರದರ್ಶನ ಮಾಡಿದರು.ಕಾರ್ಯಕ್ರಮದಲ್ಲಿ ಮರಾಠಿ ಲಾವಣಿ ಹಾಡಿನ ನೃತ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಲಿಂಗಾಯತ ಮಹಿಳಾ ಸಮಾಜದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.


Gadi Kannadiga

Leave a Reply