ಬೆಳಗಾವಿ: ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ನಂದಗಡ ವಲಯ ನಂದಗಡ ಕಾರ್ಯಕ್ಷೇತ್ರದಲ್ಲಿ ತೃಪ್ತಿ ಜ್ಞಾನ ವಿಕಾಸ ಕೇಂದ್ರದಲ್ಲಿ ವಾರ್ಷಿಕೋತ್ಸವ ಆಯೋಜಿಸಲಾಗಿತ್ತು. ಈ
ಕಾರ್ಯಕ್ರಮದ ಅಧ್ಯಕ್ಷತೆ ಜಿಲ್ಲಾ ಜನ ಜಾಗೃತಿ ವೇದಿಕೆ ಸದಸ್ಯರಾದ ಶಂಕರ್ ಸೋನೋಲಿ ಅವರು ವಹಿಸಿದರು. ಕಾರ್ಯಕ್ರಮದ ಉದ್ಘಾಟಕರಾಗಿ ತಾಲ್ಲೂಕಿನ ಮಾನ್ಯ ಯೋಜನಾಧಿಕಾರಿ ಗಣಪತಿ ನಾಯ್ಕ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಹೇಮಾವತಿ ಅಮ್ಮನವರ ಕನಸಿನ ಕೂಸು ಜ್ಞಾನ ವಿಕಾಸ ಕಾರ್ಯಕ್ರಮ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಲ್ಲ ಮಹಿಳೆಯರ ಸಬಲೀಕರಣ ವಾಗಬೇಕಾಗಿದೆ .ಆ ದೃಷ್ಟಿಯಿಂದ ಹೇಮಾವತಿ ಅಮ್ಮನವರು ಎಲ್ಲ ಮಹಿಳೆಯರಿಗೆ ಜ್ಞಾನ ಹೆಚ್ಚಿಸಿಕೊಳ್ಳಲು ಮತ್ತು ತಮ್ಮ ಕುಟುಂಬದ ಅಬಿವೃದ್ಧಿ ತಾವು ಮಾಡಿಕೊಳ್ಳುವ ದೃಷ್ಟಿಯಿಂದ ಪ್ರತಿ ತಿಂಗಳು ಕೌಟುಂಬಿಕ ಸಾಮರಸ್ಯ, ಆರೋಗ್ಯ ನೈರ್ಮಲ್ಯ,ಶಿಕ್ಷಣ,ಸರಕಾರಿ ಸೌಲಭ್ಯ ,ಕಾನೂನು ಹೀಗೆ ಹಲವಾರು ವಿಷಯಗಳ ಬಗ್ಗೆ ಮಾಹಿತಿ ಕೊಡಿಸಿ ಪ್ರತಿ ತಾಲ್ಲೂಕಿನಲ್ಲಿ ೨೫ ಕೇಂದ್ರಗಳನ್ನು ಮಾಡಿ ಪ್ರತಿ ಹಳ್ಳಿ ಹಳ್ಳಿಗಳಲ್ಲಿ ಮಾಹಿತಿಯನ್ನು ಕೊಡಿಸುತಿದಾರೆ ಅದರ ಉಪಯೋಗ ಎಲ್ಲರೂ ಪಡೆದುಕೊಳ್ಳಿ ಎಂದು ಹೇಳಿದರು. ಜ್ಞಾನ ವಿಕಾಸ ಕಾರ್ಯಕ್ರಮದಡಿಯಲ್ಲಿ ಇವತ್ತು ರಂಗೋಲಿ ಸ್ಪರ್ಧೆ, ಲಿಂಬು ಚಮಚ, ಸಂಗೀತ ಕುರ್ಚಿ, ಹಾಡಿನ ಸ್ಪರ್ಧೆ ಹೀಗೆ ಬೇರೆ ಬೇರೆ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಒಕ್ಕೂಟದ ಅಧ್ಯಕ್ಷ ರಾಜಶ್ರೀ ಹುದಲಿಮಠ ,ಕೇಂದ್ರದ ಅಧ್ಯಕ್ಷರಾಗಿ ಶಾಕುಂತಲ ಹುಳಬುತ್ತಿ ,ಸೇವಾ ಪ್ರತಿನಿಧಿಗಳು ರಾಜಶ್ರೀ ಕಬ್ಬುರ ಸುಶೀಲಾ ಬೋಟೆಕರ,ಸಂಜನಾ ದಬ್ಬಾಲೇ, ಸಿ ಎಸ್ ಸಿ ಸೇವಾದಾರರು ಅರ್ಚನಾ ,ಜ್ಯೋತಿ,ಹಾಗೂ ಕೇಂದ್ರದ ಎಲ್ಲ ಸದಸ್ಯರು ಉಪಸ್ಥಿತರಿದ್ದರು. ನಂದಗಡ ವಲಯದ ಮೇಲ್ವಿಚಾರಕರಾದ ಮಹಾಂತೇಶ್ ದೂಳಿಕೊಪ್ಪ ಅವರು ಸ್ವಾಗತಿಸಿದರು. ಜ್ಞಾನವಿಕಾಸ ಸಮನ್ವಯ ಅಧಿಕಾರಿ ಸುರೇಖಾ ಕೋಳಿ ನಿರೂಪಿಸಿ ವಂದಿಸಿದರು.
Gadi Kannadiga > Local News > ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ತೃಪ್ತಿ ಜ್ಞಾನ ವಿಕಾಸ ಕೇಂದ್ರದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ
ಶ್ರೀ ಕ್ಷೇತ್ರ ಧರ್ಮಸ್ಥಳ ಯೋಜನೆಯಿಂದ ತೃಪ್ತಿ ಜ್ಞಾನ ವಿಕಾಸ ಕೇಂದ್ರದಲ್ಲಿ ವಾರ್ಷಿಕೋತ್ಸವ ಕಾರ್ಯಕ್ರಮ
Suresh14/08/2023
posted on
