ಸವದತ್ತಿ : ಸ್ಥಳೀಯ ಅಕ್ಕಿ ಓಣಿಯ ಅನುಪಮಾ ಶ್ರೀಶೈಲ ಹಿರೇಹೊಳಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ೬೨೫ಕ್ಕೆ ೬೨೫ ಅಂಕಗಳನ್ನು ಗಳಿಸಿ ರಾಜ್ಯದ ಕೀರ್ತಿ ಹೆಚ್ಚಿಸಿದ್ದಾರೆ.
ಸ್ಥಳೀಯ ಕುಮಾರೇಶ್ವರ ಪ್ರೌಡಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ವಿಷಯವಾರು ಇಂಗ್ಲಿಷ್ ೧೨೫.ಕನ್ನಡ ೧೦೦.ಹಿಂದಿ ೧೦೦.ಗಣಿತ ೧೦೦.ವಿಜ್ಞಾನ ೧೦೦.ಸಮಾಜ ವಿಜ್ಞಾನ ೧೦೦. ಹೀಗೆ ಎಲ್ಲಾ ವಿಷಯಗಳಲ್ಲಿ ಪೂರ್ಣ ಅಂಕಗಳನ್ನು ಪಡೆದು ಮಾದರಿಯಾಗಿದ್ದಾಳೆ. ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅನುಪಮಾ, ಶಾಲೆಯ ಪ್ರಾರಂಭದ ದಿನದಿಂದಲೇ ಶಿಕ್ಷಕರ ಮಾರ್ಗದರ್ಶನದಂತೆ ಅಭ್ಯಾಸ ಮಾಡಲು ಪ್ರಾರಂಭ ಮಾಡಿದೆ. ಯಾವದೇ ಮನರಂಜನೆಗೆ ಸಮಯ £Ãಡದೇ ಸದಾ ಅಧ್ಯಯನದಲ್ಲಿ ಸಮಯ ಕಳೆಯುತ್ತಿದ್ದೆ. ಮದುವೆ, ಸಮಾರಂಭಗಳಿಗೆ ಹೋಗುತ್ತಿರಲಿಲ್ಲ. ಮೊಬೈಲ್ನಲ್ಲಿ ವಿಷಯಕ್ಕೆ ಸಂಬಂಧಿಸಿದ ದಿಕ್ಸೂಚಿಗಳನ್ನು ಹುಡುಕಿ ಓದುತ್ತಿದ್ದೆ. ಪರೀಕ್ಷೆಯಲ್ಲಿ ಶೇ ೧೦೦ ರಷ್ಟು ಅಂಕ ಪಡೆಯುವದಾಗಿ ಶಿಕ್ಷಕರಿಗೆ ಮೊದಲೇ ತಿಳಿಸಿದ್ದೆ. ಅದರಂತೆ ಅಂಕ ಲಭಿಸಿದ್ದು ಖುಷಿ £Ãಡಿದೆ. ಭವಿಷ್ಯದಲ್ಲಿ ಐಎಎಸ್ ಅಧಿಕಾರಿ ಆಗುವ ಕನಸು ಇದೆ ಎಂದು ಉತ್ತರಿಸಿದಳು.
ತಾಯಿ ರಾಜೇಶ್ವರಿ ಹಿರೇಹೊಳಿ ಮಾತನಾಡಿ ಪುಸ್ತಕಗಳೇ ಅವಳ ಪ್ರಪಂಚವಾಗಿತ್ತು. ಶಾಲೆಯಿಂದ ಬಂದ ತಕ್ಷಣ ತನ್ನ ಅಭ್ಯಾಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಳು. ೨೦೨೧ ರಲ್ಲಿ ನನ್ನ ಪತಿ ಬೆನ್ನು ಮೂಳೆಯ ನರ ಸಮಸ್ಯೆಯಿಂದ £ಧನರಾದ ನಂತರ ಕುಟುಂಬದ £ರ್ವಹಣೆ ಕಷ್ಟಕರವಾಗಿತ್ತು.
ನಂತರ ಜೋಶಿ ಫೌಂಡೇಶನ್‌ನಲ್ಲಿ ಕೆಲಸ ಸಿಕ್ಕು ಮನೆಯ ಜವಾಬ್ದಾರಿ £ಭಾಯಿಸುತ್ತಿದ್ದೆನೆ. ಅದರಿಂದ ಬರುವ ಸಂಬಳ ಮಕ್ಕಳ ಶಿಕ್ಷಣಕ್ಕೆ, ಕುಟುಂಬ £ರ್ವಹಣೆಗೆ ಸಾಲದು. ಮಗಳು ಐಎಎಸ್ ಓದುವ ಕನಸನ್ನು ಕಂಡಿದ್ದಾಳೆ. ಅದರಂತೆ ಈ ಅಂಕವನ್ನು ಗಮ£ಸಿದರೆ ಅವಳು ಏನನ್ನಾದರೂ ಸಾಧಿಸುವಳು ಎಂಬ ವಿಶ್ವಾಸ ಮೂಡಿದೆ. ಅವಳ ಕನಸನ್ನು ನನಸಾಗಿಸಲು ಆರ್ಥಿಕ ಸಹಾಯದ ಅಗತ್ಯವಿದೆ ಎಂದರು.
ಈ ವೇಳೆ ಕರ್ನಾಟಕ ರಾಜ್ಯ ಪತ್ರಕರ್ತರ ಧ್ವ£ ಸಂಘದಿಂದ ೧೦ಸಾವಿರ ರೂ.ಸಹಾಯಧನ £Ãಡಿ ಪ್ರೋತ್ಸಾಹಿಸಲಾಯಿತು.
ಜಿಲ್ಲೆಗೆ ಕೀರ್ತಿ ತಂದ ವಿದ್ಯಾರ್ಥಿ£ ಮನೆಗೆ ಆಗಮಿಸಿದ ಡಿಡಿಪಿಐ ಬಸವರಾಜ ನಾಲತವಾಡ, ಕ್ಷೇತ್ರ ಶಿಕ್ಷಣಾಧಿಕಾರಿ,ಶಿಕ್ಷಕ ವೃಂದ ಹಾಗೂ ಕುಟುಂಬದವರು ಇವಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Gadi Kannadiga > Local News > ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುಪಮಾಗೆ ೬೨೫ಕ್ಕೆ ೬೨೫ ಅಂಕ
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅನುಪಮಾಗೆ ೬೨೫ಕ್ಕೆ ೬೨೫ ಅಂಕ
Suresh09/05/2023
posted on
