This is the title of the web page
This is the title of the web page

Please assign a menu to the primary menu location under menu

Local News

ಬಿಜೆಪಿ ಕೋರ್ ಮೀಟಿಂಗ್ ಸಭೆಗೆ ಮುತ್ತಿಗೆ ಹಾಕಿದ ಆಪ್ ಕಾರ್ಯಕರ್ತರು


ಬೆಳಗಾವಿ: ಈಶ್ವರಪ್ಪ ವಿರುದ್ಧ ಕಮಿಷನ್ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ್ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಹಿನ್ನೆಲೆಯ ಬೆಳಗಾವಿ ಆಮ್ ಆದ್ಮಿ ಕಾರ್ಯಕರ್ತರು ಬಿಜೆಪಿ ಕೋರ ಮೀಟಿಂಗ್ ಸಭೆ ನಡೆಸುತ್ತಿದ್ದ ಹೊಟೆಲ್ ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಮಂಗಳವಾರು ಬಿಜೆಪಿ ನಾಯಕರು ಕೋರ್ ಮೀಟಿಂಗ್ ನಡೆಸುತ್ತಿದ್ದ ಸಂಕಮ್ ಹೊಟೆಲ್ ಗೆ ರಾಜು ಟೋಪಣ್ಣವರ ನೇತೃತ್ವದಲ್ಲಿ ಆಫ್ ಕಾರ್ಯಕರ್ತರು  ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಸಚಿವ ಈಶ್ವರಪ್ಪ 40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆಂದು ಕಮಿಷನ್ ಆರೋಪ ವಿಚಾರವಾಗಿ ಆರೋಪ ಮಾಡಿದ್ದ ಗುತ್ತಿಗೆದಾರ ಸಂತೋಷ ಪಾಟೀಲ್ ನನ್ನ ಸಾವಿಗೆ ಸಚಿವ ಈಶ್ವರಪ್ಪ ಅವರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಉಡುಪಿಯ ಲಾಜ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂತೋಷ ಪಾಟೀಲ್ ಆತ್ಮಹತ್ಯೆಗೆ ಭ್ರಷ್ಟ ಬಿಜೆಪಿಯೇ ಕಾರಣ ಎಂದು ರಾಜ್ಯ ಸರಕಾರದ ವಿರುದ್ಧ ಮತ್ತು ಸಚಿವ ೀಶ್ವರಪ್ಪ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ರಾಜು ಟೋಪಣ್ಣವರ ಅವರು ಮಾತನಾಡಿ ಕೋರ ಕಮೀಟಿ ಸಭೆ ಮಾಡುತ್ತಿರುವ ಎಲ್ಲರು ಕೊಲೆಗಡುಕರು. ಬಿಜೆಪಿಯವರೇ ಬಿಜೆಪಿಯ ಕಾರ್ಯಕರ್ತನಾಗಿದ್ದ ಸಂತೋಷ ಪಾಟೀಲ ಅವರನ್ನು ಹತ್ಯೆ ಮಾಡಿದ್ದಾರೆ. ಈಶ್ವರಪ್ಪ ಕಮಿಷನ್ ಕುರಿತು ಸಂತೋಷ ಪ್ರಧಾನ ಮಂತ್ರಿಯವರಿಗೂ ಪತ್ರ ಬರೆದಿದ್ದರು. ಆತನ ಮೇಲೆ ಈಶ್ವರಪ್ಪ ಸೇರಿದಂತೆ ಬಿಜೆಪಿಯವರು ಮಾನಸಿಕ ಒತ್ತಡ ಹೇರಿ ಆವರ ಸಾವಿಗೆ ಕಾರಣರಾಗಿದ್ದಾರೆ. ಸಚಿವ ಈಶ್ವರಪ್ಪ ಅವರನ್ನು ರಕ್ಷಿಸುವುದನ್ನು ಬಿಟ್ಟು ಕೂಡಲೆ ಅವರನ್ನು ಬಂಧಿಸಬೇಕೆಂದು ಹೇಳಿದರು.

ಸಚಿವ ಈಶ್ವರಪ್ಪ ಅವರನ್ನು ಬಂಧಿಸುವವರೆಗೂ ಪ್ರತಿಭಟನೆಯನ್ನು ಹಿಂಪಡೆಯುದಿಲ್ಲ ಎಂದು ಆಪ್ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸಿದರು ಕೂಡಲೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡರು.

 


Leave a Reply