ಕುಷ್ಟಗಿ :- ಕೊಪ್ಪಳ ಜಿಲ್ಲೆಯ ಬಹುದಿನಗಳ ಬೇಡಿಕೆಯಾದ ಕೃಷ್ಣ ಬಿ ಸ್ಕೀಮ್ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನಾರಾಯಣಗೌಡ ಬಣದ ವತಿಯಿಂದ ಕುಷ್ಟಗಿ ತಹಸೀಲ್ದಾರ್ ಅಶೋಕ್ ಶಿಗ್ಗಾವಿ ರವರ ಮೂಲಕ ನೀರಾವರಿ ಸಚಿವರಾದ ಡಿಕೆ ಶಿವಕುಮಾರ್ ರವರಿಗೆ ಮನವಿ ಸಲ್ಲಿಸಲಾಯಿತು.
ಕೊಪ್ಪಳ ಏತ ನೀರಾವರಿ ಯೋಜನೆಯನ್ನು ಕುಷ್ಟಗಿ ಯಲಬುರ್ಗಾ ಕೊಪ್ಪಳ ಮತ್ತು ಕನಕಗಿರಿ ತಾಲೂಕುಗಳಿಗೆ ಕೃಷಿ ಜಮೀನುಗಳಿಗೆ ನೀರಾವರಿ ಸೌಕರ್ಯ ಕಲ್ಪಿಸಿ ಜಿಲ್ಲೆಯ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಅಂದಿನ ಸರ್ಕಾರದ ಮುಖ್ಯಮಂತ್ರಿಗಳಾದ ಜಗದೀಶ್ ಶೆಟ್ಟರ್ ಹಾಗೂ ನೀರಾವರಿ ಸಚಿವರಾಗಿದ್ದ ಬಸವರಾಜ್ ಬೊಮ್ಮಾಯಿ ಅವರು ಕುಷ್ಟಗಿ ತಾಲೂಕು ಕಲಾಲ ಬಂಡಿ ಗ್ರಾಮದ ಬಳಿ ಅಡಿಗಲ್ಲು ಹಾಕಿದ್ದರು.ಆದರೆ ಕಾಮಗಾರಿ ಇಷ್ಟು ದಿನಗಳು ಕಳೆದರೂ ಪೂರ್ಣವಾಗಿಲ್ಲ.ಅದಕ್ಕಾಗಿ ಈ ನೀರಾವರಿ ಯೋಜನೆಯನ್ನು ಆದಷ್ಟು ಬೇಗ ಕೈಗೆತ್ತಿಕೊಂಡು ಕಾಮಗಾರಿಯನ್ನು ಸಂಪೂರ್ಣ ಮಾಡಿಕೊಡಬೇಕು ಎಂದು ನೀರಾವರಿ ಸಚಿವರಿಗೆ ಒತ್ತಾಯಿಸಿದ್ದಾರೆ.
ತಾಲೂಕ ಗೌರವಾಧ್ಯಕ್ಷ ಆದಪ್ಪ ಉಳ್ಳಾಗಡ್ಡಿ, ತಾಲೂಕ ಅಧ್ಯಕ್ಷ ಪ್ರಕಾಶ ಮನ್ನೇರಾಳ ,ಉಪಾಧ್ಯಕ್ಷ ಚನ್ನಪ್ಪ ನಾಲಗಾರ ,ಅಶೋಕ್ ಮಿಸ್ಕೀನ್ , ಪರಸಪ್ಪ ಅಳ್ಳಳ್ಳಿ ಮಹೇಶ ಸೇರಿದಂತೆ ಕರವೇ ಸದಸ್ಯರು ಉಪಸ್ಥಿತರಿದ್ದರು.