This is the title of the web page
This is the title of the web page

Please assign a menu to the primary menu location under menu

Local News

ಯರಗಟ್ಟಿಯಲ್ಲಿ ಸಾಹಿತ್ಯ ಪರಿಷತ್ತಿಗೆ ನಿವೇಶನ ನೀಡಲು ಡಿ.ಸಿಯವರಿಗೆ ಮನವಿ

???????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????????

ಬೆಳಗಾವಿ-೨೯- ಬೆಳಗಾವಿ ಜಿಲ್ಲೆಯ ಯರಗಟ್ಟಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಘಟಕಕ್ಕೆ ಸೂಕ್ತ ನಿವೇಶನ ನೀಡಬೇಕೆಂದು ಆಗ್ರಹಿಸಿ ಜಿಲ್ಲಾ ಪರಿಷತ್ತ ಘಟಕ ಹಾಗೂ ಯರಗಟ್ಟಿ ತಾಲೂಕಾ ಘಟಕದ ಆಶ್ರಯದಲ್ಲಿ ಮಂಗಳವಾರ ಜಿಲ್ಲಾಧಿಕಾರಿಗಳಾದ ಸನ್ಮಾನ್ಯ ಶ್ರೀ. ನಿತೇಶ ಪಾಟೀಲ ಅವರಿಗೆ ಪಧಾದಿಕಾರಿಗಳು ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ ಕಸಾಪ ಜಿಲ್ಲಾಧ್ಯಕ್ಷೆö್ಯ ಮಂಗಳಾ ಮೆಟಗುಡ್ಡ ಅವರು ಜಿಲ್ಲಾಧಿಕಾರಿಗೆ ಮನವಿ ಅರ್ಪಿಸಿ ಮಾತನಾಡಿ, ನಾಡು-ನುಡಿ ನೆಲ-ಜಲ ಸಂರಕ್ಷಣೆಯಲ್ಲಿ ಸಾಹಿತ್ಯ ಪರಿಷತ್ತ ಸದಾ ಮುಂಚೂಣಿಯಲ್ಲಿದ್ದು ರಚನಾತ್ಮಕ ಕಾರ್ಯಗಳನ್ನು ಮಾಡುತ್ತಿದೆ. ಯರಗಟ್ಟಿ ನೂತನ ತಾಲೂಕು ರಚನೆಯ ನಂತರ ತಾಲೂಕಾ ಘಟಕ ಅಸ್ಥಿತ್ವಕ್ಕೆ ಬಂದಿದ್ದು ಕಳೆದ ಮೂರು ವರ್ಷಗಳಿಂದ ಈ ಭಾಗದಲ್ಲಿ ಉತ್ತಮ ಕೆಲಸಗಳನ್ನು ಕೈಗೊಂಡಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ್ ಜವಾಬ್ದಾರಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತಾಲೂಕಾ ಘಟಕಕ್ಕೆ ಸ್ವಂತ ಕಛೇರಿ, ಸಭಾಂಗಣ, ವಾಚನಾಲಯ, ಸೇರಿದಂತೆ ಜಿಲ್ಲಾ ಹಾಗೂ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕೈಗೊಳ್ಳಲು ಅನುಕೂಲವಾಗುವ ದೃಷ್ಟಿಯಲ್ಲಿ ಯರಗಣವಿ ವ್ಯಾಪ್ತಿಯ ಸರ್ವೆ ನಂ. ೩೦೩/ಅ ದಲ್ಲಿ ಸರಕಾರಿ ಜಮೀನಿನಲ್ಲಿ ಎರಡು ಎಕರೆ ಜಮೀನು ನೀಡಬೇಕೆಂದು ಜಿಲ್ಲಾಧಿಕಾರಿ ಅವರಿಗೆ ಮನವಿ ಅರ್ಪಿಸಿ ಮನವರಿಕೆ ಮಾಡಿದರು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಎಂ.ವಾಯ್.ಮೆಣಸಿನಕಾಯಿ, ಕಾರ್ಯದರ್ಶಿ ವೀ.ಮ.ಅಂಗಡಿ, ಹುಕ್ಕೇರಿ ತಾಲೂಕಾಧ್ಯಕ್ಷ ಪ್ರಕಾಶ ಅವಲಕ್ಕಿ, ಯರಗಟ್ಟಿ ತಾಲೂಕಾಧ್ಯಕ್ಷ ತಮ್ಮಣ್ಣ ಕಾಮಣ್ಣವರ, ಬೆಳಗಾವಿ ತಾಲೂಕಾಧ್ಯಕ್ಷ ಸುರೇಶ ಹಂಜಿ, ಆರ್.ಎಲ್.ಜೂಗನವರ, ಎಸ್.ಎಸ್.ಕುರುಬಗಟ್ಟಿಮಠ, ಡಾ.ರಾಜಶೇಖರ ಬಿರಾದಾರ, ತಾಲೂಕಾ ಕಸಾಪ ವಕ್ತಾರ ಮಹಾಂತೇಶ ರಾಜಗೋಳಿ ಪ್ರವೀಣ ಕದಂ ಸೇರಿದಂತೆ ಜಿಲ್ಲೆಯ ವಿವಿದೆಡೆಯ ತಾಲೂಕಿನ ಪದಾಧಿಕಾರಿಗಳು, ಜಿಲ್ಲಾ ಘಟಕ್ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಆಶ್ರಯದಲ್ಲಿ ಯರಗಟ್ಟಿ ತಾಲೂಕಾ ಘಟಕದ ಪಧಾಧಿಕಾರಿಗಳು ನಿವೇಶನ ಒದಗಿಸಲು ಆಗ್ರಹಿಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಅರ್ಪಿಸಿದರು.


Gadi Kannadiga

Leave a Reply