This is the title of the web page
This is the title of the web page

Please assign a menu to the primary menu location under menu

Local News

ಪರಕನಹಟ್ಟಿ ರೈಲು ನಿಲ್ದಾಣ ಮಾಡಲು ಈರಣ್ಣಾ ಕಡಾಡಿಯವರಿಗೆ ಮನವಿ


ಯಮಕನಮರಡಿ: ಸಮೀಪದ ಪರಕನಹಟ್ಟಿ ಗ್ರಾಮದ ರೈಲು ಮಾರ್ಗದಲ್ಲಿ ಎಲ್ಲ ರೈಲುಗಳನ್ನು £ಲುಗಡೆ ಮಾಡಬೇಕು ಮತ್ತು ರೈಲು £ಲ್ದಾಣ ಮಾಡಬೇಕೆಂದು ಹೊಸಪೇಟ ಗ್ರಾಮ ಪಂಚಾಯತಿಯವರು ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿಯವರಿಗೆ ಬೇಟ್ಟಿಯಾಗಿ ಮನವಿ ಮಾಡಿಕೊಂಡಿದ್ದಾರೆ.
ಹೊಸಪೇಟ ಗ್ರಾ.ಪಂ. ವ್ಯಾಪ್ತಿಗೆ ಹೊಸಪೇಟ, ಶಿಂದಿಹಟ್ಟಿ, ಶಿಂದಿಹಟ್ಟಿ ಕಾಲೂ£, ರಂಗಸ್ವಾಮಿ ಕ್ಯಾಂಪ, ಹಟ್ಟಿಆಲೂರ, ಹಿಡಕಲ್ ಡ್ಯಾಂ, ಈ ಏಳು ಗ್ರಾಮಗಳು ಪರಕನಹಟ್ಟಿ ಗ್ರಾಮದ ಹತ್ತಿರ ಹೋಗುವ ರೈಲು ಮಾರ್ಗದ ಸಮೀಪ ಇರುವ ಗ್ರಾಮಗಳಾಗಿದ್ದು, ಮತ್ತು ಈ ಗ್ರಾಮಗಳು ಸುಮಾರು ೧೦ ಸಾವಿರ ಜನಸಂಖ್ಯೆ ಹೊಂದಿದ್ದ ಗ್ರಾಮಗಳಾಗಿರುತ್ತವೆ. ಇದಲ್ಲದೇ ಹಿಡಕಲ್ ಡ್ಯಾಂ ಹತ್ತಿರ ಉದ್ಯಾನ ಕಾಶಿ ಕಾಮಗಾರಿ ಕೂಡಾ ಪ್ರಾರಂಭವಾಗಿದ್ದು, ಅಲ್ಲಿ ಸಾಕಷ್ಟು ಪ್ರವಾಸಿಗರು ಹಾಗೂ ಸಾರ್ವಜ£ಕರಿಗೆ ಬರುವ £ರೀಕ್ಷೆಯಿದ್ದು, ಪರಕನಹಟ್ಟಿ ಗ್ರಾಮದ ರೈಲು ಮಾರ್ಗದಲ್ಲಿ ಎಲ್ಲ ರೈಲುಗಳು £ಂತು ಹೋಗುವಂತೆ ಮಾಡಿದರೆ ಜನರಿಗೆ ಅನುಕೂಲವಾಗುತ್ತದೆ. ರೈಲು £ಲ್ದಾಣವನ್ನು ಮಂಜೂರು ಮಾಡಿದ್ದಲ್ಲಿ ಸುಮಾರು ೨೦ ಸಾವಿರ ಜನರಿಗೆ ಸಹಾಯವಾಗುತ್ತದೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣಾ ಕಡಾಡಿಯವರಿಗೆ ಮನವಿ ಮಾಡಿಕೊಳ್ಳಲಾಗಿದೆ.
ಹುಕ್ಕೇರಿ ಗ್ರಾಮೀಣ ವಿದ್ಯುತ ಸಂಘದ £ರ್ದೇಶಕ ಅಶೋಕ ಚಂದಪ್ಪಗೋಳ ಮಾತನಾಡಿ ಈ ಭಾಗದಲ್ಲಿ ಎಲ್ಲ ರೈಲುಗಳು £ಲ್ಲಿಸಬೇಕು ಮತ್ತು ಇಲ್ಲಿ ರೈಲು £ಲ್ದಾಣದ ಅವಶ್ಯಕತೆಯಿದೆ ಎಂದು ಹೇಳಿದರು. ಈ ವೇಳೆಯಲ್ಲಿ ಕರಕುಶಲ £ಗದಮ ಅಧ್ಯಕ್ಷ ಮಾರುತಿ ಅಷ್ಟಗಿ, ಹೊಸಪೇಟ ಗ್ರಾ.ಪಂ. ಅಧ್ಯಕ್ಷೆ ರೇಣುಕಾ ಬೂದಿಹಾಳ, ಉಪಾಧ್ಯಕ್ಷ ಮಹಾ£ಂಗ ಮರೆನ್ನವರ, ಸದಸ್ಯರಾದ ಸದಾನಂದ ಮಾಳ್ಯಾಗೋಳ, ಎನ್.ಆರ್.ಖನಗಾಂವಿ, ರಮೇಶ ಹುರಳಿ, ಮತ್ತು ನಾಗರಿಕರಾದ ಮಹಾಂತೇಶ ಪಂಚನ್ನವರ, ಸುರೇಶ ಪವಾರ ಸಿದ್ದು ಗಡಕರಿ, ಮತ್ತು ಪರಕನಹಟ್ಟಿ ಗ್ರಾಮದ ಪ್ರಕಾಶ ಪೈರಾಸಿ, ಬಸವರಾಜ ಸುಲ್ತಾನಪೂರಿ, ಮಹಾ£ಂಗ ಮಾಸ್ತಿಹೊಳಿ, ಸಿದ್ದಪ್ಪ ಶಿರೂರ ಮುಂತಾದವರು ಇದ್ದರು.


Gadi Kannadiga

Leave a Reply