ಗೋಕಾಕ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಕಾರ್ಯಕರ್ತರು ಉಪತಹಶೀಲದಾರ ಎಸ್.ಬಿ.ಕಟ್ಟಿಮನಿ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರೈತ ಸಂಘದ ರಾಜ್ಯ ಕಾರ್ಯದರ್ಶಿ ಭೀಮಶಿ ಗದಾಡಿ ಅವರು, ಅನಾವೃಷ್ಟಿಯಿಂದ ತತ್ತರಿಸುತ್ತಿರುವ ರಾಜ್ಯದಲ್ಲಿ ತಮಿಳುನಾಡಿಗೆ ನೀರು ಬಿಟ್ಟು ನಮ್ಮ ನಾಡಿನ ರೈತರಿಗೆ ದ್ರೋಹವೆಸಗಿದ್ದಾರೆ. ಬರಗಾಲ ಪ್ರದೇಶವೆಂದು ಘೋಷಣೆ ಮಾಡಬೇಕು. ಕೊಬ್ಬರಿಗೆ ಪ್ರತಿ ಕ್ವಿಂಟಾಲಗೆ ೨೫ಸಾವಿರ ರೂಗಳ ಬೆಂಬಲ ಬೆಲೆ ಘೋಷಣೆ ಮಾಡಬೇಕು. ಗ್ರಾಮೀಣ ಪ್ರದೇಶಕ್ಕೆ ವಿದ್ಯುತ್ ಪೂರೈಕೆ ಮಾಡಬೇಕು. ಮಹಾದಾಯಿ ಹಾಗೂ ಮೇಕೆದಾಟು ಯೋಜನೆಗಳನ್ನು ಶೀಘ್ರದಲ್ಲಿಯೇ ಕೈಗೆತ್ತಿಕೊಳ್ಳಬೇಕು. ಎಮ್‌ಎಸ್‌ಪಿ ಶಾಸನ ಬದ್ದ ಜಾರಿಯಾಗಬೇಕು. ಕಬ್ಬಿನ ಬೆಳೆಗೆ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ(ಎಫ್‌ಆರ್‌ಪಿ) (ಎಸ್‌ಎಪಿ) ದರ ನಿಗದಿಯಾಗಬೇಕೆಂದು ಹೇಳಿದರಲ್ಲದೇ ೨೦೨೩ ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ಘೋಷಿಸಿದಂತೆ ರೈತರಿಗೆ ಮಾರಕವಾಗಿರುವ ೨೦೨೦ರ ಕೃಷಿ ಕಾಯ್ದೆಯನ್ನು ಹಿಂಪಡೆಯದೇ ಮಲತಾಯಿ ಧೋರಣೆ ಅನುಸರಿಸುತ್ತಿರುವುದನ್ನು ಖಂಡಿಸಿ ಸೆ-೨೯ ರಂದು ಅರಸಿಕೇರಿಯಿಂದಾ ಬೆಂಗಳೂರು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶಂಕರ ಮದಹಳ್ಳಿ, ತಾಲೂಕಾಧ್ಯಕ್ಷ ರಮೇಶ ಗೂದಿಗೊಪ್ಪ, ಮುದಕಪ್ಪ ಗೌಡಪ್ಪನವರ, ಅವಿನಾಶ ಖಾನಪ್ಪನ್ನವರ, ಮಲ್ಲಪ್ಪ ಬಂಡಿ, ಸೋಮಪ್ಪ ಬಬಲಿ, ವೆಂಕಪ್ಪ ಕೊಪ್ಪದ, ಭೀಮಶಿ ಕೊಳವಿ, ಸಿದ್ದಪ್ಪ ಡೊಳ್ಳಿ, ಲಕ್ಷö್ಮಣ ಹಳ್ಳೂರ, ಸಿದ್ದಪ್ಪ ಮರ್ದಿ, ಮಾಳಪ್ಪ ಬಗಟಿ, ರಾಯಪ್ಪ ಚಿಪ್ಪಲಕಟ್ಟಿ, ಬಾಳು ಮರೆಪ್ಪಗೋಳ, ಹಣಮಂತ ಹುಚ್ಚೇರಿ, ಸಿದ್ದಪ್ಪ ಕಣವಿ, ಶಿವಪ್ಪ ಹೊಸಮನಿ, ನಾಗಪ್ಪ ಗಂಗಪ್ಪಗೋಳ, ಅಶೋಕ ಬಂಡಿವಡ್ಡರ, ಲಕ್ಷö್ಮಣ ಹೂಲಿಕಟ್ಟಿ ಸೇರಿದಂತೆ ಅನೇಕರು ಇದ್ದರು.
Gadi Kannadiga > Local News > ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮನವಿ
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮನವಿ
Suresh09/09/2023
posted on

More important news
ಬೆಳಗಾವಿ ನಗರಕ್ಕೆ ವಿಶ್ವ ಬ್ಯಾಂಕ್ ತಂಡ ಭೇಟಿ
25/09/2023
ಪೌರ ಕಾರ್ಮಿಕರ ದಿನಾಚರಣೆ
23/09/2023
ಬೆಳಗಾವಿ ನಗರಕ್ಕೆ ವಿಶ್ವ ಬ್ಯಾಂಕ್ ತಂಡದ ಭೇಟಿ
22/09/2023