This is the title of the web page
This is the title of the web page

Please assign a menu to the primary menu location under menu

State

ಯುವಕ ಕಾಣೆ: ಪತ್ತೆಗೆ ಸಹಕರಿಸಲು ಮನವಿ


ಕೊಪ್ಪಳ ಏಪ್ರಿಲ್ ೨೦ : ಕೊಪ್ಪಳ ತಾಲ್ಲೂಕಿನ ಗಿಣಿಗೇರ ಗ್ರಾಮದ ನಿವಾಸಿ ೨೭ ವಯಸ್ಸಿನ ಮುತ್ತಣ್ಣ ತಂದೆ ಭೀಮಪ್ಪ ಪಲ್ಲೇದ ಎಂಬ ಯುವಕ ಕಾಣೆಯಾಗಿದ್ದು, ಪತ್ತೆಗೆ ಸಹಕರಿಸುವಂತೆ ಕೊಪ್ಪಳ ಪೊಲೀಸ್ ಠಾಣೆಯ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಯುವಕ ಮುತ್ತಣ್ಣ ಪಲ್ಲೇದ ಇತನು ೨೦೨೩ರ ಮಾರ್ಚ್ ೨೦ ರಂದು ಬೆಳಗ್ಗೆ ೧೧ ಗಂಟೆಯ ಸುಮಾರಿಗೆ ಕೊಪ್ಪಳ ನಗರ ರೈಲ್ವೆ ನಿಲ್ದಾಣದಿಂದ ತುರ್ತು ಕೆಲಸ ಅಂತಾ ಹೇಳಿ ಹೋದವನು ಇಲ್ಲಿಯವರೆಗೆ ವಾಪಸ್ ಮನೆಗೆ ಬಂದಿರುವುದಿಲ್ಲ ಎಂದು ಕಾಣೆಯಾದ ಯುವಕನ ತಂದೆ ಭೀಮಪ್ಪ ಮುದುಕಪ್ಪ ಅವರು ದೂರು ನೀಡಿದ್ದು, ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ.
ಕಾಣೆಯಾದ ಯುವಕನು ೫.೫ ಅಡಿ ಎತ್ತರ, ಸಾದಾರಣ ಮೈಕಟ್ಟು, ಕೋಲು ಮುಖ, ಕಾಣೆಯಾದಾಗ ತುಂಬತೋಳಿನ ಗುಲಾಭಿ ಬಣ್ಣದ ಅಂಗಿ ಹಾಗೂ ಕಪ್ಪು ಬಣ್ಣದ ಜೀನ್ ಪ್ಯಾಂಟ್ ಧರಿಸಿದ್ದು, ಕನ್ನಡ ಭಾಷೆ ಮಾತನಾಡುತ್ತಾನೆ. ಈ ಚಹರೆಯ ಯುವಕನು ಎಲ್ಲಿಯಾದರೂ ಕಂಡು ಬಂದಲ್ಲಿ ಅಥವಾ ಈತನ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಕೂಡಲೇ ಮಾಹಿತಿಯನ್ನು ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಂ ನಂ: ೦೮೫೩೯-೨೩೦೧೦೦ & ೨೩೦೨೨೨, ಪೋಲಿಸ್ ಇನ್ಸಪೆಕ್ಟರ್ ನಗರ ಪೋಲಿಸ್ ಠಾಣೆ ಕೊಪ್ಪಳ ಮೊ.ಸಂ: ೯೪೮೦೮೦೩೭೪೫, ಕೊಪ್ಪಳ ನಗರ ಠಾಣೆ ದೂರವಾಣಿ ಸಂಖ್ಯೆ: ೦೮೫೩೯-೨೨೦೩೩೩ ಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.


Leave a Reply