ಕೊಪ್ಪಳ ಆಗಸ್ಟ್ ೦೮ : ಗಂಗಾವತಿ ತಾಲೂಕಿನ ಬಾಪಿರೆಡ್ಡಿ ಕ್ಯಾಂಪ ಗ್ರಾಮದ ನಿವಾಸಿ ರಾಮಕೃಷ್ಣ ತಂದೆ ಕೃಷ್ಣಮೂರ್ತಿ ಎಂಬ ವ್ಯಕ್ತಿಯು ೨೦೨೩ರ ಜುಲೈ ೨೮ ರಂದು ರಾತ್ರಿ ೧೦ ಗಂಟೆ ಸುಮಾರಿಗೆ ಕಾಣೆಯಾದ ಬಗ್ಗೆ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ: ೧೫೪/೨೦೨೨. ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ವ್ಯಕ್ತಿಯ ವಯಸ್ಸು ೪೨ ವರ್ಷ, ೫ ಅಡಿ, ೬ ಇಂಚು ಎತ್ತರ, ಕೊಲು ಮುಖ, ಗೋದಿ ಮೈಬಣ್ಣ,ತಳ್ಳನೆಯ ಮೈಕಟ್ಟು, ಕನ್ನಡ, ತೆಲಗು ಭಾಷೆ ಮಾತನಾಡುತ್ತಾನೆ. ಬಲಗೈನ ಮುಂಗೈ ಮೇಲೆ ಆಂಜನೆಯ ಚಿತ್ರದ ಹಚ್ಚೆ ಇರುತ್ತದೆ. ಮೈ ಮೇಲೆ ಹಳದಿ ಬಣ್ಣದ ಶರ್ಟ ಹಾಗೂ ನೀಲಿ ಬಣ್ಣದ ಲುಂಗಿ, ಕಪ್ಪು ಬಣ್ಣದ ಜರ್ಕಿನ್ ಧರಿಸಿಕೊಂಡು ಹೊಗಿರುತ್ತಾನೆ. ಈ ವ್ಯಕ್ತಿಯ ಬಗ್ಗೆ ಯಾರಿಗಾದರು ಮಾಹಿತಿ ದೊರೆತಲ್ಲಿ ಅಥವಾ ಪತ್ತೆಯಾದಲ್ಲಿ ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ದೊ.ಸಂ: ೦೮೫೩೩-೨೩೦೮೫೪ ಅಥವಾ ಮೂ.ಸಂ: ೯೪೮೦೮೦೩೭೩೦ ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ
ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ
Suresh08/08/2023
posted on
More important news
ಬೆಳಗಾವಿಯ ಹುಡುಗರ ಸಾಹಸ ” ಪರ್ಯಾಯ”
18/09/2023