This is the title of the web page
This is the title of the web page

Please assign a menu to the primary menu location under menu

State

ಠಗಿ ಪೀಡಿತ ಜಮಾಕರ್ತ ಸಂಘದಿಂದ ಜಿಲ್ಲಾಧಿಕಾರಿಗಳಿಗೆ ಮನವಿ


ಬಳ್ಳಾರಿ ಝುನ್ ೨೭. ರಾಷ್ಟ್ರೀಯ ಠೇವಣಿದಾರ ಸಂತ್ರಸ್ತ ಕಟುಂಬ ಸಂಘದ ರಾಜ್ಯ ಅಧ್ಯಕ್ಷರಾದ ಅಪ್ಪ ಸಾಹೇಬ್ ಅವರ ನೇತೃತ್ವದಲ್ಲಿ ಮತ್ತು ಬಳ್ಳಾರಿ ಜಿಲ್ಲಾ ಅಧ್ಯಕ್ಷರಾದ ಗಿರಿ ಯಾದವ್ ಹಮ್ಮಿಕೊಂಡಿರುವ ಬಳ್ಳಾರಿ ಜಿಲ್ಲೆಯ ಠೇವಣೀದಾರ ಕಂಪನಿಗಳಾದ ಪಿ ಎ ಸಿ ಎಲ್, ಅಗ್ರಿಗೋಲ್ಡ್, ಸಹರಾ, ಸಮೃದ್ಧಿ ಜೀವನ್, ಸಾಯಿ ಪ್ರಸಾದ್ ಮತ್ತು ಗರೀಮ ಸೇರಿದಂತೆ ಹಲವಾರು ಕಂಪನಿಗಳಲ್ಲಿ ಸಾರ್ವಜನಿಕರು ಡೆಪಾಸಿಟ್ ಮಾಡಿ ಬಾಂಡುಗಳನ್ನು ಪಡೆದು ನಷ್ಟ ಹೊಂದಿರುವ ಸಾರ್ವಜನಿಕರಿಗೆ ಮತ್ತು ಎಲ್ಲಾ ಗ್ರಾಹಕರಿಗೆ ಬಡ್ಸ್ ಆಕ್ಟ್ ೨೦೧೯ ರ ಪ್ರಕಾರ ಸರ್ಕಾರದಿಂದ ಹಣವನ್ನು ಮರುಪಾವತಿ ಮಾಡಬೇಕೆಂದು ಜಿಲ್ಲಾ ಅಧಿಕಾರಿಗೆ ಮನವಿ ಪತ್ರವನ್ನು ನೀಡಿ ಒತ್ತಾಯಿಸಿದರು. ಈ ಸಂದರ್ಭದಲ್ಲಿ ಠಗಿ ಪೀಡಿತ ಜಮಾಕರ್ತ ಸಂಘದ ಬಳ್ಳಾರಿ ಜಿಲ್ಲಾಧ್ಯಕ್ಷ ಗಿರಿಯಾದವ್ ಮಾತನಾಡಿ,ದಿನಾಂಕ ೩.೭.೨೦೨೩ ರಂದು ಸೋಮವಾರ ಬೆಳಗ್ಗೆ ೧೧ ಗಂಟೆಗೆ ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಗುವುದು. ಆ ದಿನದಂದು ಎಲ್ಲಾ ಕಂಪನಿಗಳ ಏಜೆಂಟರುಗಳು ಬಂದು ಭಾಗವಹಿಸಬೇಕಾಗಿ ವಿನಂತಿ. ಹಾಗೂ ದೇಶದ ಪ್ರಧಾನಮಂತ್ರಿಗೆ ರಾಜ್ಯದ ಮುಖ್ಯಮಂತ್ರಿಗಳಿಗೆ ಸಹ ರಿಜಿಸ್ಟರ್ ಪೋಸ್ಟ್ ಮೂಲಕ ಮನವಿ ಪತ್ರವನ್ನು ಕಳಿಸಿ ಕೊಡಲಾಗುವುದೆಂದು ಠಗಿ ಫಿಡಿತ ಜಮಾಕರ್ಥ ಪರಿವಾರ್ ಸಂಘದ ಜಿಲ್ಲ್ಲಾಧ್ಯಕ್ಷ ಗಿರಿಯಾದವ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕಾರ್ಯದರ್ಶಿ ಎಂ.ಜಿ ರವೀಂದ್ರ ಗಿರಿಯಾದವ್ ಮೋ.ಸಂ ೭೦೧೯೯೩೮೫೧೫ ಸಂರ್ಕಿಸಲು ಕೋರಲಾಗಿದೆ. ಈ ಸಂದರ್ಭದಲ್ಲಿ ಎಂ. ರವೀಂದ್ರ ಜಗನ್ನಾಥ್, ಸುನಿಲ್ , ಜೋಳದ ರಾಶಿ ಎರಿಸ್ವಾಮಿ ಜೋಳದರಾಶಿ ಚಂದ್ರ, ಸುಂಕಣ್ಣ, ಗುಂತಕಲ್ ನಾಗರಾಜ್ ಕೋಡುಮೂರು ಮೊಹಮ್ಮದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


Leave a Reply