This is the title of the web page
This is the title of the web page

Please assign a menu to the primary menu location under menu

Local News

ಯು.ಜಿ.ಸಿ ಎನ್.ಇ.ಟಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ೯೦ ರಷ್ಟು ಹಿಂದಿ ಭಾಷೆ ಹೇರಿದ್ದನ್ನು ಖಂಡಿಸಿ ತಹಶಿಲ್ದಾರ ಮೂಲಕ ಪ್ರಧಾನಮಂತ್ರಿಗೆ ಮನವಿ


ಹುಬ್ಬಳ್ಳಿ: ರಾಷ್ಟ್ರೀಯ ಪರೀಕ್ಷೆ ಸಂಸ್ಥೆ ನಡೆಸಿದ ಯು.ಜಿ.ಸಿ ಎನ್.ಇ.ಟಿ ಕನ್ನಡದ ಐಚ್ಛಿಕ ಭಾಷೆಯ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿ ಕನ್ನಡ ಭಾಷೆಗಿಂತ ಶೇ ೯೦ ರಷ್ಟು ಹಿಂದಿ ಭಾಷೆ ಹೇರಿದ್ದನ್ನು ಖಂಡಿಸಿ ಕರ್ನಾಟಕ ನವ ನಿರ್ಮಾಣ ವೇದಿಕೆ ತಹಶಿಲ್ದಾರ ಮೂಲಕ ಪ್ರಧಾನಮಂತ್ರಿಯವರಿಗೆ ಮನವಿ ಸಲ್ಲಿಸಿತು.

ನಗರದ ತಹಶೀಲ್ದಾರ್ ಕಚೇರಿ ಎದರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿ. ಕೇಂದ್ರ ಸರ್ಕಾರದ ಉದ್ಯೋಗ ಅವಕಾಶಗಳಲ್ಲಿ ಕನ್ನಡಿಗರನ್ನು ಹತ್ತಿಕ್ಕುವ ಮತ್ತು ಅವಕಾಶಗಳನ್ನು ಹತ್ತಿಕ್ಕುವ ಮತ್ತು ಅವಕಾಶಗಳನ್ನು ನಿರಾಕರಿಸುವ ಕುತಂತ್ರ ನಿರಂತರವಾಗಿ ನಡೆಯುತ್ತಲೇ ಇದೆ. ಇದಕ್ಕೆ ಮತ್ತೊಂದು ನಿದರ್ಶನವೆಂಬಂತೆ ಮೊನ್ನೆ ರಾಷ್ಟ್ರೀಯ ಪರೀಕ್ಷೆ ನಡೆಸಿದ ಪರೀಕ್ಷೆಯಲ್ಲಿ ಯು.ಜಿ.ಸಿ,ಎನ್.ಇ.ಟಿ ಕನ್ನಡ ಐಚ್ಛಿಕ ಭಾಷೆಯಲ್ಲಿಯೂ ಶೇ ೯೦ ರಷ್ಟು ಹಿಂದಿ ಭಾಷೆಯಲ್ಲಿ ಪ್ರಶ್ನೆಗಳನ್ನು ಕೊಟ್ಟಿರುವುದು ಕಂಡು ಬಂದಿದೆ. ಇದರಿಂದ ಪರೀಕ್ಷೆ ಬರೆದ ಅಭ್ಯರ್ಥಿಗಳಲ್ಲಿಯೂ ಗೊಂದಲ ಉಂಟಾಗಿ ಪರೀಕ್ಷೆ ಬಹಿಷ್ಕರಿಸಿದ್ದಾರೆ. ಹಾಗಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಕನ್ನಡದ ಮೇಲೆ ತಾತ್ಸಾರವಾಗಿದೆ ಅಲ್ಲದೇ ಇದು ಕನ್ನಡ ದ್ರೋಹ ಉದ್ದೇಶ ಪೂರ್ವಕವಾಗಿಯೇ ಇಂಥಹ ಕೃತ್ಯಗಳನ್ನು ಸಂಸ್ಥೆ ಮಾಡಿದೆ ಎಂದು ಆರೋಪಿಸಿ ತಹಶಿಲ್ದಾರ ಮೂಲಕ ಪ್ರಧಾನಮಂತ್ರಿಯವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಆನಂದ ದಲಬಂಜನ, ಸಿದ್ದು ಹಿರೇಮಠ, ಬಸವರಾಜ ಶಿವಶಿಂಪರ, ಸತೀಶ್, ಮಂಜುನಾಥ ಕಮಥರ ಸೇರಿದಂತೆ ಉಪಸ್ಥಿತರಿದ್ದರು.


Leave a Reply