This is the title of the web page
This is the title of the web page

Please assign a menu to the primary menu location under menu

Local News

ಡಿಪ್ಲೋಮಾ ಇಂಜಿನಿಯರಿಂಗ್ ಕೋರ್ಸುಗಳ ಪ್ರವೇಶಾತಿಗಾಗಿ ಅರ್ಜಿ ಆಹ್ವಾನ


ಬೆಳಗಾವಿ,ಮೇ ೧೯ : ಬೆಳಗಾವಿ ಸರ್ಕಾರಿ ಪಾಲಿಟೆಕ್ನಿಕ್ ಪೂರ್ಣಾವಧಿಯ ಇಂಜಿನಿಯರಿಂಗ್ & ನಾನ್ ಇಂಜಿನಿಯರಿಂಗ್ ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಕೋರ್ಸುಗಳಿಗೆ ೨೦೨೨-೨೩ನೇ ಶೈಕ್ಷಣಿಕ ಸಾಲಿಗೆ ಮೆರಿಟ್/ಮೀಸಲಾತಿ ಆಧಾರಿತ ಆನ್‌ಲೈನ್ ನಾನ್ ಇಂರ‍್ಯಾಕ್ಟೀವ್ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಭರ್ತಿ ಮಾಡಿದ ಅರ್ಜಿಗಳನ್ನು ಸೂಕ್ತ ದಾಖಲೆಗಳೊಂದಿಗೆ ಸರ್ಕಾರಿ ಪಾಲಿಟೆಕ್ನಿಕ್, ಕಾಕತಿವೇಸ ರೋಡ್ ಬೆಳಗಾವಿ ಇಲ್ಲಿಗೆ ಮೇ ೧೯ ರಿಂದ ಮೇ ೨೬ ರ ಒಳಗಾಗಿ ಸಲ್ಲಿಸಬೇಕು.
ಅಭ್ಯರ್ಥಿಗಳು ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು :
ಎಸ್.ಎಸ್.ಎಲ್.ಸಿ/ತತ್ಸಮಾನ ಅಂಕಪಟ್ಟಿ ಅಥವಾ ಮುಖ್ಯೋಪಾಧ್ಯಯರಿಂದ ಧೃಡಿಕರಿಸಲ್ಪಟ್ಟ Sಣಚಿಣemeಟಿಣ oಜಿ ಒಚಿಡಿಞs ಅಥವಾ ಅಂರರ್ಜಾಲದಿಂದ ಪಡೆದಿರುವ ಮುದ್ರಿತ ಅಂಕಪಟ್ಟಿಯ ಧೃಡೀಕೃತ ಪ್ರತಿ. ವರ್ಗಾವಣೆ ಪ್ರಮಾಣ ಪತ್ರ (ಟಿಸಿ)/ಆಕ್ಷೇಪಣಾ ರಹಿತ ಪ್ರಮಾಣ ಪತ್ರ (ಎನ್‌ಓಸಿ) ಜಾತಿ & ಆದಾಯ ಪ್ರಮಾಣ ಪತ್ರ ಆರ್.ಡಿ. ನಂಬರ್ ಅಥವಾ ನಾಡಕಛೇರಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಪಡೆದ ಸ್ವೀಕೃತಿಯ ಪ್ರತಿಯನ್ನು ಸಲ್ಲಿಸುವುದು. ಕನ್ನಡ ಮಾಧ್ಯಮ ವ್ಯಾಂಸಗ ಪ್ರಮಾಣ ಪತ್ರ (ಅನ್ವಯಿಸಿದ್ದಲ್ಲಿ ಮಾತ್ರ) ಗ್ರಾಮೀಣ ವ್ಯಾಸಂಗ ಪ್ರಮಾಣ ಪತ್ರ (ಅನ್ವಯಿಸಿದ್ದಲ್ಲಿ ಮಾತ್ರ).
ಹೈದ್ರಾಬಾದ್-ಕರ್ನಾಟಕ ಮೀಸಲಾತಿ ಪ್ರಮಾಣ ಪತ್ರ ನಾಡಕಛೇರಿಗೆ ಅರ್ಜಿ ಸಲ್ಲಿಸಿದ್ದಲ್ಲಿ ಪಡೆದ ಸ್ವೀಕೃತಿಯ ಪ್ರತಿಯನ್ನು ಸಲ್ಲಿಸುವುದು. (ಕಡ್ಡಾಯವಾಗಿ) ವಿಶೇಷ ಮೀಸಲಾತಿ (Sಠಿeಛಿiಚಿಟ ಅಚಿಣegoಡಿಥಿ) ಕೋಟಾದ ಪ್ರಮಾಣ ಪತ್ರ (PಊS/ಓಅಅ/ಆಇಈ/ಇಘಿ-ಆಇಈ/SPಔಖಖಿS/ಎಖಿS/IಖಿI) ಸಂಸ್ಥೆಯಲ್ಲಿ ಲಭ್ಯವಿರುವ ಕೋರ್ಸ್ ಮತ್ತು ಸೀಟುಗಳು :
ಆಟೋಮೊಬೈಲ್ ಇಂಜಿನಿಯರಿಂಗ್ – ೬೦+೩ ಎಸ್‌ಎನ್‌ಕ್ಯೂ ಕೋಟಾ ಒಟ್ಟು ೬೩ ಸೀಟುಗಳು, ಸಿವಿಲ್ ಇಂಜಿನಿಯರಿಂಗ್ – ೬೦+೩ ಎಸ್‌ಎನ್‌ಕ್ಯೂ ಕೋಟಾ ಒಟ್ಟು ೬೩ ಸೀಟುಗಳು, ಇ & ಇ ಇಂಜಿನಿಯರಿಂಗ್ – ೬೦+೩ ಎಸ್‌ಎನ್‌ಕ್ಯೂ ಕೋಟಾ ಒಟ್ಟು ೬೩ ಸೀಟುಗಳು, ಇ & ಸಿ ಇಂಜಿನಿಯರಿಂಗ್ – ೬೦+೩ ಎಸ್‌ಎನ್‌ಕ್ಯೂ ಕೋಟಾ ಒಟ್ಟು ೬೩ ಸೀಟುಗಳು, ಮೆಕ್ಯಾನಿಕಲ್ ಇಂಜಿನಿಯರಿಂಗ್ – ೬೦+೩ ಎಸ್‌ಎನ್‌ಕ್ಯೂ ಕೋಟಾ ಒಟ್ಟು ೬೩ ಸೀಟುಗಳು, ವಾಣಿಜ್ಯ ವಿಭಾಗ (ಕನ್ನಡ) ೬೦+೩ ಎಸ್‌ಎನ್‌ಕ್ಯೂ ಕೋಟಾ ಒಟ್ಟು ೬೩ ಸೀಟುಗಳು, ವಾಣಿಜ್ಯ ವಿಭಾಗ (ಇಂಗ್ಲೀಷ್) ೬೦+೩ ಎಸ್‌ಎನ್‌ಕ್ಯೂ ಕೋಟಾ ಒಟ್ಟು ೬೩ ಸೀಟುಗಳು ಇವೆ.
ಎಸ್‌ಎನ್‌ಕ್ಯೂ ಸೀಟುಗಳ ಹಂಚಿಕೆ:
ಸರ್ಕಾರದ ಆದೇಶ ಸಂಖ್ಯೆ: ಇಡಿ ೧೫೫ ಟಿಇಸಿ ೨೦೧೧, ದಿ: ೦೮/೦೭/೨೦೧೧ & ಸರ್ಕಾರದ ಆದೇಶ ಸಂ: ಇಡಿ ೧೦ ಟಿಇಸಿ ೨೦೧೯, ದಿ: ೩೦/೦೫/೨೦೧೯ ರನ್ವಯ ರಾಜ್ಯದ ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿ ಕೋರ್ಸಿನಲ್ಲಿ ಒಟ್ಟು ಇಂಟೇಕ್‌ಗೆ ಹೆಚ್ಚುವರಿಯಾಗಿ ಶೇ. ೫ ರಷ್ಟು ಸಂಖ್ಯಾಧಿಕ ಸೀಟುಗಳನ್ನು (Suಠಿeಡಿಟಿumeಡಿಚಿಡಿಥಿ ಕಿuಚಿಣಚಿ Seಚಿಣs) ಆದಾಯ ಮಿತಿಯನ್ನು ಆದರಿಸಿ ಮೆರಿಟ್ ಮೇಲೆ ಬೋಧನಾ ಶುಲ್ಕ ವಿನಾಯಿತಿ ಯೋಜನೆಯಡಿ ಮೆರಿಟ್ ಆಧರಿಸಿ ಸೀಟು ಹಂಚಿಕೆ ಮಾಡಲಾಗುವುದು.
ಪ್ರಥಮ ಸೆಮಿಸ್ಟರ್ ಡಿಪ್ಲೋಮಾ ಕೋರ್ಸುಗಳ ಪ್ರವೇಶಕ್ಕೆ ಇರಬೇಕಾದ ಕನಿಷ್ಟ ಶಿಕ್ಷಣಾರ್ಹತೆಗಳು :
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕರ್ನಾಟಕ ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಒಟ್ಟಾರೆ ಶೇ. ೩೫ ಅಂಕಗಳನ್ನು ಪಡೆದು ಉತ್ತೀರ್ಣರಾಗಿರಬೇಕು. ಆಟೋಮೊಬೈಲ್ ಇಂಜಿನಿಯರಿಂಗ್ ಕೋರ್ಸಿಗೆ ವಯೋಮಿತಿ ಷರತ್ತು ಪ್ರತಿ ವರ್ಷದಂತೆ ಇರುವುದಿಲ್ಲ.
ಪ್ರವೇಶಕ್ಕೆ ಇರಬೇಕಾದ ಇತರೆ ಅರ್ಹತೆಗಳು :
ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು ಹಾಗೂ ಅರ್ಜಿ ಸಲ್ಲಿಸುವ ಪೂರ್ವದಲ್ಲಿ ಕರ್ನಾಟಕದಲ್ಲಿ ೧ನೇ ತರಗತಿಯಿಂದ ೧೦ನೇ ತರಗತಿ ಒಳಗೊಂಡು ಕನಿಷ್ಟ ೫ ವರ್ಷಗಳವರೆಗೆ ವ್ಯಾಸಂಗ ಮಾಡಿರಬೇಕು. ಆದಾಗ್ಯೂ ೦೫ ವರ್ಷ ವ್ಯಾಸಂಗದ ಷರತ್ತಿನಿಂದ ಕೆಲವು ಗುಂಪಿನ ಅಭ್ಯರ್ಥಿಗಳಿಗೆ ವಿನಾಯಿತಿ ನೀಡಲಾಗಿದ್ದು, ಅದರ ವಿವರಗಳನ್ನು ಮೇಲ್ಕಂಡ ವೆಬ್ ವಿಳಾಸವಿರುವ ಇ-ಮಾಹಿತಿ ಪುಸ್ತಕದಿಂದ ಪಡೆಯಬಹುದಾಗಿದೆ.
ಪ್ರವೇಶ ದೊರೆತರೆ ಅಭ್ಯರ್ಥಿಗಳು ಭರಿಸಬೇಕಾದ ಶುಲ್ಕದ ವಿವರ :
ಎಲ್ಲ ವರ್ಗದ ಅಭ್ಯರ್ಥಿಗಳಿಗೆ ವಾರ್ಷಿಕ ಶುಲ್ಕ ರೂ. ೪೨೭೦/-, ಎಸ್‌ಎನ್‌ಕ್ಯೂ ವರ್ಗದ ಅಭ್ಯರ್ಥಿಗಳಿಗೆ ವಾರ್ಷಿಕ ಶುಲ್ಕ ರೂ. ೧೩೩೦/. ವಿವಿಧ ವರ್ಗದ ವಿದ್ಯಾರ್ಥಿಗಳು ಸರ್ಕಾರದ ನಿಯಮಾವಳಿಗಳಂತೆ ಶುಲ್ಕ ಮರುಪಾವತಿ ಪಡೆಯಲು ಅರ್ಹರಿದ್ದು, ಸಂಬಂಧಿತ ಇಲಾಖೆಗಳಿಗೆ ಶುಲ್ಕ ತುಂಬಿದ ರಶೀದಿ ಮತ್ತು ಇತರೆ ಸೂಕ್ತ ದಾಖಲೆಗಳೊಂದಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ ಶುಲ್ಕವನ್ನು ಮರುಪಾವತಿಸಿಕೊಳ್ಳಬಹುದು.
ಸಂಸ್ಥೆಯಲ್ಲಿ ಇರುವ ಸೌಲಭ್ಯಗಳು :-ವಿವಿಧ ಶಿಷ್ಯವೇತನಗಳು / ವಸತಿನಿಲಯದ ಸೌಲಭ್ಯ/ಟ್ಯಾಬ್ ಪೂರೈಕೆ /ಇತ್ಯಾದಿ.
ಕೋವಿಡ್-೧೯ ಸಾಂಕ್ರಾಮಿಕ ರೋಗದ ಹಿನ್ನೆಯಲ್ಲಿ ಪ್ರವೇಶಾತಿ ಸಂದರ್ಭದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಕೈಗಳನ್ನು ಸ್ಯಾನಿಟೇಸರ್‌ನಿಂದದದ ಸ್ವಚ್ಚಗೊಳಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅಭ್ಯರ್ಥಿಗಳ ಜವಾಬ್ದಾರಿಯಾಗಿರುತ್ತದೆ ಹಾಗೂ ಸರ್ಕಾರವು ಆಗಿಂದಾಗ್ಗೆ ಹೊರಡಿಸುವ ಮಾರ್ಗಸೂಚಿಗಳನ್ನು ಹಾಗೂ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ
ಹೆಚ್ಚಿನ ಮಾಹಿತಿಗಾಗಿ ಕಾಲೇಜು & ತಾಂತ್ರಿ ಶಿಕ್ಷಣ ಇಲಾಖೆಯ & ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್ ಜಣeಣeಛಿh.ಞಚಿಡಿಟಿಚಿಣಚಿಞಚಿ.gov.iಟಿ/ಞಚಿಡಿಣeಛಿhಟಿiಛಿಚಿಟ ಜಣeಞ.ಞಚಿಡಿಟಿಚಿಣಚಿಞಚಿ.gov.iಟಿ, ತಿತಿತಿ.ಛಿeಣoಟಿಟiಟಿe.ಞಚಿಡಿಟಿಚಿಣಚಿಞಚಿ.gov.i/ಞeಚಿ/ ವೆಬ್‌ಸೈಟ್ ನಲ್ಲಿ ಉಚಿತವಾಗಿ ಅರ್ಜಿಗಳನ್ನು ಪಡೆಯಬಹುದು.
ಸಿಸಿಟೆಕ್ ವಿಭಾಗ ನ್ಯೂ ಮೆಕ್ಯಾನಿಕಲ್ ಬಿಲ್ಡಿಂಗ್ ಸರ್ಕಾರಿ ಪಾಲಿಟೆಕ್ನಿಕ್, ಬೆಳಗಾವಿ(ರಜಾದಿನಗಳನ್ನು ಹೊರತುಪಡಿಸಿ ಸೋಮವಾರದಿಂದ ಶುಕ್ರವಾರದವರೆಗೆ ಬೆಳ್ಳಿಗ್ಗೆ ೧೦-೦೦ ಗಂಟೆಯಿಂದ ಮದ್ಯಾಹ್ನ ೧-೩೦ ರವರೆಗೆ ಹಾಗೂ ಮದ್ಯಾಹ್ನ ೨-೧೫ ರಿಂದ ಸಾಯಂಕಾಲ ೫-೩೦ ರವರೆಗೆ ಶನಿವಾರ ಬೆಳ್ಳಿಗ್ಗೆ ೧೦-೦೦ ಗಂಟೆಯಿಂದ ಮದ್ಯಾಹ್ನ ೨-೦೦ ರವರೆಗೆ) ಸಂಪರ್ಕಿಸಬಹುದು ಎಂದು ಬೆಳಗಾವಿ ಸರ್ಕಾರಿ ಪಾಲಿಟೆಕ್ನಿಕ್ ನ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply