This is the title of the web page
This is the title of the web page

Please assign a menu to the primary menu location under menu

State

ಅನಾಮದೇಯ ಮೃತ ವ್ಯಕ್ತಿಯ ವಾರಸುದಾರರ ಪತ್ತೆ ಮನವಿ


ಕೊಪ್ಪಳ ಜನವರಿ ೧೦ : ಮೃತ ಅನಾಮದೇಯ ವ್ಯಕ್ತಿಯ ವಾರಸುದಾರರ ಪತ್ತೆ ಸಹಕರಿಸುವಂತೆ ಕೊಪ್ಪಳ ನಗರ ಪೊಲೀಸ ಠಾಣೆಯ ಸಹಾಯಕ ಉಪನಿರೀಕ್ಷಕರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
೨೦೨೨ರ ಡಿಸೆಂಬರ್ ೨೭ ರಂದು ಮದ್ಯಾಹ್ನ ೧ ಗಂಟೆಗೆ ಕೊಪ್ಪಳ ಕೇಂದ್ರೀಯ ಬಸ್ ನಿಲ್ದಾಣದ ಮುಂದೆ ಜನಗಳು ಒಳ ಹೋಗುವ ಸ್ಥಳದಲ್ಲಿ ಸುಮಾರು ೪೦ ವರ್ಷದ ಅನಾಮದೇಯ ಗಂಡಸು ಯಾವುದೋ ಖಾಯಿಲೆಯಿಂದ ಅಸ್ಥವೆಸ್ಥಗೊಂಡು ಮಲಗಿದ್ದರಿಂದ ಸ್ಥಳದಲ್ಲಿದ್ದ ಸಾರ್ವಜನಿಕರು ೧೦೮ ವಾಹನಕ್ಕೆ ಕರೆ ಮಾಡಿ, ಆ ವ್ಯಕ್ತಿಯನ್ನು ವಾಹನಕ್ಕೆ ಹಾಕಿ ಕಳುಹಿಸಿದ್ದು, ೧೦೮ ವಾಹನ ಚಾಲಕನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿರುತ್ತಾನೆ.
ಅಂದು ಮದ್ಯಾಹ್ನ ೧-೦೫ ಗಂಟೆಗೆ ಆಸ್ಪತ್ರೆಗೆ ತರುವಾಗ ಮಾರ್ಗದ ಮದ್ಯೆ ವ್ಯಕ್ತಿಯು ಮೃತಪಟ್ಟಿರುತ್ತಾನೆ ಅಂತಾ ಕರ್ತವ್ಯ ನಿರತ ವೈದ್ಯಾಧಿಕಾರಿಗಳು ತಿಳಿಸಿರುತ್ತಾರೆ. ಈ ಮೃತ ವ್ಯಕ್ತಿಯ ಹೆಸರು, ವಿಳಾಸ ಹಾಗೂ ಸಂಬಂದಿಕರು ಇಲ್ಲದ ಕಾರಣ ಆಸ್ಪತ್ರೆ ಹಾಗೂ ಕೊಪ್ಪಳ ವಿವಿಧ ಕಡೆ ಮೃತನ ಹೆಸರು ವಿಳಾಸ ಹಾಗೂ ಸಂಬಂದಿಕರ ಬಗ್ಗೆ ವಿಚಾರಿಸಲು ಯಾವುದೇ ಉಪಯುಕ್ತ ಮಾಹಿತಿ ಸಿಕ್ಕಿರುವುದಿಲ್ಲ. ವಾರಸುದಾರರು ಪತ್ತೆಯಾಗುವವರೆಗೆ ಮೃತ ದೇಹವನ್ನು ಅಂದು ಸಂಜೆ ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಶಿಥಿಲಗಾರದಲ್ಲಿ ಇರಿಸಲಾಗಿದೆ ಎಂದು ಕೊಪ್ಪಳ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೊಪ್ಪಳ ಸಂಚಾರ ಪೊಲೀಸ್ ಠಾಣೆಯ ೪೪೭-ಸಿಪಿಸಿ ದೇವರಾಜ ಎಂಬುವವರು ಠಾಣೆಗೆ ಹಾಜರಾಗಿ ಗಣಕೀಕೃತ ದೂರನ್ನು ಸಲ್ಲಿಸಿದ್ದು, ಈ ಕುರಿತು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತನ ಹೆಸರು ತಿಳಿದು ಬಂದಿರುವುದಿಲ್ಲ. ವಯಸ್ಸು ಅಂದಾಜು ೪೦ ವರ್ಷ, ಸುಮಾರು ೫ ಫೀಟ ೪ ಇಂಚು ಎತ್ತರ, ಸಾಧರಣ ಮೈಕಟ್ಟು, ಸಾದಾಗೆಂಪು ಮೈಬಣ್ಣ, ಕಪ್ಪು ತಲೆ ಕೂದಲು ಹೊಂದಿದ್ದು, ಮೈಮೇಲಿನ ನೇರಳೆ ಬಣ್ಣದ ಪುಲ್ ಶರ್ಟ, ಅದರ ಮೇಲೆ ಹಸಿರು ಬಣ್ಣದ ಜರ್ಕಿನ್, ಒಂದು ನೀಲಿ ಬಣ್ಣದ ಜೀನ್ಸ ಪ್ಯಾಂಟ ಧರಿಸಿರುತ್ತಾನೆ. ಈ ಮೃತ ವ್ಯಕ್ತಿಯ ಬಗ್ಗೆ ಗುರುತು ಹಾಗೂ ವಾರಸುದಾರರ ವಿಳಾಸ ಪತ್ತೆಯಾದಲ್ಲಿ ಕೊಪ್ಪಳ ನಗರ ಪೊಲೀಸ್ ಠಾಣೆ: ೦೮೫೩೯ ೨೨೦೩೩೩, ಪೊಲೀಸ್ ಇನ್ಸ್ಪೆಕ್ಟರ್ ಕೊಪ್ಪಳ ನಗರ ಠಾಣೆ: ೯೪೮೦೮೦೩೭೪೫, ಪಿ.ಎಸ್.ಐ (ಕಾ&ಸು) ಕೊಪ್ಪಳ ನಗರ ಪೊಲೀಸ್ ಠಾಣೆ ೯೬೧೧೫೮೯೪೩೩, ಇಲ್ಲಿಗೆ ಗೆ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.


Leave a Reply