This is the title of the web page
This is the title of the web page

Please assign a menu to the primary menu location under menu

Local News

ಶ್ರವಣದೋಷವುಳ್ಳ ವಸತಿರಹಿತ ತರಬೇತಿ ಕೇಂದ್ರ ಸ್ಥಾಪಿಸಲು ಅರ್ಜಿ ಆಹ್ವಾನ


ಬೆಳಗಾವಿ,ಜ.೧೯: ೨೦೨೧-೨೨ ನೇ ಸಾಲಿನಲ್ಲಿ ನಾಲ್ಕು ವರ್ಷದೊಳಗಿನ ಶ್ರವಣದೋಷವುಳ್ಳ ಮಕ್ಕಳ ಹಾಗೂ ಅವರ ತಾಯಂದಿರಿಗೆ ವಸತಿರಹಿತ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಲು ಅನುಭವ ಹೊಂದಿರುವ ಸಂಸ್ಥೆಗಳಿAದ ಅರ್ಜಿ ಆಹ್ವಾನಿಸಲಾಗಿದೆ.
ಹುಟ್ಟಿನಿಂದಲೇ ಶ್ರವಣದೋಷವುಳ್ಳ ಮಕ್ಕಳ ತಾಯಂದಿರಿಗೆ ಪ್ರಾರಂಭಿಕ ಹಂತದಲ್ಲಿಯೇ ಅವರ ಮಗುವಿನ ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ಅರಿವು ಮೂಡಿಸಲು ನಾಲ್ಕು ವರ್ಷದೊಳಗಿನ ಶ್ರವಣದೋಷವುಳ್ಳ ಮಕ್ಕಳಿಗೆ ಅವರ ತಾಯಂದಿರಿಗೆ ಸಹಿತ ವಾಕ್‌ತರಬೇತಿ ನೀಡುವ ಯೋಜನೆಯನ್ನು ೪ ವಿಭಾಗಗಳ ವ್ಯಾಪ್ತಿಯ ತಲಾ ಎರಡು ಜಿಲ್ಲೆಗಳಲ್ಲಿ ತರಬೇತಿ ಕೇಂದ್ರಗಳನ್ನು ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಯೋಜನೆಯ ಮಾರ್ಗಸೂಚಿಯನ್ವಯ ನಿಯಮಾನುಸಾರ ಮತ್ತು ಪಾರದರ್ಶಕತೆಯನ್ವಯ ಅನುಷ್ಠಾನಗೊಳಿಸುವ ಷರತ್ತಿಗೊಳಪಟ್ಟು ಅನುಮೋದನೆ ನೀಡಲಾಗಿರುತ್ತದೆ.
ಈ ನಿಟ್ಟಿನಲ್ಲಿ ನಾಲ್ಕು ವರ್ಷದೊಳಗಿನ ಶ್ರವಣ ದೋಷವುಳ್ಳ ಮಕ್ಕಳ ಹಾಗೂ ಅವರ ತಾಯಂದಿರಿಗೆ ವಸತಿರಹಿತ ತರಬೇತಿ ಕೇಂದ್ರವನ್ನು ಸ್ಥಾಪಿಸಲು ಶ್ರವಣದೋಷವುಳ್ಳವರ ಪುನರ್ವಸತಿಗೆ ಸಂಬAಧಿಸಿದAತಹ ಚಿಕಿತ್ಸೆಗಳನ್ನು ನೀಡಲು ಚಿಕಿತ್ಸಾಲಯವನ್ನು ಹೊಂದಿರುವAತಹ ವಾಕ್ ಮತ್ತು ಶ್ರವಣ ತರಬೇತಿ ನೀಡುವಂತಹ ಮೂಲ ಸೌಕರ್ಯವನ್ನು ಹೊಂದಿರುವ ಸೂಕ್ತ ಕಟ್ಟಡ ವ್ಯವಸ್ಥೆ ಹಾಗೂ ಇತರೆ ಸಂಬAಧಿತ ಸೌಕರ್ಯವನ್ನು ಪಡೆದಿರುವ ಉತ್ತಮ ಸೇವೆಯನ್ನು ಸಲ್ಲಿಸುತ್ತಿರುವಂತಹ ಹಾಗೂ ಶ್ರವಣದೋಷವುಳ್ಳ ಮಕ್ಕಳು ಮತ್ತು ತಾಯಂದಿರಿಗೆ ತರಬೇತಿ ನೀಡುವ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಸಂಸ್ಥೆಗಳಿAದ ಪ್ರಸ್ತಾವನೆಯನ್ನು ಸಲ್ಲಿಸಲು ಅರ್ಜಿ ಆಹ್ವಾನಿಸಲಾಗಿರುತ್ತದೆ.
ಆಸಕ್ತಿಯುಳ್ಳ ಸ್ವಯಂ ಸಂಸ್ಥೆಯವರು ಅಗತ್ಯ ದಾಖಲಾತಿಗಳೊಂದಿಗೆ, ಫೆಬ್ರುವರಿ ೪ ರ ಒಳಗಾಗಿ ದ್ವಿ ಪ್ರತಿಯಲ್ಲಿ ಅರ್ಜಿಗಳನ್ನು ಜಿಲ್ಲಾ ವಿಕಲಚೇತನರ ಕಛೇರಿಗೆ ಸಲ್ಲಿಸಲು ತಿಳಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply