ಕೊಪ್ಪಳ, ಅ. ೦೭ : ಕೊಪ್ಪಳ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಆಟೋ ಸ್ಟಾö್ಯಂಡ್ ಬಳಿ ಅಕ್ಟೋಬರ್ ೦೧ ರಂದು ಮುಂಜಾನೆ ೦೬ ಗಂಟೆಗೆ ಸುಮಾರು ೩೮ ವಯಸ್ಸಿನ ಮಂಜುನಾಥ ತಂದೆ ನಂಜುಂಡಪ್ಪ ಎಂಬ ವ್ಯಕ್ತಿ ಮೃತಪಟ್ಟಿದ್ದು, ವಾರಸುದಾರರ ಪತ್ತೆಗೆ ಸಹರಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮಂಜುನಾಥ ತಂದೆ ನಂಜುಂಡಪ್ಪ ಎಂಬ ವ್ಯಕ್ತಿಯು ಒಂದೂವರೆ ತಿಂಗಳಿನಿಂದ ಅತಿಥಿ ಹೋಟೆಲ್ನಲ್ಲಿ ಕೆಲಸ ಮಾಡಿಕೊಂಡಿದ್ದನು. ಇತನ ಬಗ್ಗೆ ವಿಚಾರಿಸಿದಾಗ ಸ್ವಂತ ಊರು ಹೊಸಪೇಟೆಯ ಹತ್ತಿರ ಚಪ್ಪದರಹಳ್ಳಿ ಎಂದು, ತನ್ನ ಕಡೆಯವರು ಯಾರು ಇಲ್ಲವೆಂದು ತಿಳಿಸಿ, ಅತಿಥಿ ಹೋಟೆಲ್ನಲ್ಲೆ ಕೆಲಸ ಮಾಡಿಕೊಂಡು ರಾತ್ರಿ ಹೊತ್ತು ಅಲ್ಲಿಯೇ ಉಳಿದುಕೊಳ್ಳುತ್ತಿದ್ದನು. ಸೆ. ೩೦ ರಂದು ರಾತ್ರಿ ಹೋಟೆಲ್ನಲ್ಲೇ ಮಲಗಿಕೊಂಡಿದ್ದು, ಅಕ್ಟೋಬರ್ ೦೧ ರಂದು ಮುಂಜಾನೆ ೦೬ ಗಂಟೆ ಸುಮಾರಿಗೆ ಹೋಟೆಲಿನಿಂದ ಎದ್ದು, ಹೋಟೆಲ್ನ ಮುಂದೆ ಇರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಒಳಗೆ ಹೋಗುವ ದಾರಿಯಲ್ಲಿರುವ ಆಟೋ ಸ್ಟಾö್ಯಂಡ್ ಬಳಿ ಮಲಗಿಕೊಂಡಿದ್ದನು, ಮಂಜುನಾಥನ್ನು ಎದ್ದೇಳಿಸಲು ಹೋದಾಗ ಅವನು ಮೃತಪಟ್ಟಿದ್ದು ಇರುತ್ತದೆ ಎಂದು ಕೊಪ್ಪಳ ನಗರದ ಅತಿಥಿ ಹೋಟೆಲ್ ಮ್ಯಾನೇಜರ್ ಅಶ್ವಥ ಹೂಲಿ ತಂದೆ ವಾಸುದೇವರಾವ್ ಎಂಬುವವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಕುರಿತು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿಯ ಚಹರೆ ವಿವರ ಇಂತಿದೆ. ಮೃತ ವ್ಯಕ್ತಿಯು ೫’೬ ಇಂಚು ಎತ್ತರ, ಸಾಧಾರಣ ಮೈಕಟ್ಟು, ಕಪ್ಪು ಮೈಬಣ್ಣ, ತಲೆಯಲ್ಲಿ ಕಪ್ಪು ಕೂದಲು ಇದ್ದು, ಮೃತನ ಮೈಮೇಲೆ ಕಪ್ಪು ಬಣ್ಣದ ಅರ್ಧ ತೋಳಿನ ಟೀಶರ್ಟ ಹಾಗೂ ನೀಲಿ ಬಣ್ಣ ಪ್ಯಾಂಟ್ ಇರುತ್ತದೆ. ಈ ಮೃತ ವ್ಯಕ್ತಿಯ ಬಗ್ಗೆ ಯಾರಿಗಾದರೂ ಮಾಹಿತಿ ಇದ್ದಲ್ಲಿ ಅಥವಾ ವಾರಸುದಾರರಿದ್ದಲ್ಲಿ ಕೊಪ್ಪಳ ನಗರ ಪೊಲೀಸ್ ಠಾಣೆ ದೂ.ಸಂ: ೦೮೫೩೯-೨೨೦೩೩೩, ಪೊಲೀಸ್ ಇನ್ಸ್ಪೆಕ್ಟರ್ ಕೊಪ್ಪಳ ನಗರ ಠಾಣೆ ಮೊ.ಸಂ: ೯೪೮೦೮೦೩೭೪೫, ಪಿ.ಎಸ್.ಐ (ಕಾ&ಸು) ಕೊಪ್ಪಳ ನಗರ ಪೊಲೀಸ್ ಠಾಣೆ ಮೊ.ಸಂ: ೯೬೧೧೫೮೯೪೩೩ ಗೆ ಸಂಪರ್ಕಿಸಿ ಮಾಹಿತಿ ನೀಡುವಂತೆ ಪ್ರಕಟಣೆ ತಿಳಿಸಿದೆ.
Gadi Kannadiga > State > ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ