This is the title of the web page
This is the title of the web page

Please assign a menu to the primary menu location under menu

State

ಅರ್ಜಿ ಆಹ್ವಾನ


ಗದಗ ಜನೆವರಿ ೧೯: ಎಸ್‌ಬಿಐ, ಎಎಸ್‌ಎಫ್. ಗ್ರಾಮೀಣ ಸ್ವಯಂ ಉದ್ಯೋಗ ಮತ್ತು ತರಬೇತಿ ಸಂಸ್ಥೆ (ಗಿಟ್‌ಸರ್ಡ್) ಹುಲಕೋಟಿ ಗದಗ ಇವುಗಳ ಸಂಯುಕ್ತ ಆಶ್ರಯದಲ್ಲಿ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಕೆ ಉಚಿತ ತರಬೇತಿಯನ್ನು ಜನೆವರಿ ೨೩ ರಿಂದ ಆರಂಭಿಸಲಾಗುವುದು. ಆಸಕ್ತ ನಿರುದ್ಯೋಗಿ ಅಥವಾ ಸಾಮಾನ್ಯರು ೧೮ ರಿಂದ ೪೫ ವಯಸ್ಸಿನೊಳಗಿನ ಗ್ರಾಮೀಣ ಭಾಗದ ಯುವಕ/ ಯುವತಿಯರಿಗಾಗಿ ಅರ್ಜಿ ಆಹ್ವಾನಿಸಿದೆ. ಈ ತರಬೇತಿಯನ್ನು ಆರ್.ಸೆ.ಟಿ (ಗಿಟ್‌ಸರ್ಡ್) ಕೆ.ವಿ.ಕೆ ಆವರಣ ಹುಲಕೋಟಿ ಸಂಸ್ಥೆಯಲ್ಲಿ ಆಯೋಜಿಸಲಾಗುವದು, ತರಬೇತಿಯು ಊಟ, ವಸತಿಯೊಂದಿಗೆ ಉಚಿತವಾಗಿರುತ್ತದೆ. ಮಹಿಳೆಯರಿಗೆ ಪ್ರತ್ಯೇಕ ವಸತಿ ಸೌಲಭ್ಯವಿರುತ್ತದೆ.
ತರಬೇತಿ ಪಡೆಯಲು ಇಚ್ಚಿಸುವವರು ಕಡ್ಡಾಯವಾಗಿ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರಬೇಕು ಮತ್ತು ಬಿ.ಪಿ.ಎಲ್ ರೇಶನ್ ಕಾರ್ಡ್ ಅಥವಾ ನರೇಗಾ ಕಾರ್ಡ್ ಹೊಂದಿರಬೇಕು., (ವಿದ್ಯಾರ್ಹತೆ, ಪೋಟೋ, ರೇಶನ್‌ಕಾರ್ಡ್, ಬ್ಯಾಂಕ್ ಪಾಸ್‌ಬುಕ್ (೨ ಸೆಟ್ ನಕಲು ಪ್ರತಿಗಳನ್ನು ಸಲ್ಲ್ಲಿಸಬೇಕು ) ಅರ್ಜಿ ಭರ್ತಿ ಮಾಡಿ ನಿರ್ದೇಶಕರು ಆರ್‌ಸೆಟಿ ಸಂಸ್ಥೆ, ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಆವರಣ, ಹುಲಕೋಟಿ, ಇವರಿಗೆ ಅರ್ಜಿ ಸಲ್ಲಿಸಬೇಕು, ಅಥವಾ ಅಗತ್ಯ ದಾಖಲೆಗಳೊಂದಿಗೆ ಆಸಕ್ತರು ನೇರವಾಗಿ ತರಬೇತಿ ಆರಂಭವಾಗುವ ದಿನದಂದು ಬರಬಹುದು, ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: ೯೪೮೦೮೮೦೨೦೧/ ೯೬೩೨೨೮೭೯೪೯/ ೯೪೪೮೮೭೪೪೧೨/ ೮೮೮೦೧೬೯೯೯೬ ಸಂಪರ್ಕಿಸಬಹುದಾಗಿದೆ.


Gadi Kannadiga

Leave a Reply