This is the title of the web page
This is the title of the web page

Please assign a menu to the primary menu location under menu

State

ಅರ್ಜಿ ಆಹ್ವಾನ


ಗದಗ ಮಾರ್ಚ ೧೩: ಗದಗ ಜಿಲ್ಲೆಯ ಗೃಹ ರಕ್ಷಕದಳದ ವಿವಿಧ ಘಟಕಗಳಲ್ಲಿ ಖಾಲಿ ಇರುವ ಒಟ್ಟು ೧೩೦ ಸ್ವಯಂ ಸೇವಕ ಗೃಹ ರಕ್ಷಕ ಸದಸ್ಯ ಸ್ಥಾನಗಳಿಗೆ ನೋಂದಣಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸೇವೆಯು ನಿಷ್ಕಾಮ ಸೇವೆಯಾಗಿದ್ದು ಯಾವುದೇ ರೀತಿಯ ಮಾಸಿಕ ಸಂಬಳ ಇರುವುದಿಲ್ಲ. ಜಿಲ್ಲೆಯ ಗೃಹ ರಕ್ಷಕ ದಳದ ಘಟಕಗಳಾದ ಗದಗ, ಮುಳಗುಂದ, ಶಿರಹಟ್ಟಿ , ಮುಂಡರಗಿ, ನರೇಗಲ್, ನರಗುಂದ, ರೋಣ, ಗಜೇಂದ್ರಗಡ , ಹೊಳೆ ಆಲೂರ ಹಾಗೂ ಲಕ್ಷ್ಮೇಶ್ವರ ಗದಗ ಜಿಲ್ಲೆಯ ಹಾಗೂ ಎಲ್ಲ ತಾಲೂಕಿನ ಅಭ್ಯರ್ಥಿಗಳು ಗದಗ ಜಿಲ್ಲಾ ಗೃಹರಕ್ಷಕ ದಳ ಕಚೇರಿ ಗದಗನಲ್ಲಿ ಅರ್ಜಿಗಳನ್ನು ಪಡೆಯಬಹುದು.
ಅರ್ಜಿಗಳನ್ನು ಮಾರ್ಚ ೨೦ ರೊಳಗಾಗಿ ಸಲ್ಲಿಸಬೇಕು. ನಗರದ ಜಿಲ್ಲಾ ಪೊಲೀಸ ಭವನದಲ್ಲಿ ಮಾರ್ಚ ೨೪ ರಂದು ಬೆ ೯ ಗಂಟೆಗೆ ಶಿರಹಟ್ಟಿ, ಮುಳಗುಂದ, ನರೇಗಲ್, ಮುಂಡರಗಿ, ನರಗುಂದ, ಗಜೇಂದ್ರಗಡ ಘಟಕಗಳ ಖಾಲಿ ಇರುವ ಗೃಹ ರಕ್ಷಕರ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸುವವರು ಸಂದರ್ಶನಕ್ಕೆ ಹಾಜರಾಗಬಹುದು ಹಾಗೂ ಮಾರ್ಚ ೨೫ ರಂದು ಬೆ ೯ ಗಂಟೆಗೆ ನಗರದ ಜಿಲ್ಲಾ ಪೊಲೀಸ ಭವನದಲ್ಲಿ ಲಕ್ಷ್ಮೇಶ್ವರ, ಗದಗ ಮಹಿಳಾ, ಗದಗ ಪುರುಷ ಘಟಕಗಳಲ್ಲಿ ಖಾಲಿ ಇರುವ ಗೃಹರಕ್ಷಕರ ಸದಸ್ಯತ್ವ ಕ್ಕೆ ಅರ್ಜಿ ಸಲ್ಲಿಸುವವರು ಹಾಜರಾಗಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಗದಗ ಜಿಲ್ಲಾ ಗೃಹ ರಕ್ಷಕ ದಳ ಸಮಾದೇಷ್ಟರ ಕಾರ್ಯಾಲಯ ದೂರವಾಣಿ ಸಂಖ್ಯೆ ೦೮೩೭೨-೨೨೦೨೦೩ ಗೆ ಸಂಪರ್ಕಿಸಬಹುದಾಗಿದೆ.


Gadi Kannadiga

Leave a Reply