This is the title of the web page
This is the title of the web page

Please assign a menu to the primary menu location under menu

State

ಅರ್ಜಿ ಆಹ್ವಾನ


ಗದಗ ಎಪ್ರಿಲ್ ೨೮: ಗದಗ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಗದಗ, ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ, ನರಗುಂದ ಮತ್ತು ಗಜೇಂದ್ರಗಡ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೌಲಾನಾ ಆಝಾದ ಮಾದರಿ ಶಾಲೆಗಳಿಗೆ ೨೦೨೩-೨೪ ನೇ ಸಾಲಿಗೆ ೬ ನೇ ತರಗತಿ ಒಟ್ಟು ೩೬೦ ವಿದ್ಯಾರ್ಥಿಗಳ ದಾಖಲಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದರಲ್ಲಿ ೭೫% ರಷ್ಟು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಹಾಗೂ ೨೫% ರಷ್ಟು ಇತರೇ ವರ್ಗದವರಿಗೆ ವಿತರಿಸಲಾಗುವುದು. ಅಂಗವಿಕಲ ವಿದ್ಯಾರ್ಥಿಗಳು, ವಿಶೇಷ ಗುಂಪಿಗೆ ಸೇರಿದ ಅಂದರೆ ಅನಾಥ ಮಕ್ಕಳು, ವಿಧವೆಯರ ಮಕ್ಕಳು, ಪೌರ ಕಾರ್ಮಿಕರ ಮಕ್ಕಳು ಇತ್ಯಾದಿಗಳಿಗೆ ೩% ರಷ್ಟು ಆಸನಗಳನ್ನು ಕಾಯ್ದಿರಿಸಲಾಗಿದೆ.
೬ ನೇ ತರಗತಿಗೆ ದಾಖಲಾತಿ ಬಯಸುವ ವಿದ್ಯಾರ್ಥಿಗಳು ೫ ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಕುಟುಂಬದ ವಾರ್ಷಿಕ ಆದಾಯ ರೂ. ೨.೫೦ ಲಕ್ಷ ಮೀರಿರಬಾರದು, ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಮೇ ೧೫ ಆಗಿದ್ದು , ಪರೀಕ್ಷೆಯು ಮೇ ೨೧ ರಂದು ಜರುಗಲಿದೆ. ಮೇ ೨೪ ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು. ಆಕ್ಷೇಪಣೆ ಸಲ್ಲಿಸಲು ಮೇ ೨೫ ಕೊನೆಯ ದಿನವಾಗಿದೆ. ಅಂತಿಮ ಆಯ್ಕೆ ಪಟ್ಟಿಯನ್ನು ಮೇ ೨೬ ರಂದು ಸಲ್ಲಿಸಲಾಗುವುದು. ಮೇ ೨೭ ರಂದು ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗಲಿದೆ . ಹೆಚ್ಚಿನ ಮಾಹಿತಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಗದಗ ಹಾಗೂ ಆಯಾ ತಾಲೂಕಿನ ಮೌಲಾನಾ ಆಜಾದ್ ಮಾದರಿ ಶಾಲೆಯ ಮುಖ್ಯೋಪಾಧ್ಯಾಯರನ್ನು ಸಂಪರ್ಕಿಸಬಹುದಾಗಿದೆ.
ಅಲ್ಪಸಂಖ್ಯಾತರ ಕೆಳಕಂಡ ಮಾಹಿತಿ ಕೇಂದ್ರಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ. ಮುಂಡರಗಿ- ತಾ.ಪಂ. ಆವರಣ – ೦೮೩೭೧-೨೬೨೯೧೧ ; ೦೮೩೭೨-೨೯೭೪೯೪ ಮೌಲಾನಾ ಆಝಾದ ಭವನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಗದಗ – ೦೮೩೭೨-೨೬೭೪೯೪, ತಾ.ಪಂ. ಆವರಣ ರೋಣ- ೦೮೩೮೧-೨೬೭೨೫೮ , ತಹಶೀಲ್ದಾರ ಕಾರ್ಯಾಲಯ ರೂಂ.ನಂ. ೨೦, ನರಗುಂದ – ೦೮೩೭೭-೨೪೫೪೧೧, – ಶಿರಹಟ್ಟಿ ತಾ.ಪಂ. ಹತ್ತಿರ ೦೮೪೮೭-೨೪೨೮೧೦ .

 


Leave a Reply