ಗದಗ ಎಪ್ರಿಲ್ ೨೯: ಗದಗ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಗದಗ ಮತ್ತು ಮುಂಡರಗಿ ತಾಲೂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ ೨೦೨೩-೨೪ ನೇ ಸಾಲಿಗೆ ೬ ನೇ ತರಗತಿ ಒಟ್ಟು ೧೭೦ ವಿದ್ಯಾರ್ಥಿಗಳ ದಾಖಲಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದರಲ್ಲಿ ೭೫% ರಷ್ಟು ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಹಾಗೂ ೨೫% ರಷ್ಟು ಇತರೇ ವರ್ಗದವರಿಗೆ ವಿತರಿಸಲಾಗುವುದು. ಅಂಗವಿಕಲ ವಿದ್ಯಾರ್ಥಿಗಳು, ವಿಶೇಷ ಗುಂಪಿಗೆ ಸೇರಿದ ಅಂದರೆ ಅನಾಥ ಮಕ್ಕಳು, ವಿಧವೆಯರ ಮಕ್ಕಳು, ಪೌರ ಕಾರ್ಮಿಕರ ಮಕ್ಕಳು ಇತ್ಯಾದಿಗಳಿಗೆ ೩% ರಷ್ಟು ಆಸನಗಳನ್ನು ಕಾಯ್ದಿರಿಸಲಾಗಿದೆ.
೬ನೇ ತರಗತಿಗೆ ದಾಖಲಾತಿ ಬಯಸುವ ವಿದ್ಯಾರ್ಥಿಗಳು ೫ ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು ಹಾಗೂ ಕುಟುಂಬದ ವಾರ್ಷಿಕ ಆದಾಯ ರೂ. ೨.೫೦ ಲಕ್ಷ ಮೀರಿರಬಾರದು, ಅರ್ಜಿಗಳನ್ನು ಆನ್‌ಲೈನ್ hಣಣಠಿs://sevಚಿsiಟಿಜhu.ಞಚಿಡಿಟಿಚಿಣಚಿಞಚಿ.gov.iಟಿ (ಸೇವಾಸಿಂಧೂ) ಮೂಲಕ ಮೇ ೧೩ ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಗದಗ ಇವರನ್ನು ಸಂಪರ್ಕಿಸಬಹುದಾಗಿದೆ.
ಪ್ರವೇಶ ಪರೀಕ್ಷೆಯು ಮೇ ೨೧ ರಂದು ಜರುಗಲಿದ್ದು, ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಮೇ ೨೫ ರಂದು ಪ್ರಕಟಿಸಲಾಗುವುದ. ಆಕ್ಷೇಪಣೆ ಸಲ್ಲಿಸಲು ಮೇ ೩೦ ಕೊನೆಯ ದಿನವಾಗಿದ್ದು , ಅಂತಿಮ ಆಯ್ಕೆ ಪಟ್ಟಿಯನ್ನು ಮೇ ೩೧ ರಂದು ಪ್ರಕಟಿಸಲಾಗುವುದು. ಜೂನ್ ೧ ರಿಂದ ದಾಖಲಾತಿ ಪ್ರಕ್ರಿಯೆ ಪ್ರಾರಂಭವಾಗುವುದು.
ಅಲ್ಪಸಂಖ್ಯಾತರ ಮಾಹಿತಿ ಕೇಂದ್ರಗಳಲ್ಲಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ. : ೦೮೩೭೧-೨೬೨೯೧೧ ತಾಲೂಕ ಪಂಚಾಯತಿ ಆವರಣ, ಮುಂಡರಗಿ; ೦೮೩೭೨-೨೯೭೪೯೪ ಮೌಲಾನಾ ಆಝಾದ ಭವನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಗದಗ ; ೦೮೩೮೧-೨೬೭೨೫೮ ತಾಲೂಕ ಪಂಚಾಯತಿ ಆವರಣ, ರೋಣ ; ೦೮೩೭೭-೨೪೫೪೧೧ ತಹಶೀಲ್ದಾರ ಕಾರ್ಯಾಲಯ ರೂ.ನಂ:೨೦, ನರಗುಂದ ; ೦೮೪೮೭-೨೪೨೮೧೦ ತಾಲೂಕ ಪಂಚಾಯತ ಹತ್ತಿರ, ಶಿರಹಟ್ಟಿ.
Gadi Kannadiga > State > ಅರ್ಜಿ ಆಹ್ವಾನ
ಅರ್ಜಿ ಆಹ್ವಾನ
Suresh29/04/2023
posted on
More important news
ಯಮನಪ್ಪ ಧರನಾಯಕ್ ನಿಧನ
02/06/2023
ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ಮಹಿಳೆ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ವ್ಯಕ್ತಿ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023
ಮಹಿಳೆ ಮೃತ: ವಾರಸುದಾರರ ಪತ್ತೆಗಾಗಿ ಮನವಿ
31/05/2023