This is the title of the web page
This is the title of the web page

Please assign a menu to the primary menu location under menu

State

ಅರ್ಜಿ ಆಹ್ವಾನ


ಗದಗ ಮೇ ೧೫: ೨೦೨೩-೨೪ ನೇ ಸಾಲಿನ ಗದಗ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ೧೦ ತಿಂಗಳ ಅವಧಿಗೆ ೨-೫-೨೦೨೩ ರಿಂದ ೨೯-೨-೨೦೨೪ ರವರೆಗೆ ರೈತರ ಮಕ್ಕಳಿಗೆ ತೋಟಗಾರಿಕೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿತ್ತು. ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ತೋಟಗಾರಿಕೆ ತರಬೇತಿ ಕಾರ್ಯಕ್ರಮದ ಅವಧಿಯನ್ನು ಪರಿಷ್ಕರಿಸಿ ೧-೬-೨೦೨೩ ರಿಂದ ೩೦-೩-೨೦೨೪ ರವರೆಗೆ ಆಯೋಜಿಸಲಾಗಿದೆ. ಅಭ್ಯರ್ಥಿಗಳ ಸಂದರ್ಶನ ದಿನಾಂಕವನ್ನು ಮೇ ೨೫ ಕ್ಕೆ ನಿಗದಿಪಡಿಸಲಾಗಿದೆ. ಅರ್ಜಿಗಳನ್ನು ಸ್ವೀಕರಿಸಲು ಮೇ ೨೨ ಕೊನೆಯ ದಿನವಾಗಿದ್ದು ಸಂದರ್ಶನವನ್ನು ಮೇ ೨೫ ರಂದು ಬೆ ೧೧ ಗಂಟೆಗೆ ನಗರದ ಭೀಷ್ಮ ಕೆರೆ ಹತ್ತಿರದ ತೋಟಗಾರಿಕೆ ಉಪನಿರ್ದೇಶಕರ ಕಚೇರಿಯಲ್ಲಿ ನಡೆಸಲಾಗುವುದು. ಆಯ್ಕೆ ಪಟ್ಟಿಯನ್ನು ಮೇ ೨೯ ರಂದು ಪ್ರಕಟಿಸಲಾಗುವುದು. ಅರ್ಜಿಯನ್ನು ಇಲಾಖೆಯ ವೆಬ್ ಸೈಟ್ hಣಣಠಿs://hoಡಿಣiಛಿuಟಣuಡಿeಜiಡಿ.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಅಥವಾ ತೋಟಗಾರಿಕೆ ಕಚೇರಿಯಲ್ಲಿ ಪಡೆಯಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ಜಿಲ್ಲೆಯ ಸಹಾಯಕ ತೋಟಗಾರಿಕೆ ನಿರ್ದೇಶಕರು ( ರಾಜ್ಯ ವಲಯ) ಮತ್ತು ತಾಲೂಕು ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ.


Leave a Reply