ಗದಗ ಮೇ ೧೭: ಅಪೇರಲ್ ಟ್ರೆöÊನಿಂಗ್ ಆಂಡ್ ಡಿಸೈನ್ ಸೆಂಟರ್ , (ಎ.ಟಿ.ಡಿ.ಸಿ) ಹಾಗೂ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ ಗದಗ ಇವರ ಸಹಭಾಗಿತ್ವದಲ್ಲಿ ಸರ್ಕಾರದ ಸ್ವಾತಂತ್ರö್ಯ ಅಮೃತ ಮಹೋತ್ಸವ ಮುನ್ನಡೆ ಯೋಜನೆಯಡಿ ಹಿಂದುಳಿದ ವರ್ಗಕ್ಕೆ ಸೇರಿದ ಅಭ್ಯರ್ಥಿಗಳಿಗೆ ಕೌಶಲ್ಯಭಿವೃದ್ಧಿ ತರಬೇತಿ ಕಾರ್ಯಕ್ರಮಗಳಾದ ೬ ತಿಂಗಳ ಫ್ಯಾಶನ್ ಡಿಸೈನರ್ (೧೨ ನೇ ತರಗತಿ) ಹಾಗೂ ೩ ತಿಂಗಳ ಸೆಲ್ಫ್ ಎಂಪ್ಲಾಯಡ್ ಟೇಲರ್ (೮ ನೇ ತರಗತಿ ) ಉಚಿತ ಹೊಲಿಗೆ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಸಲ್ಲಿಸುವವರು ಗದಗಜಿಲ್ಲೆಯ ನಿವಾಸಿಯಾಗಿರಬೇಕು. ೧೮ ರಿಂದ ೩೫ ವರ್ಷ ವಯೋಮಾನದವರಾಗಿರಬೇಕು. ಕನಿಷ್ಟ ೮ ನೇ ತರಗತಿ ಹಾಗೂ ಗರಿಷ್ಟ ೧೨ ನೇ ತರಗತಿ ಪಾಸಾಗಿರಬೇಕು. ಹಿಂದುಳಿದ ವರ್ಗಕ್ಕೆ ಸೇರಿದ ಮೇಲಿನ ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅಪೇರಲ್ ಟ್ರೆöÊನಿಂಗ್ ಆಂಡ್ ಡಿಸೈನ್ ಸೆಂಟರ್ ( ಎ.ಟಿ.ಡಿ.ಸಿ.) ೧ ನೇ ಮಹಡಿ, ಕುಷ್ಟಗಿ ಬಿಲ್ಡಿಂಗ್, ಪಾಲಾ ಬಾದಾಮಿ ರಸ್ತೆ ಬೆಟಗೇರಿ ಗದಗ ಈ ವಿಳಾಸಕ್ಕೆ ದೃಢೀಕೃತ ದಾಖಲಾತಿಗಳ ೩ ಪ್ರತಿಗಳೊಂದಿಗೆ ಹಾಗೂ ಇತ್ತೀಚಿನ ೬ ಭಾವಚಿತ್ರದೊಂದಿಗೆ ಮೇ ೩೧ ರೊಳಗೆ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ ೯೮೪೪೨೩೬೦೩೦ ಸಂಪರ್ಕಿಸಬಹುದಾಗಿದೆ.
Gadi Kannadiga > State > ಅರ್ಜಿ ಆಹ್ವಾನ
ಅರ್ಜಿ ಆಹ್ವಾನ
Suresh17/05/2023
posted on
More important news
ಪ್ರತಿಬಂಧಕಾಜ್ಞೆ ಜಾರಿ
08/06/2023