This is the title of the web page
This is the title of the web page

Please assign a menu to the primary menu location under menu

State

ಅರ್ಜಿ ಆಹ್ವಾನ


ಗದಗ ಜುಲೈ ೨೦ : ೨೦೨೩-೨೪ ನೇ ಸಾಲಿನಲ್ಲಿ ವಿಶೇಷ ಘಟಕ ಯೋಜನೆಯಡಿ ಕುರಿ/ ಮೇಕೆ ಸಾಕಾಣಿಕೆ ಯೋಜನೆ, ವಲಸೆ/ ಅರೆ ವಲಸೆ ಕುರಿಗಾರರಿಗೆ ನೀಡಿರುವ ಸಂಚಾರಿ ಟೆಂಟ್ ( ಕಿಟ್ ) ಮತ್ತು ಇನ್ನಿತರೆ ಪರಿಕರಗಳ ವಿತರಣೆ ಯೋಜನೆ ಹಾಗೂ ೨೦೨೨-೨೩ ನೇ ಸಾಲಿನ ಅಮೃತ ಸ್ವಾಭಿಮಾನಿ ಕುರಿಗಾಹಿ ಯೋಜನೆಗಳ ಫಲಾನುಭವಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿ. ಬೆಂಗಳೂರು ಇದರಲ್ಲಿ ನೋಂದಣಿಯಾದ ಗದಗ ಜಿಲ್ಲೆಯ ಚಾಲ್ತಿಯಲ್ಲಿರುವ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಸದಸ್ಯತ್ಯ ಹೊಂದಿರುವ ೧೮ ರಿಂದ ೬೦ ವರ್ಷ ವಯೋಮಿತಿಯೊಳಗಿನ ಮಹಿಳಾ ಮತ್ತು ಪುರುಷ ಕುರಿ/ ಮೇಕೆ ಸಾಕಾಣಿದಾರರು ಅರ್ಜಿಗಳನ್ನು ಜುಲೈ ೨೭ ರೊಳಗೆ ಆಯಾ ತಾಲೂಕಿನ ಸಹಾಯಕ ನಿರ್ದೇಶಕರುಗಳಿಗೆ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು , ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿ, ಗದಗ ಪಶು ಆಸ್ಪತ್ರೆ ಆವರಣ ಗದಗ ಇವರನ್ನು ಕಚೇರಿ ವೇಳೆಯಲ್ಲಿ ( ದೂರವಾಣಿ ಸಂಖ್ಯೆ ೯೪೮೦೧೩೧೪೭೫, ೯೬೬೩೫೭೦೮೪೨) ಸಂಪರ್ಕಿಸಬಹುದಾಗಿದೆ.


Leave a Reply