This is the title of the web page
This is the title of the web page

Please assign a menu to the primary menu location under menu

State

ಅರ್ಜಿ ಆಹ್ವಾನ


ಗದಗ ಅಗಸ್ಟ ೩:ಗದಗ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಮುಂಡರಗಿ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ ವಸತಿ ಕಾಲೇಜಿಗೆ ಪ್ರಸಕ್ತ ಸಾಲಿಗೆ ವಿಜ್ಞಾನ ವಿಭಾಗ (ಪಿ.ಸಿ.ಎಂ.ಬಿ) ಹಾಗೂ ವಾಣಿಜ್ಯ ವಿಭಾಗದ (ಸಿ.ಇ.ಬಿ.ಎ) ಪ್ರಥಮ ಪಿ.ಯು.ಸಿ. ಆಂಗ್ಲ ಮಾಧ್ಯಮ ವಸತಿ ಕಾಲೇಜು ಪ್ರವೇಶಕ್ಕೆ ಪ್ರತಿ ವಿಭಾಗಕ್ಕೆ ೬೦ ವಿದ್ಯಾರ್ಥಿಗಳ ದಾಖಲಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಸದರಿ ಕಾಲೇಜಿನ ಪ್ರವೇಶಕ್ಕೆ ಅರ್ಜಿಗಳನ್ನು ಸಲ್ಲಿಸುವ ದಿನಾಂಕವನ್ನು ೧೦.೦೮.೨೦೨೩ರ ವರೆಗೆ ಮುಂದುವರೆಸಿ ಪ್ರಕಟಣೆಯನ್ನು ಹೊರಡಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಪ್ರಾಂಶುಪಾಲರು, ಅಲ್ಪಸಂಖ್ಯಾತರ ಮೊರಾರ್ಜಿದೇಸಾಯಿ ವಸತಿಶಾಲೆ. ಮುಂಡರಗಿ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


Leave a Reply