ಗದಗ ಅಗಸ್ಟ ೩೦: ೨೦೨೩-೨೪ ನೇ ಸಾಲಿಗೆ ರೈತರಿಗೆ ಗೋಡಂಬಿ ಬೆಳೆ ಬೆಳೆಯಲು ಇಲಾಖೆ ಯೋಜನೆಯಡಿ ಮತ್ತು ಕೊಚ್ಚಿಯ ಗೇರು ಹಾಗೂ ಕೋಕೊ ನಿರ್ದೇಶನಾಲಯದ ಪ್ರಾಯೋಜಕತ್ವದಲ್ಲಿ ಉಚಿತವಾಗಿ ಕಸಿ ಮಾಡಿದ ಗೋಡಂಬಿ ಸಸಿಗಳನ್ನು ವಿತರಿಸಲು ರೈತರಿಂದ ಅರ್ಜಿ ಅಹ್ವಾನಿಸಲಾಗಿದೆ.
ರೋಣ/ಗಜೇಂದ್ರಗಡ ತಾಲ್ಲೂಕಿನ ವಿವಿಧ ಭಾಗದ ರೈತರು ಕೆಂಪು ಮಣ್ಣಿನಲ್ಲಿ ಗೋಡಂಬಿ/ಗೇರು ಬೆಳೆಯನ್ನು ಯಶಸ್ವಿಯಾಗಿ ಬೆಳೆದು ಉತ್ತಮ ಇಳುವರಿ ಪಡೆಯುತ್ತಿದ್ದಾರೆ. ಇಲಾಖೆಯಿಂದ ಪ್ರಸಕ್ತ ಸಾಲಿಗೆ ತಾಲೂಕಿನ ರೈತರಿಗೆ ಗೋಡಂಬಿ/ಗೇರು ಬೆಳೆ ಬೆಳೆಯಲು ಕೊಚ್ಚಿಯ ಗೇರು ಹಾಗೂ ಕೋಕೊ ನಿರ್ದೇಶನಾಲಯದ ಪ್ರಾಯೋಜಕತ್ವದಲ್ಲಿ ಆಸಕ್ತ ರೈತರಿಗೆ ನಿರ್ದೇಶನಾಲಯದಿಂದ ಉಚಿತ ಗೋಡಂಬಿ/ಗೇರು ಗಿಡಗಳನ್ನು ವಿತರಿಸಲಾಗುವುದು. ಗೋಡಂಬಿ ಸಸಿಗಳನ್ನು ಪಡೆಯಲಿಚ್ಚಿಸುವ ರೈತರು ನಿಗದಿತ ನಮೂನೆಯ ಅರ್ಜಿ, ಪಹಣೆ ಪತ್ರಿಕೆ, ಆಧಾರ ಕಾರ್ಡ್ ಝರಾಕ್ಸ್, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್ ಹಾಗೂ ಮಣ್ಣು ಮತ್ತು ನೀರಿನ ಪರೀಕ್ಷೆಯ ವರದಿಗಳೊಂದಿಗೆ ಸಪ್ಟಂಬರ-೮ ರೊಳಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ಕಛೇರಿ ರೋಣದಲ್ಲಿ ಅರ್ಜಿ ಸಲ್ಲಿಸಬೇಕೆಂದು, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ಗಿರೀಶ ಅ ಹೊಸೂರ ತಿಳಿಸಿದ್ದಾರೆ.
Gadi Kannadiga > State > ಅರ್ಜಿ ಆಹ್ವಾನ
ಅರ್ಜಿ ಆಹ್ವಾನ
Suresh30/08/2023
posted on
More important news
ಬೆಳಗಾವಿಯ ಹುಡುಗರ ಸಾಹಸ ” ಪರ್ಯಾಯ”
18/09/2023