This is the title of the web page
This is the title of the web page

Please assign a menu to the primary menu location under menu

State

ಅರ್ಜಿ ಆಹ್ವಾನ


ಗದಗ ಸೆಪ್ಟೆಂಬರ್ ೧೧: ೨೦೨೩-೨೪ನೇ ಸಾಲಿನಲ್ಲಿ ಹೊಯ್ಸಳ ಮತ್ತು ಕೆಳದಿ ಚನ್ನಮ್ಮ ಪ್ರಶಸ್ತಿ ಯೋಜನೆಯಡಿ ಜಿಲ್ಲಾ ಮಟ್ಟದ ಅಸಾಧಾರಣಾ ಪ್ರತಿಭಾ ಪುರಸ್ಕಾರಕ್ಕಾಗಿ ನಾವೀನ್ಯತೆ, ತಾರ್ಕಿಕ ಕ್ಷೇತ್ರಗಳಲ್ಲಿ ಅಸಾಧಾರಣಾ ಸಾಧನೆ ಮಾಡಿದ ಮಕ್ಕಳಿಗೆ ಜಿಲ್ಲಾ ಮಟ್ಟದಲ್ಲಿ ಅಸಾಧಾರಣ ಪ್ರತಿಭಾ ಪುರಸ್ಕಾರ ಪ್ರಶಸ್ತಿಯನ್ನು ನೀಡಲು ೫ ರಿಂದ ೧೮ ವರ್ಷದ ಒಳಗಿನ ವಯೋಮಿತಿಯೊಳಗಿರುವ ಮಕ್ಕಳಿಗೆ ಪ್ರತಿ ಕ್ಷೇತ್ರದಲ್ಲಿ ಇಬ್ಬರು ಮಕ್ಕಳಂತೆ ಒಟ್ಟು ೪ ಮಕ್ಕಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುವುದು. ಆಯ್ಕೆಯಾದ ಪ್ರತಿ ಮಗುವಿಗೆ ತಲಾ ರೂ.೧೦,೦೦೦/- ನಗದು ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುತ್ತಿದೆ. ಅಸಾಧಾರಣ ಸಾಧನೆ ಮಾಡಿದ ಮಕ್ಕಳು ಅಸಾಧಾರಣಾ ಪ್ರತಿಭಾ ಪುರಸ್ಕಾರ ಪ್ರಶಸ್ತಿಗೆ ಅರ್ಜಿ ಸಲ್ಲಿಸಬೇಕು. ಸೆಪ್ಟೆಂಬರ್ ೨೦ ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.
ನಾವೀನ್ಯತೆ ತಾರ್ಕಿಕ ಈ ಕ್ಷೇತ್ರಗಳಲ್ಲಿ ತಮಗೆ ಸಂಬಂಧಿಸಿದ ಒಂದು ಕ್ಷೇತ್ರಕ್ಕೆ ಮಾತ್ರ ಆಯ್ಕೆ ಮಾಡಿಕೊಳ್ಳುವುದು. ಪ್ರತಿಭೆಯನ್ನುಹೊಂದಿರುವ ಬಗ್ಗೆ ಪ್ರಮುಖ ದಿನಪತ್ರಿಕೆಯಲ್ಲಿ ಪ್ರಕಟಗೊಂಡಿರುವ ಪತ್ರಿಕೆ ತುಣುಕುಗಳನ್ನು ಲಗತ್ತಿಸುವುದು. ಅಂತರ ರಾಷ್ಟ್ರೀಯ ಮಟ್ಟದಲ್ಲಿ/ ರಾಷ್ಟ್ರ ಮಟ್ಟದಲ್ಲಿ/ ರಾಜ್ಯ ಮಟ್ಟದಲ್ಲಿ/ ಜಿಲ್ಲಾ ಮಟ್ಟದಲ್ಲಿ/ತಾಲೂಕಾ ಮಟ್ಟದಲ್ಲಿ ಭಾಗವಹಿಸಿರುವ ಪ್ರಶಸ್ತಿ/ಪ್ರಮಾಣ ಪತ್ರಗಳನ್ನು ಲಗತ್ತಿಸಬೇಕು. ಸಾಧಿಸಿರುವ ಪ್ರತಿಭೆಯನ್ನು ಸಮರ್ಥಿಸಲು ಸಂಬಂಧಿಸಿದ ಕ್ಷೇತ್ರದ ಛಾಯಾ ಚಿತ್ರ ಲಗತ್ತಿಸುವುದು.ಆಯ್ಕೆ ಮಾಡುವ ಕ್ಷೇತ್ರದ ಬಗ್ಗೆ ನಾಲ್ಕು ಸಾಲುಗಳಲ್ಲಿ ಮಾಹಿತಿ ಒದಗಿಸುವುದು. ಪ್ರಶಸ್ತಿಗಾಗಿ ಆಯ್ಕೆ ಮಾಡುವ ಮಕ್ಕಳು ಕನಿಷ್ಠ ೫ ವರ್ಷ ಕರ್ನಾಟಕ ರಾಜ್ಯದಲ್ಲಿ ನೆಲಸಿರತಕ್ಕದ್ದು. ಈ ಬಗ್ಗೆ ಸ್ವಯಂ ದೃಡೀಕರಣ ಪಡೆಯುವುದು. ಪ್ರಶಸ್ತಿಗೆ ಅರ್ಜಿ ಸಲ್ಲಿಸಿದ ನಂತರ ಮಗು ಮರಣ ಹೊಂದಿದಲ್ಲಿ ಆ ಮಗು ಪ್ರಶಸ್ತಿಗೆ ಅರ್ಹವಾಗಿದ್ದಲ್ಲಿ ಮರಣೋತ್ತರ ಪ್ರಶಸ್ತಿಗೆ ಪರಿಗಣಿಸಬಹುದಾಗಿದೆ.
ಅರ್ಜಿದಾರರು ೫ ರಿಂದ ೧೮ ವರ್ಷದೊಳಗಿನವರಾಗಿರಬೇಕು. (ಜುಲೈ ೩೧ ಕ್ಕೆ) ವಯಸ್ಸಿನ ಬಗ್ಗೆ ಜನನ ಪ್ರಮಾಣ ಪತ್ರವನ್ನು ಪತ್ರಾಂಕಿತ ಅಧಿಕಾರಿಗಳಿಂದ ಧೃಡಿಕರಣ ಮಾಡಿಸಿದ ಪ್ರತಿ ಲಗತ್ತಿಸಬೇಕು. ಹಿಂದಿನ ವರ್ಷಗಳಲ್ಲಿ ಜಿಲ್ಲಾ ಮಟ್ಟದಲ್ಲಿ ಅಸಾಧಾರಣ ಪ್ರಶಸ್ತಿ ಪಡೆದ ಮಕ್ಕಳಿಗೆ ಪುನಃ ಪ್ರಶಸ್ತಿ ನೀಡಲು ಅವಕಾಶವಿರುವುದಿಲ್ಲ.ಅರ್ಜಿಯನ್ನು ದ್ವಿಪ್ರತಿಯಲ್ಲಿ ಸಲ್ಲಿಸಬೇಕು.
ಅರ್ಜಿ ಹಾಗೂ ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕೊಠಡಿ ಸಂಖ್ಯೆ:೦೦೬, ಜಿಲ್ಲಾ ಆಡಳಿತ ಭವನ, ಗದಗ-೫೮೨೧೦೧ ದೂರವಾಣಿ ಸಂಖ್ಯೆ:೦೮೩೭೨-೨೨೦೭೧೧ ಸಂಪರ್ಕಿಸಬಹುದಾಗಿದೆ.


Leave a Reply