This is the title of the web page
This is the title of the web page

Please assign a menu to the primary menu location under menu

State

ಅರ್ಜಿ ಆಹ್ವಾನ


ಗದಗ ಸೆಪ್ಟೆಂಬರ್ ೨೯: ೨೦೨೨ ನೇ ಡಿಸೆಂಬರ್ ಮಾಹೆಯಲ್ಲಿ ನಡೆಯಲಿರುವ ವಿಶೇಷ ಸಂಗೀತ ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್ ೧ ರಿಂದ ಪ್ರಾರಂಭಿಸಲಾಗುವುದು. ಜ್ಯೂನಿಯರ್ , ಸೀನಿಯರ್ , ವಿದ್ವತ್ ಪೂರ್ವ ಹಾಗೂ ವಿದ್ವತ್ ಅಂತಿಮ ದರ್ಜೆಯ ಪರೀಕ್ಷೆಗಳಿಗೆ ಅಭ್ಯರ್ಥಿಗಳು ತಿತಿತಿ.ssಟಛಿ.ಞಚಿಡಿಟಿಚಿಣಚಿಞಚಿ.gov.iಟಿ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು. ಎಸ್.ಎಸ್.ಎಲ್.ಸಿ. ಅಂಕಪಟ್ಟಿಯಲ್ಲಿರುವಂತೆ ಅಥವಾ ಶಾಲಾ ದಾಖಲಾತಿಯಲ್ಲಿರುವಂತೆ ಮಾಹಿತಿಯನ್ನು ಸಲ್ಲಿಸಬೇಕು. ಅಂಧ ವಿದ್ಯಾರ್ಥಿಗಳು ಜಿಲ್ಲಾ ವೈದ್ಯಾಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ , ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಸಕ್ಷಮ ಪ್ರಾಧಿಕಾರದಿಂದ ಪಡೆದ ಜಾತಿ ಪ್ರಮಾಣ ಪತ್ರದ ಆರ್ ಡಿ. ಸಂಖ್ಯೆ ಪಾಸ್‌ಪೋರ್ಟ ಅಳತೆಯ ೪ ಭಾವಚಿತ್ರಗಳೊಂದಿಗೆ ಗೆಜೆಟೆಡ್ ಅಧಿಕಾರಿಗಳಿಂದ ದೃಢೀಕರಿಸಿದ ನಕಲು ಪ್ರತಿಗಳು ಹಾಗೂ ಮೂಲ ಪ್ರತಿಯ ಒಂದು ಸೆಟ್ ನ್ನು ಆನ್ ಲೈನ್ ಫಾರ್ಮನೊಂದಿಗೆ ಲಗತ್ತಿಸಿ ಮುಖ್ಯ ಅಧೀಕ್ಷಕರು ಪಂಚಾಕ್ಷರ ಗವಾಯಿಗಳ ಸಂಗೀತ ಪಾಠಶಾಲೆ ವೀರೇಶ್ವರ ಪುಣ್ಯಾಶ್ರಮ ಗದಗ ಇವರಿಗೆ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ ೨೦ ಆಗಿರುತ್ತದೆ. ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ ೨೫ ಆಗಿದೆ. ಸಂಬಂಧಿಸಿದ ಅರ್ಜಿ ಪ್ರತಿ ಅಭ್ಯರ್ಥಿಗಳ ಸೂಚನೆಗಳು ಮತ್ತು ಪರೀಕ್ಷೆಯ ಮಾರ್ಗಸೂಚಿ ಇಲಾಖಾ ವೆಬ್ ಸೈಟ್ ನಲ್ಲಿ ಲಭ್ಯವಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ಶ್ರೀಮತಿ ಕೆ.ಎಸ್. ಹೂಲಗೇರಿ , ಉಪನ್ಯಾಸಕರು ( ನೋಡಲ್ ಅಧಿಕಾರಿಗಳು ) ಮೊಬೈಲ್ ಸಂಖ್ಯೆ ೮೬೬೦೨೨೫೮೧೫ ಹಾಗೂ ಕೆ.ಪಿ. ಸಾಲಿಮಠ ಉಪನ್ಯಾಸಕರು, ( ಮುಖ್ಯ ಅಧೀಕ್ಷಕರು ) ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ , ಗದಗ ಮೊಬೈಲ್ ಸಂಖ್ಯೆ ೮೭೬೨೪೮೭೬೯೧ ಇವರನ್ನು ಸಂಪರ್ಕಿಸಬಹುದಾಗಿದೆ.


Gadi Kannadiga

Leave a Reply