This is the title of the web page
This is the title of the web page

Please assign a menu to the primary menu location under menu

State

ಅರ್ಜಿ ಆಹ್ವಾನ


ಗದಗ ಡಿಸೆಂಬರ್ ೬: ಗದಗ ಜಿಲ್ಲೆಯಲ್ಲಿ ೨೦೨೨-೨೩ ನೇ ಸಾಲಿನ ಹಾಲು ಉತ್ಪಾದಕರಿಗೆ ಉತ್ತೇಜನ ಕಾರ್ಯಕ್ರಮದ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ಉಳಿಕೆ ಅನುದಾನದಲ್ಲಿ ಒಂದು ಮಿಶ್ರತಳಿ ಹಸು / ಸುಧಾರಿತ ತಳಿ ಎಮ್ಮೆ ಘಟಕ ಮತ್ತು ೧೦+೧ ಕುರಿ/ಮೇಕೆ ಘಟಕ ಅನುಷ್ಟಾನಗೊಳಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಒಂದು ಮಿಶ್ರ ತಳಿ ಹಸು / ಸುಧಾರಿತ ತಳಿ ಎಮ್ಮೆ ಘಟಕದಲ್ಲಿ ೦೧ ಮಿಶ್ರ ತಳಿ ಹಸು ಅಥವಾ ೦೧ ಸುಧಾರಿತ ತಳಿ ಎಮ್ಮೆಯನ್ನು ವಿತರಿಸಲಾಗುವುದು, ಸದರಿ ಘಟಕದ ವೆಚ್ಚ ರೂ. ೬೦,೦೦೦/-ಇದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ (ಶೇ.೯೦) ರೂ. ೫೪೦೦೦/- ಸಹಾಯಧನ ಮತ್ತು (ಶೇ.೧೦) ರೂ.೬೦೦೦/- ಫಲಾನುಭವಿಗಳ ವಂತಿಕೆ ಅಥವಾ ಬ್ಯಾಂಕ್‌ನಿಂದ ಸಾಲದೊಂದಿಗೆ ಅನುಷ್ಟಾನಗೊಳಿಸಲಾಗುವುದು. ೧೦+೧ ಕುರಿ/ಮೇಕೆ ಘಟಕದಲ್ಲಿ ೧೦ ಕುರಿ/ಮೇಕೆ ಮತ್ತು ೦೧ ಟಗರು ಅಥವಾ ೦೧ ಹೋತವನ್ನು ವಿತರಿಸಲಾಗುವುದು, ಸದರಿ ಘಟಕದ ವೆಚ್ಚ ರೂ. ೬೬೦೦೦/-ಇದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ (ಶೇ.೯೦) ರೂ. ೫೯೪೦೦/- ಸಹಾಯಧನ ಮತ್ತು (ಶೇ.೧೦) ರೂ.೬೬೦೦/- ಫಲಾನುಭವಿಗಳ ವಂತಿಕೆ ಅಥವಾ ಬ್ಯಾಂಕ್ ನಿಂದ ಸಾಲದೊಂದಿಗೆ ಅನುಷ್ಟಾನಗೊಳಿಸಲಾಗುವುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ ೨೦ ಆಗಿದೆ.
ಅರ್ಜಿಗಳಿಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕುಗಳ ಮುಖ್ಯಪಶು ವೈದ್ಯಾಧಿಕಾರಿಗಳು(ಆಡಳಿತ) ಪಶು ಆಸ್ಪತ್ರೆ, ಗದಗ/ ಮುಂಡರಗಿ/ ನರಗುಂದ/ ರೋಣ/ ಗಜೇಂದ್ರಗಡ/ ಶಿರಹಟ್ಟಿ/ ಲಕ್ಷೆ÷್ಮÃಶ್ವರ ಕಛೇರಿಗಳಿಗೆ ಸಂಪರ್ಕಿಸಲು ಮತ್ತು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply