ಗದಗ ಮೇ ೧೨: ೨೦೨೩-೨೪ ನೇ ಸಾಲಿನ ಶೈಕ್ಷಣಿಕ ಅವಧಿಗೆ ಕೈಮಗ್ಗ ಮತ್ತು ಜವಳಿ ತಂತ್ರಜ್ಞಾನದಲ್ಲಿ ಲ್ಯಾಟರಲ್ ಎಂಟ್ರಿ ಮುಖಾಂತರ ನೇರವಾಗಿ ೦೨ ನೇ ವರ್ಷದ ಡಿಪ್ಲೋಮಾ (ಡಿ.ಹೆಚ್.ಟಿ.ಟಿ) ಕೋರ್ಸ ಪ್ರವೇಶಕ್ಕಾಗಿ ಗದಗ-ಬೆಟಗೇರಿಯ ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ -೧೨, ಸೇಲಂ ( ತಮಿಳುನಾಡು )ನ ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆ -೧೦, (ಆಂದ್ರಪ್ರದೇಶ ನೆಲ್ಲೂರು ಜಿಲ್ಲೆ) ವೆಂಕಟಗಿರಿ ಎಸ್.ಪಿ.ಕೆ.ಎಂ.ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆ –೩ ಹಾಗೂ (ಕೇರಳ) ಕಣ್ಣೂರು ಭಾರತೀಯ ಕೈಮಗ್ಗ ತಂತ್ರಜ್ಞಾನ ಸಂಸ್ಥೆಗಳಲ್ಲಿ ೨ ಅಭ್ಯರ್ಥಿಗಳು ಒಟ್ಟಾರೆ ೨೭ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ವ್ಯಾಸಂಗದ ಸಮಯದಲ್ಲಿ ಮಾರ್ಗಸೂಚಿಯ ಪ್ರಕಾರ ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳು ರೂ.೨,೫೦೦/- ರಂತೆ ಶಿಷ್ಯವೇತನ ನೀಡಲಾಗುವುದು ಹಾಗೂ ಆಯ್ಕೆಯಾದ ಅಭ್ಯರ್ಥಿಗಳಿಗೆ ಆಯಾಯ ಐ.ಐ.ಹೆಚ್.ಟಿ. ನಿಯಮಾನುಸಾರ ವಸತಿ ನಿಲಯದ ಸೌಲಭ್ಯವನ್ನು ಕಲ್ಪಿಸಲಾಗುವುದು.
ವಿದ್ಯಾರ್ಹತೆ : ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರದೊಂದಿಗೆ ೧೦+೨ ( ಪಿಯು) ಪರೀಕ್ಷೆಯಲ್ಲಿ ಅಥವಾ ಯಾವುದೇ ಜವಳಿ ವಿಭಾಗದ ವೃತ್ತಿಪರ ವಿಭಾಗದಲ್ಲಿ ೧೦+೨ ( ಪಿಯು) ಪರೀಕ್ಷೆಯಲ್ಲಿ ಅಥವಾ ೧೦ನೇ ತರಗತಿ ತೇರ್ಗಡೆ+(೨ ವರ್ಷಗಳ ಐಟಿಐ) ತೇರ್ಗಡೆ ಅಥವಾ ೧೦+೨ ( ಪಿಯು) ಪಾಸ್+(೨ ವರ್ಷಗಳ ಐಟಿಐ) ತೇರ್ಗಡೆ ಹೊಂದಿರುವವರು ಎರಡನೇ ವರ್ಷದ ಡಿಪ್ಲೋಮಾ ಕೋರ್ಸ್ಗೆ ಪ್ರವೇಶ ಪಡೆಯಲು ಅರ್ಹರಾಗಿದ್ದಾರೆ.
ಜುಲೈ ೧ ಕ್ಕೆ ಅನ್ವಯಿಸುವಂತೆ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ೨೫ ವರ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ವಯೋಮಿತಿ ೨೭ ವರ್ಷ.ವಾಗಿರುತ್ತವೆ. ಅರ್ಹತಾ ಪರೀಕ್ಷೆಯಲ್ಲಿ ಗಳಿಸಿರುವ ಕ್ರೊಡೀಕೃತ ಅಂಕಗಳು ಮೆರಿಟ್ ಲೆಕ್ಕಾಚಾರಕ್ಕೆ ಆಧಾರವಾಗಿರುತ್ತವೆ.
ಅರ್ಹ ಅಭ್ಯರ್ಥಿಗಳನ್ನು ಆಯಾ ಡಿಪ್ಲೋಮಾ ಸಂಸ್ಥೆಗಳಲ್ಲಿ ಕೋರ್ಸ ಪ್ರವೇಶ ಕುರಿತಂತೆ ಕೌನ್ಸಿಲಿಂಗ್‌ಗಾಗಿ ಕರೆಯಲಾಗುವುದು. ಆಸಕ್ತಿ ಇರುವ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಮತ್ತು ಅರ್ಜಿ ಫಾರಂಗಳಿಗಾಗಿ ಪ್ರಾಂಶುಪಾಲರು, ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪೂರ, ಗದಗ-ಬೆಟಗೇರಿ ದೂರವಾಣಿ ಸಂ:೦೮೩೭೨-೨೯೭೨೨೧ ಮೊಬೈಲ್ ಸಂಖ್ಯೆ: ೯೪೪೮೬೪೪೦೭೪ ಅಥವಾ ಆಯಾ ಜಿಲ್ಲೆಯ ಜಂಟಿ/ಉಪ/ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಪಂಚಾಯತ್, ಇವರುಗಳನ್ನು ಸಂಪರ್ಕಿಸಿ ಪಡೆಯಬಹುದಾಗಿದೆ.ಅರ್ಜಿಗಳನ್ನು hಣಣಠಿs://ಞhಣigಚಿಜಚಿg.ಚಿಛಿ.iಟಿ/ಐಚಿಣeಡಿಚಿಟeಟಿಣಡಿಥಿಚಿಜmissioಟಿಜಿoಡಿm.ಠಿಜಜಿ ಲಿಂಕ್ ಮೂಲಕ ಡೌನ್ ಲೋಡ ಮಾಡಿಕೊಂಡು ಮೇ ೩೧ ರೊಳಗೆ ಅಗತ್ಯ ದಾಖಲಾತಿಗಳೊಂದಿಗೆ ಪ್ರಾಂಶುಪಾಲರು, ಕರ್ನಾಟಕ ಕೈಮಗ್ಗ ತಂತ್ರಜ್ಞಾನ ಸಂಸ್ಥೆ, ನರಸಾಪುರ,ಗದಗ-ಬೆಟಗೇರಿ-೫೮೨ ೧೦೨ ಇವರಿಗೆ ಸಲ್ಲಿಸಬಹುದಾಗಿದೆ.