ಬೆಳಗಾವಿ, ಮೇ.೧೫ : ೨೦೨೩-೨೪ನೇ ಸಾಲಿಗೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವತಿಯಿಂದ ಬೆಳಗಾವಿ ಜಿಲ್ಲೆಯಲ್ಲಿ ನಡೆಸಲಾಗುತ್ತಿರುವ ಮೊರಾರ್ಜಿ ದೇಸಾಯಿ/ಏಕಲವ್ಯ ಮಾದರಿ/ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ/ಕಾಲೇಜುಗಳ ಪ್ರಥಮ ಪಿಯುಸಿ ದಾಖಲಾತಿಗಾಗಿ, ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು ಹತ್ತಿರದ ಕ್ರೆöÊಸ್ ವಸತಿ ಶಾಲೆ/ಕಾಲೇಜಿನಲ್ಲಿ ಅರ್ಜಿ ನಮೂನೆ ಪಡೆದು, ನಿಗದಿತ
ನಮೂನೆಯಲ್ಲಿ ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಮೇ.೧೮ ೨೦೨೩ ರೊಳಗಾಗಿ ಅರ್ಜಿ ಸಲ್ಲಿಸಬಹುದು. ದಾಖಲಾತಿ ಪಡೆದ ವಿದ್ಯಾರ್ಥಿಗಳಿಗೆ ಊಚಿತ ಊಟ, ವಸತಿ ಹಾಗೂ ಇತರೆ ಸೌಲಭ್ಯ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ವಸತಿ ಶಾಲೆ/ಕಾಲೇಜುಗಳಲ್ಲಿ ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಅಪರ ನಿರ್ದೇಶಕರಾದ ಬಿ.ಕಲ್ಲೇಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ವಸತಿ ಶಾಲೆ/ಕಾಲೇಜುಗಳ ಪ್ರಥಮ ಪಿಯುಸಿ ದಾಖಲಾತಿಗಾಗಿ ಅರ್ಜಿ ಆಹ್ವಾನ
ವಸತಿ ಶಾಲೆ/ಕಾಲೇಜುಗಳ ಪ್ರಥಮ ಪಿಯುಸಿ ದಾಖಲಾತಿಗಾಗಿ ಅರ್ಜಿ ಆಹ್ವಾನ
Suresh15/05/2023
posted on
More important news
ವ್ಯಕ್ತಿ ನಾಪತ್ತೆ
08/06/2023
ಯುವತಿ ನಾಪತ್ತೆ
08/06/2023