ಕೊಪ್ಪಳ ಫೆಬ್ರವರಿ ೦೭ : ಜಿಲ್ಲೆಯ ಗಂಗಾವತಿ ನಗರಸಭೆಯಿಂದ ೨೦೨೨-೨೩ನೇ ಸಾಲಿನ ಡೇ-ನಲ್ಮ್ ಯೋಜನೆಯಡಿ ಕಂಪ್ಯೂಟರ್ ತರಬೇತಿಗಾಗಿ ಅರ್ಹ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಂಪ್ಯೂಟರ್ (ಜೂನಿಯರ್ ಸಾಫ್ಟ್ವೇರ್ ಡೆವಲೋಪರ್ ಎಸ್.ಎಸ್.ಸಿ/ಕ್ಯೂ೦೫೦೮/ ಡೊಮೆಸ್ಟಿಕ್ ಡಾಟಾ ಎಂಟ್ರಿ ಆಪ್ರೇಟರ್ ಎಸ್.ಎಸ್.ಸಿ/ಕ್ಯೂ೨೨೧೨) ತರಬೇತಿಗಾಗಿ ೨೪೦ ಗುರು ನಿಗದಿಪಡಿಸಲಾಗಿದ್ದು, ಗಂಗಾವತಿ ನಗರಸಭೆ ವ್ಯಾಪ್ತಿಯ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪಾಸಾದ ಸ್ಥಳೀಯ ಹಾಗೂ ಆಸಕ್ತ ವಿದ್ಯಾರ್ಥಿಗಳು ೦೭ ದಿನಗಳೊಳಗಾಗಿ ನಗರಸಭೆ ಕಾರ್ಯಾಲಯಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಕಾರ್ಯಾಲಯದ ಸಮಯದೊಳಗೆ ನಗರಸಭೆಯ ಡೇ-ನಲ್ಮ್ ವಿಭಾಗದ ಸಮುದಾಯ ಸಂಘಟಿಕರಾದ ಕಾಂತಮ್ಮ ಮೊ.ಸಂ: ೯೦೩೫೦೯೬೨೦೫ ಹಾಗೂ ವಿಷಯ ನಿರ್ವಾಹಕರಾದ ವನರಾಜ ಮೊ.ಸಂ: ೭೮೯೯೧೮೭೨೮೨, ಇವರಿಗೆ ಸಂಪರ್ಕಿಸುವಂತೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಗಂಗಾವತಿ: ಕಂಪ್ಯೂಟರ್ ತರಬೇತಿಗಾಗಿ ಅರ್ಜಿ ಆಹ್ವಾನ
More important news
ಲಿಂಗಾಯತ ಸಂಘಟನೆಯಿಂದ ಮಹಿಳಾ ದಿನಾಚರಣೆ
20/03/2023
ಶ್ರೀ ರೇಣುಕಾಚಾರ್ಯ ಜಯಂತಿ ಮಾ.೧೯ಕ್ಕೆ
17/03/2023
ಸಾರ್ವಜನಿಕರ ಗಮನಕ್ಕೆ
17/03/2023
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
17/03/2023
ಸಂತೆ ಕರ ಲಿಲಾವು
16/03/2023