This is the title of the web page
This is the title of the web page

Please assign a menu to the primary menu location under menu

State

ವಿಕಲಚೇತನರಿಗೆ ಉನ್ನತ ವ್ಯಾಸಂಗ ಶುಲ್ಕ ಮರುಪಾವತಿಗೆ ಅರ್ಜಿ ಆಹ್ವಾನ


ಕೊಪ್ಪಳ ಫೆಬ್ರವರಿ ೧೫ : ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ೨೦೨೨-೨೦೨೩ನೇ ಸಾಲಿಗೆ ಎಸ್.ಎಸ್.ಎಲ್.ಸಿ ನಂತರದ ತರಗತಿಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿರುವ ಅರ್ಹ ವಿಕಲಚೇತನ ವಿದ್ಯಾರ್ಥಿಗಳ ಶುಲ್ಕ ಮರುಪಾವತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ವಿಕಲಚೇತನ ವಿದ್ಯಾರ್ಥಿಗಳು ನಿಗದಿತ ಅರ್ಜಿ ನಮೂನೆಯನ್ನು ಭರ್ತಿಮಾಡಿ, ಅಂಗವಿಕಲರ ಗುರುತಿನ ಚೀಟಿ (ಯು.ಡಿ.ಐ.ಡಿ ಕಾರ್ಡ್), ಚಾಲ್ತಿಯಲ್ಲಿರುವ ಧೃಡೀಕರಿಸಿದ ಜಾತಿ ಪ್ರಮಾಣ ಪತ್ರ, ಧೃಡೀಕರಿಸಿದ ಚಾಲ್ತಿ ಬ್ಯಾಂಕ್ ಪಾಸ್‌ಬುಕ್, ಧೃಡೀಕರಿಸಿದ ಹಿಂದಿನ ವರ್ಷದ ಅಂಕಪಟ್ಟಿ, ಶುಲ್ಕ ಪಾವತಿಸಿದ ಮೂಲ ಪ್ರತಿ, ಆಧಾರ್ ಕಾರ್ಡ್ ಹಾಗೂ ತಮ್ಮ ಕಾಲೇಜು ಮುಖ್ಯಸ್ಥರ ದೃಡೀಕರಣದೂಂದಿಗೆ ಫೆಬ್ರವರಿ ೨೮ ರೂಳಗೆ ಕಛೇರಿ ಅವಧಿಯಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಾರ್ಯಾಲಯ ನಗರಾಭಿವೃದ್ಧಿ ಪ್ರಾಧಿಕಾರ ಕಾರ್ಯಾಲಯ ಆವರಣ ಕೂಠಡಿ ಸಂಖ್ಯೆ ೩೧, ೩೨ ರಿಲಾಯನ್ಸ್ ಪೆಟ್ರೋಲ್ ಬಂಕ್ ಎದುರುಗಡೆ ಹೊಸಪೇಟೆ ರೋಡ್, ಕೊಪ್ಪಳ ಇವರಿಗೆ ಸಲ್ಲಿಸಬೇಕು.
ಶುಲ್ಕಮರು ಪಾವತಿ ಮೂತ್ತವನ್ನು ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಜಮಾ ಮಾಡುವುದರಿಂದ ಪ್ರಚಲಿತ ಬ್ಯಾಂಕ್ ಖಾತೆಯ ವಿವರ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ನಮೂನೆಗಾಗಿ ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿಗಳ ಕಾರ್ಯಾಲಯಕ್ಕೆ ಅಥವಾ ತಾಲೂಕಾ ಎಂ.ಆರ್.ಡಬ್ಲ್ಯೂಗಳಾದ ಕೊಪ್ಪಳದ ಜಯಶ್ರೀ ಮೊ.ಸಂ: ೯೯೮೦೧೨೬೩೯೧, ಯಲಬುರ್ಗಾದ ಬಸಬನಗೌಡ ಮೊ.ಸಂ: ೯೯೬೪೮೦೩೦೪೭, ಗಂಗಾವತಿಯ ಮಂಜುಳಾ ಮೊ.ಸಂ: ೮೧೨೩೬೩೩೦೨೭, ಕುಷ್ಟಗಿಯ ಚಂದ್ರಶೇಖರ ಮೊ.ಸಂ: ೯೯೧೬೩೦೮೫೮೫ ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply